ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದೇಶಭವನ ಅಭಿವೃದ್ಧಿಗೆ ಕೋಟಿ

Last Updated 13 ಫೆಬ್ರುವರಿ 2011, 10:20 IST
ಅಕ್ಷರ ಗಾತ್ರ

ಕೊಪ್ಪ: ತಾಲ್ಲೂಕಿನ ಕುವೆಂಪು ಜನ್ಮಸ್ಥಳ ಹಿರೇಕೊಡಿಗೆಯಲ್ಲಿರುವ ಸಂದೇಶಭವನವನ್ನು ಕುಪ್ಪಳ್ಳಿಗೆ ಸರಿಸಾಟಿಯಾಗುವಂತೆ ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕ ಡಿ.ಎನ್.ಜೀವರಾಜ್ ಹೇಳಿದರು.

ತಾಲ್ಲೂಕಿನ ಹಿರೇಕೊಡಿಗೆ ಸಂದೇಶಭವನದ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಕುವೆಂಪು ಸಾಹಿತ್ಯದಲ್ಲಿ ಚಿತ್ರಿಸಲಾದ ಸಸ್ಯಸಂಕುಲ ಬೆಳಸುವ ಮೂಲಕ ಉದ್ಯಾನ, ವೀಕ್ಷಣಾ ಗೋಪುರ, ಸಂದೇಶ ಭವನ ಸೋರದಂತೆ  ಛಾವಣಿ, ಅತಿಥಿಗೃಹ, ಮೇಲ್ವಿ ಚಾರಕರ ವಸತಿಗೃಹ ಹಾಗೂ ಸಭಾಭವನವನ್ನು ಪ್ರಥಮ ಹಂತದಲ್ಲಿ ರೂ.1 ಕೋಟಿ ವೆಚ್ಚದಲ್ಲಿ ಅಭಿವೃದ್ದಿ ಪಡಿಸಲಾಗುವುದು ಎಂದರು.

ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಎಸ್.ಎನ್.ರಾಮಸ್ವಾಮಿ, ಜಿ.ಪಂ.ಉಪಾಧ್ಯಕ್ಷ ರಂಗ ನಾಥ್ ಸದಸ್ಯೆ ಸುಚೇತ ನರೇಂದ್ರ, ಶಿವಶಂಕರ್, ತಾ.ಪಂ.ಅಧ್ಯಕ್ಷೆ ಪ್ರೇಮಾ ದಾಮೋಧರ್ ಹಿರೆಕೊಡಿಗೆ ಗ್ರಾ.ಪಂ.ಅಧ್ಯಕ್ಷ ಹೆಚ್.ಎಂ.ರವಿಕಾಂತ್, ಸ್ಥಳದಾನಿ ಕೃಷ್ಣ ಮೂರ್ತಿಭಟ್, ಡಾ. ಅಲಿಗೆ ವಿವೇಕಾನಂದ, ಎ.ಇ.ಅಶೋಕ್ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT