ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪತ್ತು ದಾಖಲೀಕರಣ ಕಾರ್ಯ ಆರಂಭ

Last Updated 20 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ತಿರುವಂನತಪುರ (ಪಿಟಿಐ): ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿಯ ವಜ್ರ ವೈಢೂರ್ಯ ಮತ್ತು ಇತರ ಸಂತ್ತುಗಳ ಪಟ್ಟಿ ಮಾಡಿ ವೈಜ್ಞಾನಿಕವಾಗಿ ದಾಖಲೀಕರಿಸಲು ಸುಪ್ರೀಂಕೋರ್ಟ್ ನೇಮಕ ಮಾಡಿರುವ ತಜ್ಞರ ಸಮಿತಿಯು ಸೋಮವಾರ ತನ್ನ ಕಾರ್ಯ ಆರಂಭ ಮಾಡಿದೆ.

ಡಾ. ಎಂ. ವಿ ನಾಯರ್ ನೇತೃತ್ವದ ತಜ್ಞರ ಸಮಿತಿಯು ರಾಜ್ಯ ಒಡೆತನದ ಕೆಲ್ಟ್ರೊನ್ ಸಂಸ್ಥೆಯು ಒದಗಿಸಿರುವ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿ ಸಂಪತ್ತುಗಳ ದಾಖಲೀಕರಣ ಕಾರ್ಯವನ್ನು ಆರಂಭಿಸಿದೆ.

ಮೊದಲಿಗೆ ಎರಡು ನೆಲ ಮಾಳಿಗೆಯಲ್ಲಿರುವ ಬೆಳ್ಳಿ ಆಭರಣಗಳು ಮತ್ತು ಹಿತ್ತಾಳೆ ಪಾತ್ರೆಗಳ ದಾಖಲೀಕರಣ ನಡೆಯಲಿದೆ. ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಎಂ. ಎನ್. ಕೃಷ್ಣನ್ ನೇತೃತ್ವದ ದೇವಸ್ಥಾನ ಸಂಪತ್ತು ಸಮಿತಿಯ ಉಸ್ತುವಾರಿಯಲ್ಲಿ ಈ ಕಾರ್ಯ ನಡೆಯಲಿದೆ.

ಈ ಉಸ್ತುವಾರಿ ಸಮಿತಿಯು ಆರು ನೆಲಮಾಳಿಗೆಗಳ ಪೈಕಿ ನಾಲ್ಕನ್ನು ಕಳೆದ ವರ್ಷ ತೆರೆದಾಗ ಕೋಟ್ಯಂತರ ರೂಪಾಯಿಗಳ ಮೌಲ್ಯದ ವಜ್ರ, ವೈಢೂರ್ಯ, ಚಿನ್ನ, ಬೆಳ್ಳಿ ಪತ್ತೆಯಾಗಿದ್ದರಿಂದ ಪದ್ಮನಾಭಸ್ವಾಮಿ ದೇವಸ್ಥಾನವು ಜಗತ್ತಿನ ಗಮನ ಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT