ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪನ್ಮೂಲ ಹೆಚ್ಚಳಕ್ಕೆ ಕರೆ

Last Updated 23 ಸೆಪ್ಟೆಂಬರ್ 2011, 19:35 IST
ಅಕ್ಷರ ಗಾತ್ರ

ನೆಲಮಂಗಲ: ಗ್ರಾಮ ಪಂಚಾಯಿತಿಗಳು ಆರ್ಥಿಕವಾಗಿ ಸಬಲವಾಗಲು ಪಂಚಾಯಿತಿ ವ್ಯಾಪ್ತಿಯ ಪ್ರಮುಖ ಸ್ಥಳಗಳಲ್ಲಿ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸುವ ಮೂಲಕ ಸಂಪನ್ಮೂಲಗಳನ್ನು ಹೆಚ್ಚಿಸಿಕೊಳ್ಳಬೇಕು ಎಂದು ಶಾಸಕ ಎಂ.ವಿ.ನಾಗರಾಜು ಸಲಹೆ ಮಾಡಿದರು.

ತಾಲ್ಲೂಕಿನ ನರಸೀಪುರ ಗ್ರಾ.ಪಂ. ವತಿಯಿಂದ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಿದ ರಾಜೀವ್‌ಗಾಂಧಿ ಸೇವಾ ಕೇಂದ್ರದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.

ಗ್ರಾ.ಪಂ. ಅಧ್ಯಕ್ಷ ರಂಗಶಾಮಯ್ಯ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಇ.ಕೃಷ್ಣಪ್ಪ, ತಾ.ಪಂ.ಅಧ್ಯಕ್ಷ ಲಕ್ಷ್ಮೀನಾರಾಯಣ, ಜಿ.ಪಂ. ಸದಸ್ಯೆ ಸುನಂದಾ ಶಿವಕುಮಾರ್, ತಾ.ಪಂ. ಸದಸ್ಯೆ ಭಾಗ್ಯಮ್ಮ, ಹನುಮಕ್ಕ, ಉಪಾಧ್ಯಕ್ಷೆ ಪೂರ್ಣಿಮಾ ಇತರರು ಉಪಸ್ಥಿತರಿದ್ದರು.

`ಶ್ರೀಮಂತವಾದ ಕನ್ನಡದ ಮಡಿಲು~
ಕನ್ನಡ ತಾಯಿಯ ಮಡಿಲು ಮತ್ತೊಂದು ಜ್ಞಾನ ಪೀಠ ಪ್ರಶಸ್ತಿ ಪುರಸ್ಕಾರದಿಂದ ಶ್ರೀಮಂತವಾಗಿದೆ ಎಂದು ಡಾ.ಎ.ಒ.ಅವಲಮೂರ್ತಿ ಅವರು ಅಭಿಪ್ರಾಯಪಟ್ಟರು.

ನೆಲಮಂಗಲ ಸಮೀಪದ ಯಂಟಗಾನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕವು ಮತ್ತು ರಾಷ್ಟ್ರೀಯ ಹಸಿರು ಪಡೆ ಆಯೋಜಿಸಿದ್ದ ಪರಿಸರ ದಿನಾಚರಣೆ ಮತ್ತು ಕಂಬಾರರ ಅಭಿನಂದನಾ ಸಭೆಯಲ್ಲಿ ಅವರು ಮಾತನಾಡಿದರು.

ಎನ್.ಎಸ್.ಎಸ್ ಅಧಿಕಾರಿ ಬಿ.ಮಧುಸೂದನ್ ಕಂಬಾರರ ಬೆಳ್ಳಿಮೀನು ಕವನ ಸಂಕಲನದ `ನಾಡು ಕಾಡು~ `ಆ ಮರ ಈ ಮರ~, `ಅಜ್ಜ ಅಜ್ಜಿ~ ಕವನ ವಾಚಿಸಿ ಕಂಬಾರರನ್ನು ಅಭಿನಂದಿಸಿದರು. ಇಕೋ ಕ್ಲಬ್ ಅಧ್ಯಕ್ಷ ಜಿ.ಬಿ.ವೆಂಕಟೇಶ್, ವಿದ್ಯಾರ್ಥಿ ಹೇಮಲತಾ ಕಂಬಾರರ ಕಾವ್ಯಕೃತಿಗಳನ್ನು ಕುರಿತು ಮಾತನಾಡಿದರು.
ಉರಗ ಸ್ನೇಹಿ ಸ್ನೇಕ್ ಲೋಕಿ ಹಾವುಗಳ ಬಗ್ಗೆ ಮಾಹಿತಿ ನೀಡಿ ಅವುಗಳ ಸಂರಕ್ಷಣೆಯ ಜಾಗೃತಿ ಮೂಡಿಸಿದರು.

ಮುಖ್ಯಶಿಕ್ಷಕ ಡಿ.ಶ್ರೀನಿವಾಸಯ್ಯ, ಹಿರಿಯ ಉಪನ್ಯಾಸಕ ಗೋವಿಂದಯ್ಯ ವೇದಿಕೆಯಲ್ಲಿದ್ದರು. ಕಾಲೇಜಿನ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು. ಪರಿಸರ ಸಂರಕ್ಷಣೆಯ ಘೋಷಣಾ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಾ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಲಾಯಿತು.

ಕ್ರೀಡಾಪಟುಗಳ ಕಡೆಗಣನೆಗೆ ಖಂಡನೆ
ಹೊಸಕೋಟೆ: ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಮೈಸೂರಿನಲ್ಲಿ ನಡೆಯುವ ದಸರಾ ಕ್ರೀಡಾಕೂಟಕ್ಕೆ ಹಿರಿಯ ಕ್ರೀಡಾಪಟುಗಳನ್ನು ಕಡೆಗಣಿಸಿರುವುದನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಹಿರಿಯ ಕ್ರೀಡಾಪಟುಗಳ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಸಿ.ಷಣ್ಮುಗಂ ಖಂಡಿಸಿದ್ದಾರೆ.

`ಹಿರಿಯ ಕ್ರೀಡಾಪಟುಗಳಿಗೆ ಇಲಾಖೆ ಪ್ರೋತ್ಸಾಹಿಸುವ ಬದಲು ಈ ವರ್ಷ ದಿಢೀರನೆ ಯಾವುದೇ ಕಾರಣ ನೀಡದೆ ಅವರಿಗೆ ಏರ್ಪಡಿಸಿದ್ದ ನಾಲ್ಕು ಸ್ಪರ್ಧೆಯನ್ನು ರದ್ದು ಮಾಡಿದೆ. ಕ್ರೀಡಾ ಸಚಿವರು ಈ ಬಗ್ಗೆ ಪರಿಶೀಲಿಸಿ ಹಿರಿಯ ಕ್ರೀಡಾಪಟುಗಳು ನೇರವಾಗಿ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಅನವು ಮಾಡಿಕೊಟ್ಟು ಹಿರಿಯರಿಗೆ ಪ್ರೋತ್ಸಾಹಿಸಬೇಕು~ ಎಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT