ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪರ್ಕ ಕ್ರಾಂತಿಯ ಮೊದಲ ಹೆಜ್ಜೆ

Last Updated 21 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಪೋರ್ತ್‌ಕರ್ನೊ (ಇಂಗ್ಲೆಂಡ್)(ಪಿಟಿಐ): `ನೀವೆಲ್ಲ ಹೇಗಿದ್ದೀರಿ? ಇಲ್ಲಿ ಎಲ್ಲರೂ ಚೆನ್ನಾಗಿದ್ದೇವೆ~
`ಮುಂಬೈ ಪತ್ರಕರ್ತರ ಬಳಿ ನ್ಯೂಯಾರ್ಕ್ ಪತ್ರಕರ್ತರಿಗೆ ಸಂದೇಶ ಕಳುಹಿಸುವಂತೆ ಹೇಳಿ.~

`ಭಾರತದ ಪತ್ರಕರ್ತರು ಅಮೆರಿಕ ಪತ್ರಕರ್ತರಿಗೆ ಸಲಾಂ ಹೇಳುತ್ತಾರೆ. ಕೂಡಲೇ ಉತ್ತರಿಸಿ~
ಈ ಸಂಭಾಷಣೆಗಳು ನಡೆದಿದ್ದು ಬರೋಬ್ಬರಿ 141 ವರ್ಷಗಳ ಹಿಂದೆ. 1870ರ ಜೂನ್ 23ರಂದು  ಇಂಗ್ಲೆಂಡ್‌ನ ಅಟ್ಲಾಂಟಿಕ್ ಸಮುದ್ರ ತೀರದ ಕಾರ್ನ್‌ವಾಲ್‌ನ ಪೋರ್ತ್‌ಕರ್ನೊ ಕಣಿವೆಯಿಂದ ಹೊರಟ ಈ ಟೆಲಿಗ್ರಾಫ್ ಸಂದೇಶಗಳು ಐದೇ ನಿಮಿಷಗಳಲ್ಲಿ ಮುಂಬೈ ತಲುಪಿದ್ದವು.

ಎರಡೂ ತುದಿಯಲ್ಲಿ ಕುಳಿತ ತಂತ್ರಜ್ಞರು, ಅಧಿಕಾರಿಗಳಿಗೆ ಇನ್ನಿಲ್ಲದ ಸಂಭ್ರಮ. ಆ ಕಾಲಕ್ಕೇ ಅದು ಸಂಪರ್ಕ ಕ್ರಾಂತಿ. ದೂರಸಂಪರ್ಕ ಮತ್ತು ಸಂವಹನ ವ್ಯವಸ್ಥೆ ಇನ್ನೂ ಶೈಶವಾವಸ್ಥೆಯಲ್ಲಿರುವಾಗ ಬ್ರಿಟಿಷ್ ಆಡಳಿತ ಭಾರತ ಮತ್ತು ಇಂಗ್ಲೆಂಡ್ ನಡುವೆ ತ್ವರಿತ ಸಂಪರ್ಕ ಸಾಧಿಸಲೆಂದು ಸಮುದ್ರದಾಳದಲ್ಲಿ ಟೆಲಿಗ್ರಾಫ್ ಕೇಬಲ್ ಹಾಕಲಾಗಿತ್ತು.

ಭಾರತಕ್ಕೆ ಸಮುದ್ರದ ಮೂಲಕ ಕೇಬಲ್ ಅಳವಡಿಸಿದ ಈ ಪ್ರಯೋಗ ಯಶಸ್ವಿಯಾಗಿದ್ದು, ದೂರಸಂಪರ್ಕ ತಜ್ಞರಲ್ಲಿ ಭಾರಿ ಆತ್ಮವಿಶ್ವಾಸ ಮೂಡಿಸಿತು.

ಆನಂತರದಲ್ಲಿ ಪೋರ್ತ್‌ಕರ್ನೊ ಕಣಿವೆಯಿಂದ ಅಮೆರಿಕ ಸೇರಿದಂತೆ ಜಗತ್ತಿನ ಇತರ ದೇಶಗಳಿಗೆ ಸಮುದ್ರದ ಮೂಲಕ ಕೇಬಲ್ ಅಳವಡಿಸಲಾಯಿತು.

20ನೇ ಶತಮಾನದ ಉತ್ತರಾರ್ಧದಲ್ಲಿ ಈ ತಂತ್ರಜ್ಞಾನ ಪ್ರಸ್ತುತತೆ ಕಳೆದುಕೊಂಡರೂ, ದೂರಸಂಪರ್ಕ ಕ್ಷೇತ್ರದ ಬೆಳವಣಿಗೆಯಲ್ಲಿ ಮೈಲುಗಲ್ಲು ಎಂದೇ ಪರಿಗಣಿಸಲಾಗುತ್ತದೆ.

1970ರವರೆಗೂ ಪೋರ್ತ್‌ಕರ್ನೊ ಅಂತರರಾಷ್ಟ್ರೀಯ ಕೇಬಲ್ ಸಂವಹನ ವ್ಯವಸ್ಥೆಯ ಕೇಂದ್ರವಾಗಿತ್ತು. 1993ರವರೆಗೆ ಅಲ್ಲಿ ಸಂವಹನ ಕ್ಷೇತ್ರದಲ್ಲಿ ತರಬೇತಿ ನೀಡುವ ಕಾಲೇಜು ನಡೆಸಲಾಗುತ್ತಿತ್ತು.

ಪೋರ್ತ್‌ಕರ್ನೊದ ಟೆಲಿಗ್ರಾಫ್ ಕಟ್ಟಡವನ್ನು ಈಗ ವಸ್ತು ಸಂಗ್ರಹಾಲಯವಾಗಿ ಪರಿವರ್ತಿಸಲಾಗಿದೆ.
ಕೇಬಲ್ ಅಳವಡಿಸಿದ ನಂತರ ನಡೆದ ಸಂಭಾಷಣೆಯ ವಿವರ, ಆರಂಭದ ದಿನಗಳ ಕಾಮಗಾರಿಯ ವಿವರ ಎಲ್ಲವೂ ಅಲ್ಲಿ ಲಭ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT