ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪುಟ ರಚನೆಯಲ್ಲಿ ಮುಕ್ತ ಸ್ವಾತಂತ್ರ್ಯ: ಮೋದಿ ಬೇಡಿಕೆ

Last Updated 16 ಮೇ 2014, 20:03 IST
ಅಕ್ಷರ ಗಾತ್ರ

ನವದೆಹಲಿ: ತಮ್ಮ ನೇತೃತ್ವದಲ್ಲಿ ಬಿಜೆಪಿ ಅಭೂತಪೂರ್ವ ಸಾಧನೆಗೈದಿರು ವುದರಿಂದ ಹೃದಯ ತುಂಬಿದ ನರೇಂದ್ರ ಮೋದಿ ಅವರು ಈಗ ಅಪೇಕ್ಷಿಸುತ್ತಿರುವುದು ಸಂಪುಟ ರಚನೆಯಲ್ಲಿ ಸಂಪೂರ್ಣ ಸ್ವಾತಂತ್ರ್ಯ.

ಪಕ್ಷದ ಪ್ರಧಾನಿ ಅಭ್ಯರ್ಥಿಯಾದರೂ ಲೋಕಸಭಾ ಚುನಾವಣೆಯ ಟಿಕೆಟ್‌ ನೀಡಿಕೆ ವಿಷಯದಲ್ಲಿ ಮೋದಿ  ಯಾವುದೇ ರೀತಿಯ ಹಸ್ತಕ್ಷೇಪ ಮಾಡಿಲ್ಲ, ಸಂಪುಟ ರಚನೆಯಲ್ಲಿ ಇಲ್ಲವೆ ಯಾರಿಗೆ ಯಾವ ಖಾತೆ ನೀಡಬೇಕು ಎನ್ನುವ ವಿಷಯದಲ್ಲಿಯೂ ಯಾರಿಂದಲೂ ಹಸ್ತಕ್ಷೇಪ ನಡೆಯಕೂಡದು ಎಂಬುದು ಮೋದಿ ಬೇಡಿಕೆಯಾಗಿದೆ ಎಂದು ಪಕ್ಷದ ಕೆಲ ಹಿರಿಯ ನಾಯಕರು ತಿಳಿಸಿದ್ದಾರೆ.

ಹೊಸಬರಿಗೆ ಅವಕಾಶ: ಸರ್ಕಾರ ಶಕ್ತಿಶಾಲಿ ಎನಿಸುವ  ದಿಸೆಯಲ್ಲಿ ಆದಷ್ಟು ಹೊಸ ಹಾಗೂ ಯುವ ಮುಖಗಳಿಗೆ ಸಂಪುಟದಲ್ಲಿ ಅವಕಾಶ ನೀಡಬೇಕು ಎಂಬುದು ಮೋದಿ ಆಶಯವಾಗಿದೆ, ಈ ವಿಷಯದಲ್ಲಿ ಯಾವುದೇ ಮುಖಂಡರಿಂದ ಬರಬಹುದಾದ ಒತ್ತಡ  ತಂತ್ರಗಳನ್ನು ಮೋದಿ ಸಹಿಸಲಾರರು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT