ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪುಟ ಸಭೆಯಲ್ಲಿ ರಾಣಿ ಎಲಿಜಬೆತ್

Last Updated 18 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಅವರು ತಮ್ಮ ಆಳ್ವಿಕೆಯ ವಜ್ರಮಹೋತ್ಸವದ ಪ್ರಯುಕ್ತ ಮಂಗಳವಾರ ಬ್ರಿಟನ್ ಸಂಪುಟ ಸಭೆಗೆ ಹಾಜರಾಗಿ ಇತಿಹಾಸ ಸೃಷ್ಟಿಸಿದರು.

1781ರಿಂದ ಈಚೆಗೆ ಇದೇ ಮೊದಲ ಬಾರಿ ಸಂಪುಟ ಸಭೆಗೆ ಹಾಜರಾದ ಮೊದಲ ರಾಣಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಲಂಡನ್‌ನ ಪ್ರತಿಷ್ಠಿತ 10 ಡೌನಿಂಗ್ ಸ್ಟ್ರೀಟ್‌ಗೆ ಆಗಮಿಸಿದ 86 ವರ್ಷದ ರಾಣಿಯನ್ನು ಪ್ರಧಾನಿ ಡೇವಿಡ್ ಕೆಮರಾನ್ ಸ್ವಾಗತಿಸಿದರು.  ಪ್ರಧಾನಿ ಕುರ್ಚಿಯಲ್ಲಿ ಆಸೀನರಾದ ಎಲಿಜಬೆತ್ ಅಕ್ಕಪಕ್ಕದ ಕುರ್ಚಿಗಳನ್ನು ಕೆಮರಾನ್ ಮತ್ತು ವಿದೇಶಾಂಗ ಕಾರ್ಯದರ್ಶಿ ವಿಲ್ಲಿಯಂ ಹೇಗ್ ಅಲಂಕರಿಸಿದ್ದರು.

1717ರಲ್ಲಿ ದೊರೆ ಮೊದಲನೇ ಜಾರ್ಜ್ ಸಂಪುಟ ಸಭೆಗೆ ಹಾಜರಾಗುವ ಸಂಪ್ರದಾಯಕ್ಕೆ ತಡೆಯೊಡ್ಡಿದ್ದರು. ಅದಾದ ನಂತರ  1781ರಲ್ಲಿ ಮೂರನೇ ಜಾರ್ಜ್, ಶಾಂತಿ ಕಾಲದ ಸಂಪುಟ ಸಭೆಗೆ ಹಾಜರಾಗುವ ಮೂಲಕ ಸಂಪ್ರದಾಯ ಮುರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT