ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ಆ ಮಧುರ ಕ್ಷಣ

Last Updated 29 ಮೇ 2012, 19:30 IST
ಅಕ್ಷರ ಗಾತ್ರ

ಪ್ರತಿಯೊಬ್ಬ ಕಾಲೇಜು ವಿದ್ಯಾರ್ಥಿ ಜೀವನದಲ್ಲೂ ಹಾದು ಹೋಗುವ ಮಧುರ ಕ್ಷಣವದು. ನಿದ್ದೆಗೆಟ್ಟು, ಊಟಬಿಟ್ಟು, ಕಷ್ಟಪಟ್ಟು ಓದಿದ ಜೀವಗಳಿಗೆ ಪ್ರತಿಫಲ ಪಡೆಯುವ ದಿನವದು. ಕಾತರದಿಂದ ಕಾದ ಆ ಕ್ಷಣ ಇಂದು ನಮ್ಮದೇ ಎಂದಾಗ ಸಂತೋಷಕ್ಕೆ ಎಣೆ ಎಲ್ಲಿ.
ಕಾಲೇಜು ಘಟಿಕೋತ್ಸವದ ಸಂಭ್ರಮವೇ ಹಾಗಲ್ಲವೇ.

ಎಲ್ಲಿಂದಲೋ ಬಂದು ಒಂದೇ ಸೂರಿನಡಿ ಭವಿಷ್ಯದ ಬದುಕನ್ನು ಕಟ್ಟಿಕೊಂಡವರು ಒಮ್ಮೆಲೇ ದೂರವಾಗುವ ಸಮಯ. ಬದುಕು ಕಟ್ಟಿಕೊಳ್ಳುವ ಹಾದಿಯಲ್ಲಿ ಖುಷಿ ಒಂದೆಡೆಯಾದರೆ, ಮಿತ್ರರನ್ನು ಅಗಲುವ ಬೇಸರ ಮತ್ತೊಂದೆಡೆ. ಇಂಥ ಇಬ್ಬಗೆಯ ಭಾವಗಳಿಗೆ ಸಾಕ್ಷಿಯಾದವರು ಆಚಾರ್ಯ ತಾಂತ್ರಿಕ ಕಾಲೇಜಿನಲ್ಲಿ ಅಂತಿಮ ವರ್ಷವನ್ನು ಪೂರೈಸಿದ ಎಂಜಿನಿಯರಿಂಗ್ ಮತ್ತು ಎಂಬಿಎ ವಿದ್ಯಾರ್ಥಿಗಳು.

ಕಡುನೀಲಿ ಬಣ್ಣದ ಗೌನ್ ಮತ್ತು ಬಂಗಾರ ಬಣ್ಣದ ಟೋಪಿ ಧರಿಸಿದ ವಿದ್ಯಾರ್ಥಿಗಳ ಮುಖದಲ್ಲಿ ಸಾರ್ಥಕತೆಯ ಭಾವ ತುಂಬಿತ್ತು. ಪದವಿ ಪತ್ರ ಪಡೆದು ಒಟ್ಟಾಗಿ ಗ್ರೂಪ್ ಫೋಟೊಗೆ ಪೋಸು ನೀಡಿದಾಗ ಇದು ನಮ್ಮ ಕಡೆಯ ಭೇಟಿಯೋ ಎಂಬಂತೆ ಎಲ್ಲರ ಮುಖಗಳಲ್ಲೂ ವಿಷಾದದ ಭಾವ.

`ನನ್ನ ಜೀವನದಲ್ಲಿ ಇದು ಮರೆಯಲಾಗದ ದಿನ. ಗೆಳೆಯ, ಗೆಳೆತಿಯರೊಂದಿಗೆ ಹರಟುವ ಸಮಯವನ್ನು ಎಂದಿಗೂ ಮರೆಯಲಾರೆ. ಈ ಮಧುರ ಕ್ಷಣಗಳು ನಮ್ಮವಾಗುವಂತೆ ಅವಕಾಶ ಕಲ್ಪಿಸಿದ ಕಾಲೇಜಿಗೆ ಧನ್ಯನಾಗಿದ್ದೇನೆ~ ಎಂಬುದು ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದ ರಾಜೀವ್ ಮಾತು.

`ಕಾಲೇಜಿನ ಇಷ್ಟು ದಿನಗಳು ಇನ್ನು ನೆನಪು ಮಾತ್ರ. ನಮ್ಮ ಭವಿಷ್ಯಕ್ಕೆ ಉತ್ತಮ ಬುನಾದಿ ಹಾಕಿಕೊಟ್ಟ ಕಾಲೇಜಿನ ಉಪನ್ಯಾಸಕರಿಗೆ ಆಭಾರಿಯಾಗಿದ್ದೇನೆ~ ಎನ್ನುತ್ತಾ ನಗು ಬೀರಿದರು ಎಂಬಿಎ ಪದವಿ ಪಡೆದ ವಿದ್ಯಾರ್ಥಿನಿ ಎಂ. ಎನ್. ಅರ್ಚನಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT