ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ಈದ್ ಮಿಲಾದ್: ಭವ್ಯ ಮೆರವಣಿಗೆ

Last Updated 6 ಫೆಬ್ರುವರಿ 2012, 9:20 IST
ಅಕ್ಷರ ಗಾತ್ರ

ಬಾಗಲಕೋಟೆ: ಈದ್ ಮಿಲಾದ್ ಅಂಗವಾಗಿ ನಗರದಲ್ಲಿ ಮುಸ್ಲಿಂರು ಅದ್ದೂರಿ ಧಾರ್ಮಿಕ ಮೆರವಣಿಗೆ ನಡೆಯಿತು.
ನಗರದ ಹಳೆ ಅಂಜುಮನ್ ಸಂಸ್ಥೆ ಆವರಣದಿಂದ ಆರಂಭಗೊಂಡ ಜುಲೂಸ್ ಶರೀಫ್ ಮೆರವಣಿಗೆ ನಗರದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಪಂಕಾ ಮಸೀದಿಯ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಮುಕ್ತಾಯವಾಯಿತು.

ಮೆರವಣಿಗೆಯಲ್ಲಿ ಪಾಲ್ಗೊಂಡ ಸಾವಿರಾರು ಮುಸ್ಲಿಂರು ಸಾಂಪ್ರಾದಾಯಿಕ ನೃತ್ಯದೊಂದಿಗೆ ಹೆಜ್ಜೆ ಹಾಕಿದರು. ಧಾರ್ಮಿಕ ಬಾವುಟ ಪ್ರದರ್ಶನ ಮತ್ತು ಘೋಷಣೆಯೊಂದಿಗೆ ಮೆರವಣಿಗೆಗೆ ಮೆರಗು ನೀಡಿದರು. ಇದೇ ಸಂದರ್ಭದಲ್ಲಿ ಕುರಾನ್ ಪಠಣ ಮಾಡಲಾಯಿತು.

ಮೆರವಣಿಗೆಯಲ್ಲಿ ಪಂಕಾ ಮಸೀದಿ ಅಧ್ಯಕ್ಷ ಬಂದೇನವಾಜ ರಬಕವಿ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಬಿ.ಸೌದಾಗರ, ಸೀರತ್ ಕಮಟಿ ಅಧ್ಯಕ್ಷ ಇಮಾಮಜಾಫರ್ ಎ.ಬೇಪಾರಿ, ಅಂಜುಮನ್ ರಿಫಾಹೆ ಆಮ್ ಸಂಸ್ಥೆಯ  ಪ್ರೊ. ಎಂ.ಆರ್. ಇದ್ದಲಗಿ, ಆರ್.ಐ.ಇಳಕಲ್, ಎಂ.ಎಚ್.ತಹಶೀಲ್ದಾರ್, ಎನ್.ಟಂಕಸಾಲಿ, ಆರ್.ಎಚ್.ಪೆಂಡಾರ, ಕೆ.ಎಫ್. ಮುಲ್ಲಾ, ಜಿ.ಎಂ. ಮುಲ್ಲಾ, ಎ.ಕೆ.ಕಾಂಟ್ರಾಕ್ಟರ್, ಎಚ್.ಆರ್.ಅಥಣಿ, ಎಂ.ಡಿ.ಸಂದಿಮನಿ, ಸಿ.ಎ.ಯಂಡಿಗೇರಿ, ಅಯೂಬ್ ಪುಣೆಕರ, ಸಲೀಂ ಮೋಮಿನ, ಜಾಕೀರ ಡಿ.ಮೊಕಾಶಿ, ನೂರಸಾಬ ಕೆ.ಮಂಗಳೂರ, ಶಬ್ಬೀರ ಬಳೂತಿ ಮತ್ತಿತರರು ಪಾಲ್ಗೊಂಡಿದ್ದರು.

ಪೈಗಂಬರ್ ಜನ್ಮ ದಿನಾಚರಣೆ
ಅಮೀನಗಡ: ಕಮತಗಿ ಮತ್ತು ಅಮೀನಗಡ ಗ್ರಾಮಗಳಲ್ಲಿ ಮುಸ್ಲಿಂ ಬಾಂಧವರು ಇಂದು ಮೊಹಮ್ಮದ್ ಪೈಗಂಬರ್ ಜನ್ಮದಿನಾಚರಣೆ ನಿಮಿತ್ತ  ಭವ್ಯ ಮೆರವಣಿಗೆ ನಡೆಸಿದರು.

ಅಮೀನಗಡ ಅಂಜುಮನ್ ಇಸ್ಲಾಂ ಕಮಿಟಿ, ಶಿರತುಲ್ ಕಮಿಟಿ ಆಶ್ರಯದಲ್ಲಿ  ಮಸೀದಿಯಿಂದ ಪ್ರಾರಂಭವಾದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಬಾಲಕರು ಕುದರೆ ಮೇಲೆ ಕುಳಿತು ಸಂಭ್ರಮಿಸಿದರು.
ಮೆರವಣಿಗೆಯಲ್ಲಿ ಹಸಿರು ಬಣ್ಣದ ಧ್ವಜಗಳು ರಾರಾಜಿಸಿದವು. ತಾ.ಪಂ.ಸದಸ್ಯ ಸಯ್ಯದ್‌ಪೀರಾ ಖಾದ್ರಿ, ಗ್ರಾ.ಪಂ. ಸದಸ್ಯರಾದ ಎಚ್. ಎಂ. ಪಿರಜಾದೆ, ಯು.ಎಲ್. ಬೇಪಾರಿ, ಡಿ.ಪಿ. ಅತ್ತಾರ, ಎಫ್.ಎಚ್. ಮಸಳಿ, ದಾವಲಸಾಬ ಭಾಂಗಿ ಮೊದಲಾದವರು  ಭಾಗವಹಿಸಿದ್ದರು.

ಕಮತಗಿಯಲ್ಲಿ ಅಂಜುಮನ್ ಇಸ್ಲಾಂ ಕಮಿಟಿ ಆಶ್ರಯದಲ್ಲಿ ಹಜರತ್ ಮೊಹಮ್ಮದ್ ಪೈಗಂಬರ್ ಜನ್ಮ ದಿನಾಚರಣೆ ಕಾರ್ಯಕ್ರಮ ನಡೆಯಿತು.   ಮುಸ್ಲಿಂ ಬಾಂಧವರು ಮೆರವಣಿಗೆ ನಡೆಸಿದರು. ಗ್ರಾ.ಪಂ. ಸದಸ್ಯ ರಾಜೇಸಾಬ ಕೋಲ್ಹಾರ ಸೇರಿದಂತೆ ಅನೇಕರು ಭಾಗವಹಿಸಿದರು.

ಅನ್ನ ಸಂತರ್ಪಣೆ

ಇಳಕಲ್: ಪ್ರವಾದಿ ಮೊಹಮ್ಮದ್ ಪೈಗಂಬರ್ ಜನ್ಮ ದಿನವನ್ನು   ಮುಸ್ಲಿಂರು ಶ್ರದ್ಧಾ ಭಕ್ತಿಗಳಿಂದ ಆಚರಿಸಿದರು.
ಪ್ರವಾದಿ ಪೈಗಂಬರರ ಶಾಂತಿ ಸಂದೇಶಗಳನ್ನು ಹಾಡುತ್ತಾ ನಗರದ ಸಾವಿರಾರು ಮುಸ್ಲಿಂ ಬಾಂಧವರು ವಾರ್ಡ ನಂ.3 ರಲ್ಲಿಯ ಮಕಾನ್‌ದಿಂದ ನಗರದ ಪಶು ಆಸ್ಪತ್ರೆ, ಬನ್ನಿಕಟ್ಟಿ, ಪೋಲಿಸ್ ಗ್ರೌಂಡ್, 10 ನಂ ಶಾಲೆ, ಮಹಾಂತೇಶ ಚಿತ್ರಮಂದಿರ, ನಗರಸಭೆ, ಕಂಠಿ ವೃತ್ತ, ಗಾಂಧಿ ಚೌಕ, ಗೊರಬಾಳ ನಾಕಾ ಮಾರ್ಗವಾಗಿ ಸೈಯ್ಯದ್ ಷಾ ಹಜರತ್ ಮುರ್ತುಜಾ ಷಾ ಖಾದ್ರಿ ದರ್ಗಾಕ್ಕೆ ಮೆರವಣಿಗೆಯಲ್ಲಿ ಸಾಗಿದರು.

   ಮೆರವಣಿಯಲ್ಲಿ ದರ್ಗಾದ ಸಜ್ಜಾದ ನಸೀನ್ ಆಗಿರುವ ಸೈಯ್ಯದ್ ಮುರ್ತುಜಾ ಆರೀಫ್ ಉಲ್ ಖಾದ್ರಿ ಗುರುಗಳನ್ನು ಮೆರವಣಿಗೆಯುದ್ದಕ್ಕೂ ಕುದುರೆ ಮೇಲೆ ಸಾಗಿದರು. ಅಹಲೇ ಸುನ್ನತ್ ಜಮಾತೆ ಅಧ್ಯಕ್ಷ ಅಬ್ದುಲ್ ರಜಾಕ್ ತಟಗಾರ, ಲಾಲಹುಸೇನ್ ಮುದಗಲ್, ನಾಸೀರ್ ಕರ್ನೂಲ್, ಮೆಹಬೂಬ ಮಾಗಿ, ಬಾಹುದ್ಧಿನ್ ಖಾಜಿ, ಉಸ್ಮಾನಸಾಬ ತಟಗಾರ,  ಆರೀಫ್ ಫಣಿಬಂದ, ಸುಲೇಮಾನ ಚೋಪದಾರ ಸೇರಿದಂತೆ ಸಾವಿರಾರು ಮುಸ್ಲಿಂ ಬಾಂಧವರು ಪಾಲ್ಗೊಂಡಿದ್ದರು.

ಮೆರವಣಿಗೆ ಉದ್ದಕ್ಕೂ ಲಿಮ್ರಾ ವೆಲ್ಫೇರ್ ಅಸೋಶಿಯೇಶನ್ ವತಿಯಿಂದ ಪೈಗಂಬರರ ಜನ್ಮದಿನೋತ್ಸವ ನಿಮಿತ್ತ 1 ಕ್ವಿಂಟಲ್ ಸಿಹಿಯನ್ನು ಹಿಂದೂ ಬಾಂಧವರಿಗೆ ಹಂಚಿ, ಭಾವೈಕ್ಯತೆ ಮೆರೆದರು. ಜೊತೆಗೆ ತಾಲ್ಲೂಕಿನ 14 ಗ್ರಾಮಗಳ ಅನ್ನ ಸಂತರ್ಪಣೆ ಮಾಡಿದರು.

`ಪೈಗಂಬರ್ ತತ್ವ ಪಾಲಿಸಿ~
ಜಮಖಂಡಿ: ಇಸ್ಲಾಂ ಧರ್ಮ ಸಂಸ್ಥಾಪಕ ಮಹಮ್ಮದ ಪೈಗಂಬರ್ ಪ್ರತಿಪಾದಿಸಿದ್ದ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಧರ್ಮ ಪಾಲನೆ ಮಾಡಬೇಕು ಎಂದು ಮಾಜಿ ಕೇಂದ್ರ ಸಚಿವ ಸಿದ್ದು ನ್ಯಾಮಗೌಡ ಹೇಳಿದರು.
ಜಶ್ನೆ ಇದ-ಎ-ಮಿಲಾದುನ್ನಬಿ ಆಶ್ರಯದಲ್ಲಿ ಇಲ್ಲಿನ ಮೋಮಿನ ಗಲ್ಲಿಯಲ್ಲಿ ಭಾನುವಾರ ಏರ್ಪಡಿಸಿದ್ದ ಮಹಮ್ಮದ್ ಪೈಗಂಬರ್ ಜಯಂತ್ಯುತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ನಿವೃತ್ತ ಪ್ರಾಧ್ಯಾಪಕ ಎ.ಡಿ.ಝರತಾಘರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಸ್ಲಿಂ ಬಾಂಧವರನ್ನು ಎರಡನೇ ದರ್ಜೆ ನಾಗರಿಕರಂತೆ ಕಾಣುವುದು ನಿಲ್ಲಬೇಕು. ಇಸ್ಲಾಂ ಧರ್ಮಕ್ಕೆ ವಿರುದ್ಧವಾಗಿ ಯಾರೂ ನಡೆದುಕೊಳ್ಳಬಾರದು ಎಂದು ಸಮಾಜ ಬಾಂಧವರಲ್ಲಿ ಮನವಿ ಮಾಡಿದರು.

ವಕೀಲ ಎನ್.ಎಸ್.ದೇವರವರ, ಎಪಿಎಂಸಿ ಮಾಜಿ ಅಧ್ಯಕ್ಷ ಮುತ್ತಣ್ಣ ಹಿಪ್ಪರಗಿ, ಜಿ.ಪಂ. ಮಾಜಿ ಉಪಾಧ್ಯಕ್ಷ ಸುಶೀಲಕುಮಾರ ಬೆಳಗಲಿ, ನಗರಸಭೆ ಅಧ್ಯಕ್ಷ ಶ್ರೀಶೈಲ ರಾಂಬಳ್ಳಿ, ಉದ್ದಿಮೆದಾರ ಮಾಮೂನ ಪಾರತನಳ್ಳಿ, ಸಿಪಿಐ ಉಮೇಶ ಚಿಕ್ಕಮಠ ಮಾತನಾಡಿದರು.

ಆಜಾದ್ ಕೋ-ಆಪ್ ಸೊಸೈಟಿ ಅಧ್ಯಕ್ಷ ಅಲ್ತಾಫ ಐರಣಿ, ಜಮಖಂಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಡು ಮಾಳಿ, ನಜೀರ್ ಕಂಗನೊಳ್ಳಿ, ಸಮೀರ್ ಕಂಗನೊಳ್ಳಿ ವೇದಿಕೆಯಲ್ಲಿದ್ದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಮೌಲಾನಾ ಅಬುಸಾಲಿಯಾ ರಜ್ವಿ ಕುರಾನ ಪಠಣ ಮಾಡಿದರು.
ಎ.ಎಂ. ಕುಣಬಿ, ಆರ್.ಬಿ.ನಾಯಿಕೊಡೆ ನಿರೂಪಿಸಿದರು. ಡಾಲಾಯತ ವಂದಿಸಿದರು. ಇದಕ್ಕೂ ಮೊದಲು ಶಾಹಾಆಲಂ ಗೇಟ್‌ನಿಂದ ಡೌಲ್ವಿಯೊಂದಿಗೆ ಭವ್ಯ ಮೆರವಣಿಗೆ ಆರಂಭಿಸಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಧಾರ್ಮಿಕ ಕಾರ್ಯಕ್ರಮದ ಸ್ಥಳಕ್ಕೆ ಬರಲಾಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT