ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ಓಣಂ ಆಚರಣೆ

Last Updated 10 ಸೆಪ್ಟೆಂಬರ್ 2011, 9:30 IST
ಅಕ್ಷರ ಗಾತ್ರ

ಬಾಗಲಕೋಟೆ: ನಗರದ ಬಿವಿವಿ ಸಂಘದ ಪಿ. ಎಂ. ನಾಡಗೌಡ ಸ್ಮಾರಕ ದಂತ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಶುಕ್ರವಾರ `ಓಣಂ~ ಹಬ್ಬವನ್ನು  ಸಂಭ್ರಮದಿಂದ ಆಚರಿಸಿದರು.

ಬಿವಿವಿ ಸಂಘದ ನೂತನ ಸಭಾಂಗಣದಲ್ಲಿ  ಓಣಂ ಹಬ್ಬದ ಅಂಗವಾಗಿ ನಡೆದ  ಕಾರ್ಯಕ್ರಮವನ್ನು ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಸಿದ್ದಣ್ಣ ಶೆಟ್ಟರ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ದಂತ ವೈದ್ಯ ವಿದ್ಯಾರ್ಥಿಗಳು ಕೇರಳ ರಾಜ್ಯದ ನಾಡಹಬ್ಬವನ್ನು ಆಚರಣೆ ಮಾಡುವ ಮೂಲಕ ಜಿಲ್ಲೆಯ ಜನತೆಗೆ ಹಬ್ಬದ ವಿಶೇಷವನ್ನು ಪರಿಚಯಿಸುತ್ತಿರುವುದು ಶ್ಲಾಘನೀಯ ಎಂದರು.

ಔಷಧಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಐ. ಎಸ್. ಮುಚ್ಚಂಡಿ, ನರ್ಸಿಂಗ್ ಕಾಲೇಜಿನ  ಪ್ರಾಂಶುಪಾಲ ಡಾ. ನಾಗರಾಜಪ್ಪ, ಆಯುರ್ವೇದಿಕ್ ಕಾಲೇಜಿನ ಪ್ರಾಂಶುಪಾಳ ಡಾ. ಎನ್. ಬಿ. ಮಾಶೆಟ್ಟಿ, ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಶೀನಿವಾಸ ಎಸ್. ವನಕಿ, ವಿದ್ಯಾರ್ಥಿನಿಯರಾದ ಅಂಜು, ಜೆನ್ಸಿನ್, ಜೆನ್ಸಿನ್ ಆಬ್ಲಿನ್, ಜಾಜಿಜ್ ಜೇಮ್ಸ, ಅಭಿಲಾಷ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕೇರಳ ಸಂಸ್ಕೃತಿ ಕುರಿತಾದ ಭಾವಗೀತೆಯನ್ನು  ಸುಂದರೇಶನ್ ಹಾಡಿದರು. `ಮಹಾಬಲಿ~ ವೇಷಭೂಷಣ ಪ್ರದರ್ಶನಕ್ಕೆ ಮೆರಗು ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT