ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ‘ಫಲಪೂಜಾ’ ಕಾರ್ಯಕ್ರಮ

ವಿರೂಪಾಕ್ಷೇಶ್ವರ–ಪಂಪಾಂಬಿಕಾ ದೇವಿ ಸಾಂಪ್ರದಾಯಿಕ ನಿಶ್ಚಿತಾರ್ಥ
Last Updated 20 ಡಿಸೆಂಬರ್ 2013, 6:36 IST
ಅಕ್ಷರ ಗಾತ್ರ

ಹೊಸಪೇಟೆ: ಐತಿಹಾಸಿಕ ಪ್ರಸಿದ್ಧ ವಿಜಯನಗರ ಅರಸ ರಾಜಧಾನಿ ಹಂಪಿಯಲ್ಲಿ ಗುರುವಾರ ರಾತ್ರಿ ‘ಫಲಪೂಜಾ’ ಕಾರ್ಯಕ್ರಮ ಧಾರ್ಮಿಕ ವಿಧಿ ವಿಧಾನಗಳ ಅನ್ವಯ ಸಂಭ್ರಮ ದಿಂದ ಜರುಗಿತು.

ಪ್ರತಿ ವರ್ಷದಂತೆ ಈ ವರ್ಷವೂ ವಿರೂಪಾಕ್ಷೇಶ್ವರ ಹಾಗೂ ಪಂಪಾದೇವಿ ಅವರ ನಿಶ್ಚಿತಾರ್ಥದ ಸಂಭ್ರಮವನ್ನು ‘ಫಲಪೂಜಾ’ ಕಾರ್ಯಕ್ರಮದ ಹೆಸರಿ ನಲ್ಲಿ  ಆಚರಿಸಲಾಗುತ್ತಿದ್ದು, ವಧು–ವರನ ಕಡೆಯವರು ಸಂಪ್ರದಾಯ ಬದ್ಧವಾಗಿ ಆಚರಿಸಿದರು.

ವರನ ಕಡೆಯ ವರಾಗಿ ವಿರೂಪಾಕ್ಷೇಶ್ವರ ದೇವಸ್ಥಾನದ ಅರ್ಚಕರು ಹಾಗೂ ವಧುವಿನ ಕಡೆಯವರಾಗಿ ರಾಮ ಲಕ್ಷ್ಮಣ ದೇವಸ್ಥಾನದ ಅರ್ಚಕರು ಸಾಂಕೇತಿಕವಾಗಿ ಕಾರ್ಯನಿರ್ವ ಹಿಸಿದರು. ವಿದ್ಯಾರಣ್ಯ ಪೀಠದ ವಿದ್ಯಾ ರಣ್ಯ ಭಾರತಿ ಸ್ವಾಮೀಜಿ ಅವರ ನೇತೃತ್ವ ದಲ್ಲಿ ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನ ದಿಂದ ರಥ ಬೀದಿ ಮಾರ್ಗವಾಗಿ ತುಂಗಭದ್ರಾ ನದಿ ದಡದ ಚಕ್ರತೀರ್ಥದ ಬಳಿ ಇರುವ ರಾಮ ಲಕ್ಷ್ಮಣ ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ತೆರಳಿದರು. ಇದೇ ಸಂದರ್ಭದಲ್ಲಿ ವರನಾದ ಹಂಪಿಯ ವಿರೂಪಾಕ್ಷೇಶ್ವರ ದೇವರನ್ನು ಮೆರವ ಣಿಗೆಯಲ್ಲಿ ಕೊಂಡೊಯ್ಯಲಾಯಿತು. ನಂದಿಕೋಲು, ಮಂಗಳ ವಾದ್ಯಗಳು ಸೇರಿದಂತೆ ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಗಮನ ಸೆಳೆದವು.

ರಾಮಲಕ್ಷ್ಮಣ ದೇವಸ್ಥಾನದ ಎದುರು ವಧುವಿನ (ಪಂಪಾಂಭಿಕಾ ದೇವಿಯ) ಕಡೆಯವರು ವರನ ಕಡೆಯವರನ್ನು ಸಂಪ್ರದಾಯ ಬದ್ಧವಾಗಿ ಬರಮಾಡಿ ಕೊಂಡರು. ನಂತರ ವಧು–ವರನ ಕಡೆಯವರು ಕುಳಿತು ವರದಕ್ಷಿಣೆ, ವಧುದಕ್ಷಿಣೆ, ವಿವಾಹ ಮಹೂರ್ತ ನಿಗದಿ ಕುರಿತು ತಿರ್ಮಾನಿಸಿದರು. ಪರಸ್ಪರ ಬೀಗರು ಫಲ ತಾಂಬೂಲ ಬದಲಾಯಿಸಿ ಕೊಳ್ಳುವ ಮೂಲಕ ಸಾಂಪ್ರದಾಯ ಬದ್ಧವಾಗಿ ನಿಶ್ಚಿತಾರ್ಥ ಕಾರ್ಯಕ್ರಮ ವನ್ನು ಪುರೋಹಿತರಾದ ಮೋಹನ ಚಿಕ್ಕಭಟ್‌ ಜೋಶಿ ನೆರವೇರಿಸಿದರು.

ವಿರೂಪಾಕ್ಷೇಶ್ವರ–ಪಂಪಾಂಬಿಕಾ ದೇವಿಯ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಬಂದ ನೆಂಟರು ಹಾಗೂ ಮನೆಯವರಿಗೆ ಪ್ರಸಾದ ವಿತರಣೆ ಮಾಡಿದರು. ನಂತರ ರಾಮ ಲಕ್ಷ್ಮಣ ದೇವಸ್ಥಾನದಿಂದ ಮೆರವಣಿಗೆ ಮೂಲಕ ಪುನಃ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಬರಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT