ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಶೋಧನೆಗೆ ಒತ್ತು: ಭೈರಪ್ಪ ಸಲಹೆ

Last Updated 28 ಜನವರಿ 2012, 11:00 IST
ಅಕ್ಷರ ಗಾತ್ರ

ಮೈಸೂರು:  ಉಪಾಧ್ಯಾಯರು ಕೇವಲ ನೋಟ್ಸ್ ಬರೆಸುವ ಕೆಲಸಕ್ಕೆ ಸೀಮಿತ ವಾಗದೇ ಜ್ಞಾನಾರ್ಜನೆ ಮಾಡುವ ಮೂಲಕ ಜ್ಞಾನ ಪ್ರಸಾರ ಹಾಗೂ ಜ್ಞಾನ ಸೃಷ್ಟಿಸುವ ಕೆಲಸ ಮಾಡಬೇಕು ಎಂದು ಸಾಹಿತಿ ಎಸ್.ಎಲ್.ಭೈರಪ್ಪ ಸಲಹೆ ನೀಡಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾ ನಿಲಯ ನಿರ್ಮಿಸಲು ಉದ್ದೇಶಿಸಿರುವ ಘಟಿಕೋತ್ಸವ ಭವನ ಹಾಗೂ ಕುವೆಂಪು ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಉಪನ್ಯಾಸಕ ರೆಂದರೆ ಕೇವಲ ನೋಟ್ಸ್ ಬರೆಸುವುದಕ್ಕೆ ಸೀಮಿತವಾಗಬಾರದು, ಆತ ಜ್ಞಾನದ ಕೇಂದ್ರ ಬಿಂದುವಾಗಬೇಕು ಎಂದು ಅವರು ಹೇಳಿದರು.

ಉಪನ್ಯಾಸಕರು ನಮ್ಮ ದೇಶದಲ್ಲಷ್ಟೇ ಅಲ್ಲ, ವಿದೇಶಗಳಲ್ಲೂ ಪಾಠ ಮಾಡು ವಷ್ಟು ಸಾಮರ್ಥ್ಯ ಬೆಳೆಸಿ ಕೊಳ್ಳಬೇಕು. ವಿದೇಶಿಯರು ನಮ್ಮಲ್ಲಿ ಪಾಠ ಮಾಡು ವಂತೆ ದೇಶದ ನಮ್ಮ ಉಪನ್ಯಾಸ ಕರು ಸಮರ್ಥರಾಗಬೇಕು. ಉಪನ್ಯಾಸಕರಲ್ಲಿ ಈ ಶಕ್ತಿ ಇದ್ದರೆ ವಿದ್ಯಾರ್ಥಿಗಳನ್ನು ಮೇಲೆತ್ತಬಹುದು ಎಂದರು.

ಭೌತಶಾಸ್ತ್ರ ಹಾಗೂ ಗಣಿತ ವಿಷಯ ಗಳಲ್ಲಿ ನಿರಂತರವಾಗಿ ಜ್ಞಾನ ಬೆಳೆಯು ತ್ತಿರುತ್ತದೆ. ಅದರಂತೆ ಉಪನಿಷತ್ತು ಗಳಲ್ಲೂ ಜ್ಞಾನ ಬೆಳೆಯುತ್ತದೆ.  ಸಂಶೋ ಧನೆ ಮಾಡುವ ಕೆಲಸ ಉಪನ್ಯಾಸಕರಿಂದ ಆಗಬೇಕು. ಸಂಶೋಧನೆಗೆ ಒತ್ತು ನೀಡಬೇಕು ಎಂದರು.

ಯಾವುದೇ ವಿಶ್ವವಿದ್ಯಾನಿಲಯಕ್ಕೆ ಸಂಶೋಧನೆ ಮುಖ್ಯ. ವಿದೇಶಗಳಲ್ಲಿ ಸಂಶೋಧನೆಗೆ ಒಂದು ನಿಧಿ ಸ್ಥಾಪಿಸಿರು ತ್ತಾರೆ. ಅದು ಒಂದು ರಾಜ್ಯದ ಬಜೆಟ್‌ನಷ್ಟು ಹಣವನ್ನು ವಿದೇಶಗಳಲ್ಲಿ ಸಂಶೋ ಧನೆಗೆ ಖರ್ಚು ಮೀಸಲಿಡುತ್ತಾರೆ. ಈ ನಿಟ್ಟಿನಲ್ಲಿ ಸಂಶೋಧನೆಗೆ ಎಷ್ಟು ಹಣ ಕೊಟ್ಟರೂ ಸಾಲದು. ಈ ನಿಟ್ಟಿನಲ್ಲಿ ನಮ್ಮ ವಿವಿಗಳು ಪ್ರಖರವಾಗಿ ಬೆಳೆಯಬೇಕು ಎಂದರು.

ಸಲಹೆ ಸೂಚನೆ ನೀಡಲಿ:

ಮುಕ್ತ ವಿವಿಯಲ್ಲಿ ಪದವಿ ಪಡೆಯು ವವರು ರೆಗ್ಯುಲರ್ ವಿವಿಗಳಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿ ಗಳಿಗಿಂತ ಚೆನ್ನಾಗಿ ಗ್ರಹಿಸಬಲ್ಲರು. ಅಲ್ಲದೇ ಮುಕ್ತ ವಿವಿಗೆ ಬರುವ ವಿದ್ಯಾರ್ಥಿಗಳು ಕೆಲವರು ಪದವಿ ಪಡೆಯುವ ಉದ್ದೇಶದಿಂದ ಬಂದರೆ ಮತ್ತೆ ಕೆಲವರು ಓದುವ ಪ್ರವೃತ್ತಿ ಬೆಳೆದು ಎಷ್ಟೋ ಪುಸ್ತಕಗಳನ್ನು ಓದುವವರು ಇದ್ದಾರೆ. ಆದರೆ ಇಲ್ಲಿ ಕ್ರಮಬದ್ಧ ಅಧ್ಯಯನ ಅಗತ್ಯ. ಈ ನಿಟ್ಟಿನಲ್ಲಿ ಕೆಲವು ಸಂಶೋಧ ಕರಲ್ಲದೇ ನನ್ನಂತ ಸಾಹಿತಿಗಳಿಗೆ ಸಲಹೆ ಸೂಚನೆ ಹಾಗೂ ಮಾಹಿತಿ ನೀಡುವ ಕೆಲಸವನ್ನು ವಿಶ್ವ ವಿದ್ಯಾನಿಲಯಗಳು ಮಾಡಬೇಕು ಎಂದರು.
ಸಾಹಿತಿ ಸಿಪಿಕೆ  ಅವರು ಮಾತನಾಡಿದರು.

ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕುಲಸಚಿವ ಪ್ರೊ.ಬಿ.ಎಸ್.ವಿಶ್ವನಾಥ್, ಕರಾಮುವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಡಾ.ಎ.ರಂಗಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT