ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸತ್ ದಾಳಿ: ಬಾಂಬ್ ಯಾಕೆ ಸ್ಫೋಟಿಸಿಲ್ಲ?

Last Updated 18 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): `ಸಂಸತ್ ಭವನದ ದಾಳಿಗೆಂದು ಕಾರ್‌ನಲ್ಲಿ ಇಟ್ಟಿದ್ದ ಬಾಂಬ್ ಯಾಕೆ ಸ್ಫೋಟಿಸಲಿಲ್ಲ?~
2001ರ ಡಿಸೆಂಬರ್13 ರಂದು ನಡೆದ ಈ ದಾಳಿ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿರುವ ಅಫ್ಜಲ್ ಗುರುಗೆ ಈಗಲೂ ಇದೊಂದು ಯಕ್ಷಪ್ರಶ್ನೆಯಾಗಿಯೇ ಉಳಿದಿದೆಯಂತೆ!

ತಿಹಾರ್ ಜೈಲು ಅಧಿಕಾರಿ ಮನೋಜ್ ದ್ವಿವೇದಿ ಅವರ 180 ಪುಟಗಳ ಹಸ್ತಪ್ರತಿಯಲ್ಲಿ ಈ ಅಂಶವನ್ನು ಪ್ರಸ್ತಾಪಿಸಲಾಗಿದೆ.

`ಒಂದು ವೇಳೆ ಈ ದಾಳಿಯು ಯಶಸ್ವಿಯಾಗಿದ್ದರೆ, ಆಗ ಜಮ್ಮು-ಕಾಶ್ಮೀರವನ್ನು ಅವರು ಅಂತರರಾಷ್ಟ್ರೀಯ ವಿವಾದವನ್ನಾಗಿ ಮಾಡುತ್ತ್ದ್ದಿದರು ಮತ್ತು ಈ ಸಂಬಂಧ ಸರ್ಕಾರದೊಂದಿಗೆ ಸಂಧಾನಕ್ಕೆ ಮುಂದಾಗುತ್ತಿದ್ದರು~ ಎಂದು ದ್ವಿವೇದಿ ಹೇಳಿದ್ದಾರೆ.

`ಕಾರ್‌ನಲ್ಲಿ ಇಟ್ಟ ಸುಧಾರಿತ ಬಾಂಬ್ ಖಂಡಿತವಾಗಿಯೂ ಸ್ಫೋಟಿಸುತ್ತದೆ ಎಂದುಕೊಂಡಿದ್ದೆವು. ದಾಳಿಯ ಹಿಂದಿನ ರಾತ್ರಿ ಕಾರನ್ನು ಪೊಲೀಸ್ ಒಬ್ಬರ ಎದುರಿನಲ್ಲಿಯೇ ಪಾರ್ಕ್ ಮಾಡಲಾಗಿತ್ತು. ಆದರೆ ಪೊಲೀಸರು ಈ ಕಾರನ್ನು ತಪಾಸಣೆಗೊಳಪಡಿಸುವ ಗೋಜಿಗೆ ಹೋಗಲಿಲ್ಲ~ ಎಂದು ಗುರು ತಮಗೆ ಹೇಳಿದ್ದಾಗಿ ದ್ವಿವೇದಿ ತಮ್ಮ ಹಸ್ತಪ್ರತಿ ದಾಖಲೆಯಲ್ಲಿ ಉಲ್ಲೇಖಿಸಿದ್ದಾರೆ.

6 ಅಧ್ಯಾಯಗಳ ಈ ಹಸ್ತಪ್ರತಿಯಲ್ಲಿ ದಾಳಿಯ ಕುರಿತ ಕೆಲವು ಅಂಶಗಳು, ಅಫ್ಜಲ್ ಗುರುವಿನ ಬಾಲ್ಯ, ಆತ ಪಾಕಿಸ್ತಾನ ತಲುಪಿದ್ದು ಹೇಗೆ-ಇತ್ಯಾದಿ ವಿವರಗಳನ್ನು ದ್ವಿವೇದಿ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT