ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸತ್‌ ಕಲಾಪ ಮುಂದೂಡಿಕೆ

Last Updated 18 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್‌): ಸಂಸತ್‌ನ ಉಭಯ ಸದನಗಳನ್ನು ಬುಧವಾರ ಅನಿರ್ದಿ­ಷ್ಟಾ­ವಧಿಗೆ ಮುಂದೂಡ­ಲಾ­ಯಿತು. ಲೋಕಪಾಲ ಮಸೂದೆ ಅಂಗೀ­ಕಾರ­­ಗೊಂಡ ತಕ್ಷಣವೇ ಲೋಕಸಭೆ ಕಲಾಪ­ವನ್ನು ಅನಿರ್ದಿಷ್ಟಾವಧಿಗೆ ಮುಂದೂಡ­ಲಾಯಿತು.

ಲೇಖಾನುದಾನ ಅನುಮೋದ­ನೆಗಾಗಿ  ಹೊಸವರ್ಷದಲ್ಲಿ ಮತ್ತೆ  ಕಲಾಪ ನಡೆಯುವ ಸಾಧ್ಯತೆ ಇದೆ.

‘ಲೋಕಸಭೆ ಚುನಾವಣೆ ಹಿನ್ನೆಲೆ­ಯಲ್ಲಿ  ಬಜೆಟ್‌ ಅಧಿವೇಶನದ ಬದಲು ಲೇಖಾನುದಾನಕ್ಕೆ ಅನುಮೋ­ದನೆ ಪಡೆದುಕೊಳ್ಳ­ಲಾ­ಗುತ್ತದೆ’ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಮಲ್‌ ನಾಥ್‌ ಹೇಳಿದ್ದಾರೆ.

ರಾಜ್ಯಸಭೆ: ಭಾರತದ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗಡೆ ಅವರ ಬಂಧನದ ಬಗ್ಗೆ ರಾಜ್ಯಸಭೆಯಲ್ಲಿ ಚರ್ಚೆ ನಡೆಯಿತು. ಭಾರತ–ಬಾಂಗ್ಲಾ ಭೂ ವಿನಿಮಯಕ್ಕೆ ಸಂಬಂಧಿಸಿದ ಸಂವಿಧಾನ ತಿದ್ದುಪಡಿ ಮಸೂದೆ ಮಂಡನೆಗೆ ಸರ್ಕಾರ ಪ್ರಯತ್ನಿಸಿತು. ಈ ಸಂದರ್ಭದಲ್ಲಿ ಗದ್ದಲ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT