ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತ ಕಡ್ಡಾಯವೇಕೆ?

Last Updated 7 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಸಂಸ್ಕೃತವನ್ನು ಕಡ್ಡಾಯವಾಗಿ ಕಲಿಸಬೇಕು~ ಎಂಬ ಎಸ್.ಎಲ್.ಭೈರಪ್ಪನವರಿಗೆ ಸಂಸ್ಕೃತದ ಬಗ್ಗೆ ಗೌರವ, ಒಲವು ಇರಬಹುದು. ಆದರೆ, ಸಂಸ್ಕೃತವನ್ನು ಎಲ್ಲರೂ ಕಲಿಯಬೇಕು ಎಂಬ ನಿಲುವು ಪ್ರಜಾಪ್ರಭುತ್ವದಲ್ಲಿ ಸರಿ ಬರುವುದಿಲ್ಲ.
 
ಜನರಿಗೆ ಸಂಸ್ಕೃತವನ್ನು ಓದುವ ಆಯ್ಕೆ ಕೊಡುವುದು ಒಳಿತು. ಬಲವಂತದ ಹೇರಿಕೆ ಬೇಡ. ಸಂಸ್ಕೃತದಿಂದ ಹಲವಾರು ಪದಗಳು ಕನ್ನಡಕ್ಕೂ ಹರಿದು ಬಂದಿರುವುದು ನಿಜ. ಹಾಗೆ ಹರಿದು ಬಂದ ಕೆಲವು ಪದಗಳಿಂದ ಕನ್ನಡವು ಕನ್ನಡಿಗರಿಗೇ ಕಬ್ಬಿಣದ ಕಡಲೆಯಂತೆ ಕಾಣುತ್ತಿದೆ. ವಿಜ್ಞಾನ ಪಠ್ಯಗಳಲ್ಲಿ ಮತ್ತೇಭವಿಕ್ರೀಡನ, ದ್ಯುತಿಸಂಶ್ಲೇಷಣ ಕ್ರಿಯೆ, ಅನುಲೋಮಾನುಪಾತ ಇತ್ಯಾದಿ ಪದಗಳಿವೆ. ಇಂತಹ ಪಾರಿಭಾಷಿಕ ಪದಗಳ ಹರಿವಿನಲ್ಲಿ ಕನ್ನಡದ್ದೇ ಆದ `ಕೂಡುವುದು~, `ಕಳೆಯುವುದು~ ಕೊಚ್ಚಿ ಹೋಗಿ, `ಸಂಕಲನ~, `ವ್ಯವಕಲನ~ ಕೂತಿವೆ. ಭೈರಪ್ಪನವರು ಹೇಳಿದಂತೆ

ಸಂಸ್ಕೃತವನ್ನು ಕಡ್ಡಾಯ ಮಾಡಿದ್ದೇ ಆದಲ್ಲಿ, ಜ್ಞಾನದ ವಿಚಾರಗಳೆಲ್ಲವೂ ಮತ್ತೆ ಸಂಸ್ಕೃತದಲ್ಲೇ ಕುಳಿತುಕೊಳ್ಳುತ್ತವೆ ಹೊರತು, ಕನ್ನಡಕ್ಕೆ ಬರುವುದಿಲ್ಲ. ಹಳೆಯ ಕಾಲದಲ್ಲಿದ್ದಂತೆ, ಜ್ಞಾನ ಬೇಕೆಂದರೆ ಕನ್ನಡಿಗರು ಸಂಸ್ಕೃತ ಕಲಿಯಬೇಕು ಎನ್ನುವ ವಾತಾವರಣ ಪುನರ್ಜನ್ಮ ಪಡೆಯುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT