ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಥೆಯ ಆದಾಯ ಹೆಚ್ಚಿಸಲು ಶ್ರಮಿಸಿ

Last Updated 13 ಫೆಬ್ರುವರಿ 2012, 5:00 IST
ಅಕ್ಷರ ಗಾತ್ರ

ಬಳ್ಳಾರಿ: ಸಿಬ್ಬಂದಿ ವರ್ಗದವರು ಸಮರ್ಪಕವಾಗಿ ಸೇವೆ ಸಲ್ಲಿಸುವ ಮೂಲಕ   ಸಂಸ್ಥೆಯ ಆದಾಯವನ್ನು ಹೆಚ್ಚಿಸಲು ಶ್ರಮಿಸಬೇಕು ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣ ಅಧಿಕಾರಿ ಡಿ.ದುರ್ಗಪ್ಪ ಸಲಹೆ ನೀಡಿದರು.

ನಗರದಲ್ಲಿರುವ ಸಂಸ್ಥೆಯ ಒಂದನೇ ಘಟಕದಲ್ಲಿ ಇತ್ತೀಚೆಗೆ ಏರ್ಪಡಿಸ ಲಾಗಿದ್ದ ಇಂಧನ ಉಳಿತಾಯ ಪಾಕ್ಷಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಚಾಲಕರು, ನಿರ್ವಾಹಕರು ಹಾಗೂ ತಾಂತ್ರಿಕ ವರ್ಗದ ಸಿಬ್ಬಂದಿ ಸಾರಿಗೆ ಸಂಸ್ಥೆಯ ಬೆನ್ನೆಲುಬು. ಅವರ ಕರ್ತವ್ಯ ಪರತೆಯೇ ಸಂಸ್ಥೆಯ ಅಭಿವೃದ್ಧಿಯನ್ನು ಅವಲಂಬಿಸಿದೆ. ಇದನ್ನು ಅರಿತು ಕೆಲಸ ಮಾಡಿದರೆ ಎಲ್ಲರಿಗೂ ಒಳಿತು. ಅಧಿಕಾರಿಗಳು ಕೆಳ ಹಂತದ ಸಿಬ್ಬಂದಿ ಯನ್ನು ಉತ್ತಮ ರೀತಿಯಲ್ಲಿ ನೋಡಿ ಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.

ಸಂಸ್ಥೆಯು ಅಂದಾಜು ರೂ ನಾಲ್ಕು ಕೋಟಿ ಆದಾಯ ಗಳಿಸಿದ್ದು, ಇಂಧನ ಉಳಿತಾಯದ ಮೂಲಕ ಆದಾಯದ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸುವ ಅಗತ್ಯವಿದೆ ಎಂದು ಅವರು ಹೇಳಿದರು.

ಸಂಸ್ಥೆಯ ಲಾಭ ಮಾಡಿರುವ ಹಿನ್ನೆಲೆಯಲ್ಲಿ ವ್ಯವಸ್ಥಾಪಕ ನಿರ್ದೇಶಕರ ಆದೇಶದ ಮೇರೆಗೆ ಎಲ್ಲ ಸಿಬ್ಬಂದಿಗೂ ಸಿಹಿ ವಿತರಿಸಿ, ಸಂತಸ ಹಂಚಿಕೊಳ್ಳ ಲಾಗುತ್ತಿದೆ ಎಂದು ಅವರು ತಿಳಿಸಿದರು.

ಅಧಿಕಾರಿಗಳಾದ ವಿ.ಅಂಜಿನಪ್ಪ, ತಾಂತ್ರಿಕ ಶಿಲ್ಪಿ ರಾಧಾಕೃಷ್ಣ, ಕಾರ್ಯ ನಿರ್ವಾಹಕ ಎಂಜಿನಿಯರ್ ಶಿವ ಮೂರ್ತಿ, ಘಟಕ ವ್ಯವಸ್ಥಾಪಕ ಆರ್.ಎಸ್. ಗೌಸ್ ಉಪಸ್ಥಿತರಿದ್ದರು.

ಹಾವು ಕಚ್ಚಿ ವ್ಯಕ್ತಿ ಸಾವು
ಕಂಪ್ಲಿ: ಇಲ್ಲಿಗೆ ಸಮೀಪದ ಕಣವಿ ತಿಮ್ಮಲಾಪುರ ಗ್ರಾಮದ ರೈತ ಪರಂಗಿ ಗಾಳೆಪ್ಪ(38) ಶನಿವಾರ  ಬತ್ತದ ಗದ್ದೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಹಾವು ಕಚ್ಚಿ ಮೃತಪಟ್ಟಿರುತ್ತಾನೆ. ಈ ಸಂಬಂಧ ಮೃತನ ಪತ್ನಿ ಜಂಬಕ್ಕ ಠಾಣೆಗೆ ದೂರು ನೀಡಿದ್ದಾರೆ.

 ಆಗ್ರಹ: ಹೊಲದಲ್ಲಿ ಆಕಸ್ಮಿಕ ಹಾವು ಕಚ್ಚಿ ಮೃತಪಟ್ಟ ಕುಟುಂಬಕ್ಕೆ ಎಪಿಎಂಸಿ ರೈತ ಸಂಜೀವಿನಿ ಯೋಜನೆಯಡಿ ಪರಿಹಾರ ನೀಡುವಂತೆ ಸುಗ್ಗೇನಹಳ್ಳಿ ಗ್ರಾ.ಪಂ. ಸದಸ್ಯ ಬಿ. ಕರಿಯಪ್ಪ ನಾಯಕ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT