ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕ್ಕರೆ ನಾಡಿನಲ್ಲಿ `ಕಾವೇರಿ'ದ ಕದನ ಕಣ

Last Updated 23 ಏಪ್ರಿಲ್ 2013, 5:43 IST
ಅಕ್ಷರ ಗಾತ್ರ

ಮದ್ದೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಸಾಧನೆಯನ್ನು ಗುರುತಿಸಿ ಈ ಬಾರಿ ಕ್ಷೇತ್ರದ ಜನತೆ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸು ವುದು ನಿಶ್ಚಿತ ಎಂದು ಕೆಪಿಸಿಸಿ ಸದಸ್ಯ ಗುರುಚರಣ್ ಹೇಳಿದರು.

ಸಮೀಪದ ಸೋಮನಹಳ್ಳಿಯಲ್ಲಿ ಸೋಮವಾರ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಜೋರಾಗಿದ್ದು, ಸ್ವತಂತ್ರ ಅಧಿಕಾರ ಪಡೆಯುವುದು ಖಂಡಿತ. ಹೀಗಾಗಿ ಕಾರ್ಯಕರ್ತರು ಎಚ್ಚರಿಕೆಯ ಹೆಜ್ಜೆಗ ಳನ್ನಿಟ್ಟು ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇ ಕೆಂದು ಅವರು ಕಾರ್ಯಕರ್ತರಿಗೆ ಕರೆ ನೀಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ, ಕಾಂಗ್ರೆಸ್ ಅಭ್ಯರ್ಥಿ ಮಧು ಜಿ. ಮಾದೇಗೌಡ ಸಭೆಯಲ್ಲಿ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಸದಸ್ಯರಾದ ಗಂಗಾ ಬಲರಾಂ, ಕೆ.ಆರ್. ಮಹೇಶ್, ಪಿ. ಸಂದರ್ಶ, ಪುರಸಭಾ ಸದಸ್ಯರಾದ ಡಾಬ ಮಹೇಶ್, ರಘು, ಮುಖಂಡರಾದ ಯೋಗರಾಜು, ಕೃಷ್ಣ ಇದ್ದರು.

ಡಿ.ಸಿ.ತಮ್ಮಣ್ಣ ಮತಯಾಚನೆ
ಮದ್ದೂರು: ತಾಜಾ ಮೀನು ದಾಸ್ತಾನಿಗಾಗಿ ಶಿಥಿಲೀಕರಣ ಘಟಕ ಸ್ಥಾಪನೆ ಸೇರಿದಂತೆ ಮೀನುಗಾರರ ಹಿತ ರಕ್ಷಣೆಗೆ ಅಗತ್ಯವಾದ ಹಲವು ಯೋಜನೆಗಳನ್ನು ಯೋಜಿಸಿದ್ದು, ಇವುಗಳ ಸಾಕಾರ ಕ್ಕಾಗಿ ಈ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸ ಬೇಕೆಂದು ಜೆಡಿಎಸ್ ಅಭ್ಯರ್ಥಿ ಡಿ.ಸಿ.ತಮ್ಮಣ್ಣ ವಿನಂತಿಸಿದರು.

ಪಟ್ಟಣದ ಗಂಗಾಮತಸ್ಥ ಸಮುದಾಯ ಭವನದಲ್ಲಿ ಸೋಮವಾರ ಸಂಜೆ ಏರ್ಪಡಿಸಿದ್ದ ತಾಲ್ಲೂಕು ಮೀನುಗಾರರ ಸಂಘದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕರ್ನಾಟಕ ರಾಜ್ಯ ಮೀನುಗಾರಿಕೆ ಮಹಾ ಮಂಡಳದ ಮಾಜಿ ಅಧ್ಯಕ್ಷ ನಂಜೇಗೌಡ ಸಭೆಯಲ್ಲಿ ಮಾತನಾಡಿದರು. ಪುರಸಭಾ ಸದಸ್ಯ ಶೇಖರ್, ಮೀನುಗಾರರ ಸಂಘದ ಪದಾಧಿಕಾರಿಗಳಾದ ಶಂಕರ್, ಚಂದ್ರು, ತಿಮ್ಮಣ್ಣ, ಕೃಷ್ಣಪ್ಪ, ಚೌಡಪ್ಪ, ಸಿದ್ದಪ್ಪ, ಶಿವು, ಶ್ರೀನಿವಾಸ್, ಭಾಗ್ಯಮ್ಮ, ಸೌಮ್ಯ, ಚೆಲುವಮ್ಮ ಸೇರಿ ಹಲವರು ಪಾಲ್ಗೊಂಡಿದ್ದರು.

ಪ್ರಚಾರ: ನಂತರ ಜೆಡಿಎಸ್ ಅಭ್ಯರ್ಥಿ ಡಿ.ಸಿ. ತಮ್ಮಣ್ಣ ಗಂಗಾಮತಸ್ಥರ ಬೀದಿ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಬಿರುಸಿನ ಚುನಾವಣಾ ಪ್ರಚಾರ ಕಾರ್ಯ ಕೈಗೊಂಡರು.

`ಬಿಜೆಪಿಯಿಂದ ಉತ್ತಮ ಆಡಳಿತ'
ಮದ್ದೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ನೀಡಿದ ಉತ್ತಮ ಆಡಳಿತದ ಬಗೆಗೆ ಜನರಲ್ಲಿ ಸದಾಭಿಪ್ರಾ ಯವಿದ್ದು, ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಜನರು ಆರ್ಶಿವಾದ ಮಾಡಬೇಕೆಂದು ಮುಡಾ ಅಧ್ಯಕ್ಷ ಡಿ. ರಾಮಲಿಂಗಯ್ಯ ಕೋರಿದರು.

ಸಮೀಪದ ನಿಡಘಟ್ಟ ಅರೆತಿಪ್ಪೂರು ಗ್ರಾಮದ ಆಂಜನೇಯಸ್ವಾಮಿ ದೇಗುಲದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಎಂ. ವನಜಾಕ್ಷಿರಾಮರಾಜು ಅವರೊಂದಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅವರು ಸುದ್ದಿಗಾರರೊಡನೆ ಮಾತನಾಡಿದರು.

ಐದು ವರ್ಷದಲ್ಲಿ ಬಿಜೆಪಿ ಸರ್ಕಾರ ಕೈಗೊಂಡ ಅಭಿವೃದ್ಧಿ ಕೆಲಸಗಳು ಜನರ ಮನಸ್ಸಿನಲ್ಲಿ ನೆಲೆಯಾಗಿದ್ದು, ಅದು ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಸಹಕಾರವಾಗಲಿದೆ ಎಂದರು.

ಬಿಜೆಪಿ ಅಭ್ಯರ್ಥಿ ವನಜಾಕ್ಷಿರಾಮರಾಜು ಮಾತನಾಡಿ, ಕಳೆದ ಹಲವು ವರ್ಷಗಳಿಂದ ಕ್ಷೇತ್ರದ ಜನರ ಸೇವೆ ಮಾಡಿದ್ದು, ಈ ಬಾರಿ ಕ್ಷೇತ್ರದ ಜನರು ನನ್ನನ್ನು ಬೆಂಬಲಿಸಲಿದ್ದಾರೆ ಎಂದರು.

ವಿಮಲಗೌಡ ಪ್ರಚಾರ: ವಿಧಾನ ಪರಿಷತ್ ಸದಸ್ಯೆ ವಿಮಲಗೌಡ ಬಿಜೆಪಿ ಅಭ್ಯರ್ಥಿ ಬಿ.ಎಂ. ವನಜಾಕ್ಷಿರಾಮರಾಜು ಅವರ ಪರವಾಗಿ ಪಟ್ಟಣ ಸೇರಿದಂತೆ ತಾಲ್ಲೂಕಿನ ನಿಡಘಟ್ಟ, ಬೆಸಗರಹಳ್ಳಿ, ಭಾರತೀನಗರ ವ್ಯಾಪ್ತಿಯ ವಿವಿಧ ಹಳ್ಳಿಗಳಲ್ಲಿ ಸೋಮವಾರ ಬಿರುಸಿನ ಪ್ರಚಾರ ನಡೆಸಿದರು.

ಪುರಸಭಾ ಮಾಜಿ ಸದಸ್ಯೆ ತನುಜ, ಮನ್‌ಮುಲ್ ನಿರ್ದೇಶಕಿ ರೂಪ, ಜಿಲ್ಲಾ ಬಿಜೆಪಿ ಮಹಿಳಾ ಕಾರ್ಯದರ್ಶಿ ಲಲತಸಿದ್ದರಾಜು ಇದ್ದರು.

ಕೆಜೆಪಿಗೆ ಹಲವರ ಸೇರ್ಪಡೆ
ಮಳವಳ್ಳಿ: `ತಾಲ್ಲೂಕಿನ ಮತದಾರರು ಈ ಬಾರಿ ಕೆಜೆಪಿ ಅಭ್ಯರ್ಥಿಗೆ ಅವಕಾಶ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರವಿಗೌಡ ಮನವಿ ಮಾಡಿದರು.

ತಾಲ್ಲೂಕಿನ ನಡಕಲಪುರ ಬಸವೇಶ್ವರಸ್ವಾಮಿ ದೇವಾಲಯ ಆವರಣದಲ್ಲಿ ಸೋಮವಾರ ನಡೆದ ಕಸಬಾ ವ್ಯಾಪ್ತಿಯ ಕಾರ್ಯಕರ್ತರ ಸಭೆ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಾಲ್ಲೂಕು ಕೆಜೆಪಿ ಅಧ್ಯಕ್ಷ ಎಂ.ಕೆ. ಸುಂದ್ರಪ್ಪ, ಮುಖಂಡರಾದ ಹುಸ್ಕೂರು ರಮೇಶ್, ಜವಳಿ ವರ್ತಕರಾದ ಎಚ್.ಬಿ. ಶಿವಸ್ವಾಮಿ, ಎ.ಬಿ. ಲಿಂಗರಾಜು, ಚೌಡೇಶ್, ಪುಟ್ಟಸ್ವಾಮಿ, ವೀರಶೈವ ಮಹಾಸಭಾ ಅಧ್ಯಕ್ಷ ಕುಂದೂರು ಮೂರ್ತಿ, ಜಯರುದ್ರಸ್ವಾಮಿ ಇತರರು ಇದ್ದರು.

ಸಿ.ಅಣ್ಣೇಗೌಡ ಜೆಡಿಎಸ್‌ಗೆ
ಪಾಂಡವಪುರ: ಕಳೆದ ಭಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾಗಿ ಸ್ಪರ್ಧಿಸಿದ್ದ ಪಟ್ಟಣದಲ್ಲಿನ ಜಿಲ್ಲಾ ಪಂಚಾ ಯಿತಿ ಮಾಜಿ ಅಧ್ಯಕ್ಷ ಸಿ.ಅಣ್ಣೇಗೌಡ ಅವರನ್ನು ಸೋಮವಾರ ಮಾಜಿ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಪಕ್ಷಕ್ಕೆ ಬರಮಾಡಿಕೊಂಡರು.

ನಂತರ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ಅಣ್ಣೇಗೌಡ ಅವರು ಹಿರಿಯ ರಾಜಕಾರಣಿ. ಕೆಲವು ಸಾಂದರ್ಭಿಕ ಕಾರಣಗಳಿಂದ ಬೇರೆ ಪಕ್ಷಗಳಿಗೆ ಹೋಗಿದ್ದರು. ಈಗ ನಮ್ಮ ಮಾತಿಗೆ ಬೆಲೆಕೊಟ್ಟು ತವರು ಮನೆಗೆ ಬಂದಿದ್ದಾರೆ. ಇದರಿಂದ ಜೆಡಿಎಸ್ ಪಕ್ಷಕ್ಕೆ ಮತ್ತಷ್ಟು ಶಕ್ತಿ ಬಂದಿದೆ ಎಂದರು.

ಸಿ.ಅಣ್ಣೇಗೌಡ ಮಾತನಾಡಿ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಮಾತಿಗೆ ಗೌರವ ಕೊಟ್ಟು ಜೆಡಿಎಸ್ ಪಕ್ಷಕ್ಕೆ ಸೇರಿದ್ದೇನೆ. ಕ್ಷೇತ್ರದ ಶಾಸಕರಾಗಿ ಸಿ.ಎಸ್. ಪುಟ್ಟರಾಜು ಅವರು ಕಳೆದ 50 ವರ್ಷಗಳಿಂದ ಯಾವ ಶಾಸಕರೂ ಮಾಡಲಾಗದ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಎಂದರು.

ಜೆಡಿಎಸ್ ಅಭ್ಯರ್ಥಿ ಸಿ.ಎಸ್. ಪುಟ್ಟರಾಜು, ಶಾಸಕ ಬಿ. ರಾಮಕೃಷ್ಣ,ಮಾಜಿ ಶಾಸಕರಾದ ಎಚ್. ಬಿ.ರಾಮು, ಕೆ..ಟಿ. ಶ್ರೀಕಂಠೇಗೌಡ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್, ಮುಖಂಡ ಜಪ್ರುಲ್‌ಖಾನ್, ಧರ್ಮರಾಜು, ಎಸ್.ಎ. ಮಲ್ಲೇಶ್, ಎಂ.ಬಿ.ಶ್ರೀನಿವಾಸ್, ಚನ್ನೇಗೌಡ, ತಾ.ಪಂ.ಸದಸ್ಯ ಎಸ್.ಎಂ.ಲಕ್ಷ್ಮಿ ಇತರರು ಇದ್ದರು.

`ಜೆಡಿಎಸ್‌ಗೆ ಸಿದ್ಧಾಂತವೇ ಮುಖ್ಯ'
ಕಿಕ್ಕೇರಿ: ತತ್ವ, ಸಿದ್ಧಾಂತ ಹೊಂದಿರುವ ಜೆಡಿಎಸ್ ಏಳಿಗೆ ಸಹಿಸದೆ ಕೆಲವರು ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಪಕ್ಷದ ಮುಖಂಡ ಚೋಳೇನಹಳ್ಳಿ ಪುಟ್ಟಸ್ವಾಮಿಗೌಡ ದೂರಿದರು.

ಗ್ರಾಮದಲ್ಲಿ ಸೋಮವಾರ ನಡೆದ ಪಕ್ಷದ ಕಾರ್ಯಕರ್ತ ಕಾರ್ಯಕ್ರಮದಲ್ಲಿ ಮಾತನಾಡಿದರ ಅವರು, ಹಿರಿಯ ರಾಜಕಾರಣಿ ಕೃಷ್ಣ ಅವರು ಪಕ್ಷದಿಂದ ಸಕಲ ಸವಲತ್ತು, ಗೌರವ ಪಡೆದು ಈಗ ಪಕ್ಷೇತರರಾಗಿ ಕಣಕ್ಕೆ ಇಳಿದಿದ್ದಾರೆ. ಇವರ ಸ್ಪರ್ಧೆಯಿಂದ ನಮ್ಮ ಅಭ್ಯರ್ಥಿಗೆ ಯಾವುದೇ ಆತಂಕವಿಲ್ಲ. ತಾಲ್ಲೂಕಿನಲ್ಲಿ ಜೆಡಿಎಸ್ ಪ್ರಬಲವಾ ಗಿದೆ. ಕಾಂಗ್ರೆಸ್ ಆಡಳಿತ ವೈಖರಿಗೆ ಜನ ಬೇಸತ್ತಿದ್ದಾರೆ ಎಂದು ಹೇಳಿದರು.

ಪಕ್ಷದ ಅಭ್ಯರ್ಥಿ ಕೆ.ಸಿ. ನಾರಾಯಣಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಸ್. ಪ್ರಭಾಕರ್, ಕೊಟಗಹಳ್ಳಿ ಮಂಜೇಗೌಡ ಇತರರು ಮಾತನಾಡಿದರು.
ತೇಜಸ್ವಿ ಕಿರಣ್, ಕೆ.ಜಿ. ಅಣ್ಣಯ್ಯ, ಕೆ.ಜಿ. ತಮ್ಮಣ್ಣ, ಕಾಯಿ ಮಂಜೇಗೌಡ, ಎಸ್‌ಟಿಡಿ ರಮೇಶ್, ಕೆ.ಟಿ. ಪರಮೇಶ್, ಸಿಮೆಂಟು ಕೃಷ್ಣಪ್ಪ, ನಾಗೇಂದ್ರ, ಅಂಕನಹಳ್ಳಿ ಕೃಷ್ಣಪ್ಪ, ಐ.ಬಿ.ಅಣ್ಣಯ್ಯ, ದೇವೇಗೌಡ, ಹೊನ್ನೆನಹಳ್ಳಿ ತಮ್ಮಣ್ಣ, ತುಳಸಿ ಸ್ವಾಮಿ ಪಾಲ್ಗೊಂಡಿದ್ದರು.

ಮಾರುತಿರಾವ್ ಪವಾರ್ ಪ್ರಚಾರ
ಕೃಷ್ಣರಾಜಪೇಟೆ: ಬಿಜೆಪಿ ಸರ್ಕಾರ ಒಂದು ಅವಧಿಯಲ್ಲಿ ಮಾಡಿರುವಷ್ಟು ಅಭಿವೃದ್ಧಿ ಕಾರ್ಯ ಗಳನ್ನು ಹಿಂದಿನ 50 ವರ್ಷಗಳ ಕಾಲ ಯಾವ ಸರ್ಕಾರದಿಂದಲೂ ಮಾಡಲು ಸಾಧ್ಯವಾಗಿರಲಿಲ್ಲ ಎಂದು ಮಾಜಿ ಶಾಸಕ ಮಾರುತಿರಾವ್ ಪವಾರ್ ಮನವಿ ಮಾಡಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಪಕ್ಷದ ವಿವಿಧ ಹಂತಗಳ ಮುಖಂಡರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
210 ಕೋಟಿ ರೂಪಾಯಿ ವೆಚ್ಚದಲ್ಲಿ ತಾಲ್ಲೂಕಿನ ಹಳೆಯ ನಾಲೆಗಳ ಆಧುನೀಕರಣ, ಸುಮಾರು 100 ಹಳ್ಳಿಗಳಿಗೆ  ಶುದ್ಧ ಕುಡಿಯುವ ನೀರಿನ ಪೂರೈಕೆ, ಭಾಗ್ಯಲಕ್ಷ್ಮಿ ಬಾಂಡ್, ವಿತರಣೆ, ಪ್ರೌಢಶಾಲೆ ಮಕ್ಕಳಿಗೆ ಉಚಿತ ಬೈಸಿಕಲ್ ಸೇರಿದಂತೆ ವಿವಿಧ ಜನೋಪಯೋಗಿ ಕಾರ್ಯಕ್ರಮಗಳನ್ನು ತಾಲ್ಲೂಕಿನಲ್ಲಿ ಅನುಷ್ಠಾನಗೊಳಿಸಲಾಗಿದೆ ಎಂದರು.

ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವರದರಾಜೇ ಗೌಡ, ಮೈಸೂರು ಬಣ್ಣ ಮತ್ತು ಅರಗಿನ ಕಾರ್ಖಾನೆ ಅಧ್ಯಕ್ಷ ಮೈ.ವಿ. ರವಿಶಂಕರ್, ಜಿಲ್ಲಾ ಬಿಜೆಪಿ ಸಹಕಾರ ಮೋರ್ಚಾ ಅಧ್ಯಕ್ಷ ಜೋಗಿಗೌಡ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಶಿವಲಿಂಗೇಗೌಡ, ತಾಲ್ಲೂಕು ಉಪಾಧ್ಯಕ್ಷ ಕೆ.ಎನ್.ಪರಮೇಶ್ವರ್, ಪ್ರಧಾನ ಕಾರ್ಯದರ್ಶಿ ಕೆ.ಎನ್.ಕುಮಾರಸ್ವಾಮಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT