ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿನ್ ನಿವೃತ್ತಿ ಕುರಿತು ...

Last Updated 23 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

* ಈ ನಿರ್ಧಾರ ಕೇಳಿ ಅಚ್ಚರಿಯಾಯಿತು. ಲಿಟಲ್ ಚಾಂಪಿಯನ್ ಇನ್ನೂ ಕನಿಷ್ಠ 25 ಏಕದಿನ ಪಂದ್ಯಗಳನ್ನಾದರೂ ಆಡಬೇಕಿತ್ತು.  ಟೆಸ್ಟ್‌ನಲ್ಲಿ ಆಡುತ್ತಾರಾದರೂ, ಏಕದಿನ ಪಂದ್ಯದಲ್ಲಿ ಆಡುವುದು ಅಗತ್ಯವಿತ್ತು. ಯುವ ಕ್ರಿಕೆಟಿಗರಿಗೆ ಅವರು ಆದರ್ಶ.

ದಿಲೀಪ್ ವೆಂಗ್‌ಸರ್ಕಾರ್, ಮಾಜಿ ನಾಯಕ
*ಮಾಸ್ಟರ್ 23 ವರ್ಷ, 463 ಪಂದ್ಯಗಳು, 18,426 ರನ್‌ಗಳು.... ಇದು ಸುಲಭದ ಸಾಧನೆಯಲ್ಲ. ಅವರು ಶ್ರೇಷ್ಠ ಬ್ಯಾಟ್ಸ್‌ಮನ್ ಮಾತ್ರವಲ್ಲ, ಸಾಕಷ್ಟು ಮಾನವೀಯ ಗುಣ ಹೊಂದಿರುವ ವ್ಯಕ್ತಿ

ಹರಭಜನ್ ಸಿಂಗ್, (ಟ್ವಿಟರ್‌ನಲ್ಲಿ)
* ಭಾರತ ಕ್ರಿಕೆಟ್ ಸಚಿನ್‌ಗೆ ಋಣಿಯಾಗಿರಬೇಕು. ಅವರದು ಸರಿಯಾದ ನಿರ್ಧಾರ

ಕೀರ್ತಿ ಆಜಾದ್, ಮಾಜಿ  ಕ್ರಿಕೆಟಿಗ
* ಈ ಸಮಯದಲ್ಲಿ ನಿವೃತ್ತಿ ನಿರ್ಧಾರ ನಿರೀಕ್ಷಿತವಾಗಿತ್ತು. ನಿವೃತ್ತಿ ಪ್ರಕಟಸದೆ ಇದ್ದಾಗ ಸಚಿನ್ ಇನ್ನೂ ನಿವೃತ್ತಿಯಾಗಿಲ್ಲ ಎನ್ನುವ ಭಾರತದ ಜನ, ಈಗ ತೆಂಡೂಲ್ಕರ್ ಏಕೆ ನಿವೃತ್ತಿ ಪ್ರಕಟಿಸಿದರು ಎಂದು ಪ್ರಶ್ನಿಸುತ್ತಾರೆ. ಜನರ ಮನಸ್ಸು ಅರ್ಥವಾಗುವುದಿಲ್ಲ.

ಬಾಪು ನಾಡಕರ್ಣಿ, ಮಾಜಿ ಕ್ರಿಕೆಟಿಗ
423 ವರ್ಷಗಳ ಕ್ರಿಕೆಟ್ ಜೀವನದಲ್ಲಿ ಅವರು ಮಾಡಿರುವ ಸಾಧನೆ ಮತ್ತೆ ಯಾರಿಂದಲೂ ಮಾಡಲು ಸಾಧ್ಯವಿಲ್ಲ. ಇದೊಂದು ಅರ್ಥಪೂರ್ಣ ನಿರ್ಧಾರ.

ರಮಿಜ್ ರಾಜಾ, ಪಾಕಿಸ್ತಾನದ ಮಾಜಿ ನಾಯಕ
42015ರ ವಿಶ್ವಕಪ್ ತನಕ ಸಚಿನ್ ಆಡುತ್ತಾರೆ ಎಂದು ನಿರೀಕ್ಷೆ ಇಟ್ಟುಕೊಂಡಿದ್ದೆವು. ಆ ದಿಕ್ಕಿನಲ್ಲಿ ನಮ್ಮ ಯೋಚನೆ ಸಾಗಿತ್ತು. ಆದರೂ ಸಚಿನ್ ಅವರದ್ದು ಸೂಕ್ತ ಸಮಯದಲ್ಲಿ ಸರಿಯಾದ ನಿರ್ಧಾರ

ರತ್ನಾಕರ ಶೆಟ್ಟಿ, ಬಿಸಿಸಿಐ ಮುಖ್ಯ ಆಡಳಿತಾಧಿಕಾರಿ
*ಸಚಿನ್ ಏಕದಿನ ಕ್ರಿಕೆಟ್ ಬದುಕು ಕೊನೆಯಾಯಿತು. ಅವರೊಬ್ಬ ಅದ್ಭುತ ಬ್ಯಾಟ್ಸ್‌ಮನ್. ಅವರಿಗೆ ಅಭಿನಂದನೆಗಳು

ಹಾಶಿಮ್ ಆಮ್ಲಾ, ದಕ್ಷಿಣ ಆಫ್ರಿಕಾದ ಕ್ರಿಕೆಟಿಗ
* ವಿಶ್ವ ಕ್ರಿಕೆಟ್‌ಗೆ ಮುಂಬೈಕರ್ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರು ಗಳಿಸಿರುವ ರನ್‌ಗಳನ್ನು ನೋಡಿದರೆ ಅವರ ಶಕ್ತಿ ಗೊತ್ತಾಗುತ್ತದೆ. ನಿವೃತ್ತಿ ವೈಯಕ್ತಿಕ ನಿರ್ಧಾರವಾದರೂ, ಅದನ್ನು ಎಲ್ಲರೂ ಸ್ವಾಗತಿಸಬೇಕು

ಅರ್ಜುನ್ ರಣತುಂಗಾ, ಶ್ರೀಲಂಕಾದ ಮಾಜಿ ನಾಯಕ
* ಏಕದಿನ ಕ್ರಿಕೆಟ್ ಮಾದರಿ ಸಾಕಷ್ಟು ಸವಾಲಿನಿಂದ ಕೂಡಿರುತ್ತದೆ. ತಾಂತ್ರಿಕ ಕೌಶಲಗಳಿಗಿಂತ ಫಿಟ್‌ನೆಸ್ ತುಂಬಾ ಮುಖ್ಯವಾಗುತ್ತದೆ. ಈಗ ಅವರು ಟೆಸ್ಟ್ ಮಾದರಿಯತ್ತ ಪೂರ್ಣ ಗಮನ ಹರಿಸಲಿ

ವೆಂಕಟ್‌ರಾಮನ್, ಮಾಜಿ ಆಟಗಾರ
* ಏಕದಿನ ಕ್ರಿಕೆಟ್‌ನಲ್ಲಿ ಸಚಿನ್ ಮಾಡಿರುವ ಸಾಧನೆ ಯಾವತ್ತಿಗೂ ಶಾಶ್ವತ. ಅವರದು ಎಲ್ಲರಲ್ಲೂ ಅಚ್ಚರಿ ಮೂಡಿಸುವ ಸಾಧನೆ

ಕೆವಿನ್ ಪೀಟರ್ಸನ್, ಇಂಗ್ಲೆಂಡ್ ಕ್ರಿಕೆಟಿಗ
* ಸಚಿನ್ ಶ್ರೇಷ್ಠ ಟೆಸ್ಟ್ ಬ್ಯಾಟ್ಸ್‌ಮನ್ ಮಾತ್ರವಲ್ಲ. ಏಕದಿನ ಮಾದರಿಯಲ್ಲೂ ಅವರೇ ಶ್ರೇಷ್ಠರು. ಇದು ದಿಢೀರ್ ನಿರ್ಧಾರವಲ್ಲ. ಮೊದಲೇ ನಮಗೆ ತಿಳಿಸಿದ್ದರು. ಅವರ ನಿರ್ಧಾರವನ್ನು ಖಂಡಿತಾ ನಾವೆಲ್ಲರೂ ಗೌರವಿಸೋಣ. ನಿವೃತ್ತಿ ಪಡೆಯುವಂತೆ ಅವರ ಮೇಲೆ ಖಂಡಿತಾ ಒತ್ತಡವಿರಲಿಲ್ಲ

ಸಂಜಯ್ ಜಗದಾಳೆ, ಬಿಸಿಸಿಐ ಪ್ರಧಾನ ಕಾರ್ಯದರ್ಶಿ
* ತೆಂಡೂಲ್ಕರ್ ಸಾಧನೆ ಲಕ್ಷಾಂತರ ಜನರಿಗೆ ಅಲ್ಲ,ಕೋಟ್ಯಂತರ ಜನರಿಗೆ ಸ್ಪೂರ್ತಿಯಾಗುವಂತದ್ದು. ನಮ್ಮ ಜೀವನದಲ್ಲಿ ಇನ್ನೊಬ್ಬ ಸಚಿನ್ ಅವರನ್ನು ಕಾಣಲು ಸಾಧ್ಯವಿಲ್ಲ

ರವಿ ಬೋಪಾರ, ಇಂಗ್ಲೆಂಡ್ ಕ್ರಿಕೆಟಿಗ
*ಮುಂಬೈಕರ್ ನನ್ನ ಆತ್ಮೀಯ ಗೆಳೆಯ. ಅವರ ಬಗ್ಗೆ ಇಡೀ ಭಾರತಕ್ಕೆ ಹೆಮ್ಮೆ ಇದೆ

ಶರದ್ ಪವಾರ್, ಐಸಿಸಿ ಮತ್ತು ಬಿಸಿಸಿಐ ಮಾಜಿ ಮುಖ್ಯಸ್ಥ (ಟ್ವಿಟರ್‌ನಲ್ಲಿ)
* ನಿವೃತ್ತಿ ಹೇಳುವಂತೆ ಮುಂಬೈಕರ್ ಮೇಲೆ ಆಯ್ಕೆ ಸಮಿತಿಯವರು ಒತ್ತಡ ಹೇರಿದ್ದರೇ ಎನ್ನುವುದರ ಬಗ್ಗೆ ಗೊತ್ತಿಲ್ಲ. ಇದು ಸಚಿನ್ ಸ್ವಂತ ನಿರ್ಧಾರ. ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ ಅವರು ಆಡಿ ನಂತರ ನಿವೃತ್ತಿ ನಿರ್ಧಾರ ಕೈಗೊಳ್ಳುತ್ತಾರೆ ಎನ್ನುವ ನಿರೀಕ್ಷೆಯಿತ್ತು.

ಸೌರವ್ ಗಂಗೂಲಿ, ಭಾರತದ ಮಾಜಿ ನಾಯಕ
*ಏಕದಿನ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದು ಅಚ್ಚರಿ ಮೂಡಿಸಿದೆ. ಟೆಸ್ಟ್ ಆಡಲಿರುವುದರಿಂದ ಮುಂದಿನ ವರ್ಷ ನಡೆಯುವ ಟೆಸ್ಟ್ ಸರಣಿಯಲ್ಲಿ ಅವರು ಉತ್ತಮ ಪ್ರದರ್ಶನ ನೀಡಲಿ.

ಕೆ. ಶ್ರೀಕಾಂತ್, ಬಿಸಿಸಿಐ ಆಯ್ಕೆ ಸಮಿತಿ ಮಾಜಿ ಮುಖ್ಯಸ್ಥ
* ಸಚಿನ್ ನಿವೃತ್ತಿಯಿಂದ ಏಕದಿನ ಕ್ರಿಕೆಟ್‌ನಲ್ಲಿ ಒಂದು ಯುಗ ಅಂತ್ಯವಾಯಿತು

ನಾರಾಯಣ ಕಾರ್ತಿಕೇಯನ್, ಫಾರ್ಮುಲಾ ಒನ್ ಡ್ರೈವರ್
* ಅವರ ಸಾಧನೆಯನ್ನು ಬಣ್ಣಿಸಲು ನನ್ನಲ್ಲಿ ಪದಗಳೇ ಸಿಗುತ್ತಿಲ್ಲ. ವಿಶ್ವ ಕ್ರಿಕೆಟ್‌ನಲ್ಲಿಯೇ ಅವರು ಹೆಚ್ಚು ಗೌರವ ಪಡೆದ ಆಟಗಾರ

ಸೊಹೈಲ್ ತನ್ವೀರ್, ಪಾಕಿಸ್ತಾನದ ಕ್ರಿಕೆಟಿಗ
*ನನಗೆ ಖಂಡಿತಾ ಗೊತ್ತು. ಸಚಿನ್ ಅವರಿಂದ ವಿರಾಟ್ ಕೊಹ್ಲಿ ಹಾಗೂ ಸುರೇಶ್ ರೈನಾ ತುಂಬಾ ಕಲಿತಿದ್ದಾರೆ. ಆದರೆ, ಅವರು ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ ಆಡಬೇಕಿತ್ತು.

ಉಮರ್ ಗುಲ್, ಪಾಕ್ ಆಟಗಾರ
* ಏಕದಿನ  ಕ್ರಿಕೆಟ್‌ನಲ್ಲಿ ಸಚಿನ್ ಆಟ ನೋಡುವುದೇ ಪರಮಾನಂದ. ಅವರು ಆರಂಭಿಕ ಆಟಗಾರನಾಗಿ ಬಡ್ತಿ ಪಡೆದಿದ್ದು ಏಕದಿನ ಕ್ರಿಕೆಟ್‌ನ ಸ್ವರೂಪವನ್ನೇ ಬದಲಾಯಿಸಿತು. ಆಕ್ರಮಣಕಾರಿ ಆಟದ ಮೂಲಕ ಪಂದ್ಯದ ಗತಿಯನ್ನೇ ಬದಲಾಯಿಸಿದರು. ಅವರೊಂದಿಗೆ ಡ್ರೆಸ್ಸಿಂಗ್ ಕೊಠಡಿ ಹಂಚಿಕೊಂಡಿದ್ದು ನನ್ನ ಪಾಲಿನ ಸ್ಮರಣೀಯ ಕ್ಷಣ. ಖುಷಿಯ ವಿಚಾರವೆಂದರೆ ಅವರು ಟೆಸ್ಟ್‌ನಲ್ಲಿ ಮುಂದುವರಿಯಲಿದ್ದಾರೆ.

ಜಾವಗಲ್ ಶ್ರೀನಾಥ್
* ಸಚಿನ್ ಇಲ್ಲದ ಭಾರತ ಏಕದಿನ ತಂಡವನ್ನು ಊಹಿಸಿಕೊಳ್ಳುವುದು ಕಷ್ಟ. ಈಗ ತೆಗೆದುಕೊಂಡಿರುವ ನಿರ್ಧಾರ ಸಚಿನ್‌ಗೆ ಸಮಾಧಾನ ನೀಡಿರಬಹುದು. ಆದರೆ ಅವರ ಏಕದಿನ ದಾಖಲೆಗಳನ್ನು ಅಳಿಸುವುದು ಕಷ್ಟ. ಹಲವು ಪಂದ್ಯಗಳನ್ನು ಗೆದ್ದುಕೊಟ್ಟ ಆಟಗಾರ. ಏಕದಿನ ಕ್ರಿಕೆಟ್‌ನ ಬ್ಯಾಟಿಂಗ್ ಶೈಲಿಯನ್ನು ಬದಲಾಯಿಸಿದ ಆಟಗಾರ ಕೂಡ. ಈಗ ಅವರ ಟೆಸ್ಟ್ ಕ್ರಿಕೆಟ್ ಆಟವನ್ನು ಸವಿಯೋಣ.

ಅನಿಲ್ ಕುಂಬ್ಳೆ
*ನನ್ನ ಹೀರೊ, ನನ್ನ ಮಾರ್ಗದರ್ಶಕ, ನನ್ನ ಗೆಳೆಯ. ಎಲ್ಲಕ್ಕಿಂತ ಮುಖ್ಯವಾಗಿ ನಾನುಕ್ರಿಕೆಟ್ ಆಡಲು ಕಾರಣವಾದ ವ್ಯಕ್ತಿ ಸಚಿನ್."

ಪ್ರಗ್ಯಾನ್ ಓಜಾ
* ಸಚಿನ್ ವಿದಾಯ ಹೇಳಲು ಇತ್ತೀಚಿನ ಟೀಕಾ ಪ್ರಹಾರವೂ ಕಾರಣವಾಗಿರಬಹುದು. ಆದರೆ ಅವರ ಬದ್ಧತೆ ಅದ್ಭುತ. ಭಾರತದ ಕ್ರಿಕೆಟ್‌ಗಾಗಿ ಅವರ ಹೃದಯ ಪ್ರತಿ ನಿಮಿಷ ಬಡಿಯುತ್ತದೆ. ಆದರೆ ಅವರು 49 ಶತಕ ಗಳಿಸಿದ್ದರು. 50ನೇ ಶತಕ ಗಳಿಸಬೇಕಿತ್ತು.

ಸುನಿಲ್ ಗಾವಸ್ಕರ್
*ಮುಂಬರುವ ಸರಣಿಯಲ್ಲಿ ಸಚಿನ್ ಆಡುತ್ತಾರೆ ಎಂದುಕೊಂಡಿದ್ದೆವು. ಆದರೆ ಅವರು ಆಡುತ್ತಿಲ್ಲ. ಇದು ನಮಗೆ ನಿರಾಶೆ ಉಂಟು ಮಾಡಿದೆ. 
ಪಾಕ್ ತಂಡದ ನಾಯಕ ಹಫೀಜ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT