ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿನ್ ವಿಕೆಟ್ ಖುಷಿ ನೀಡಿದೆ: ಜೇಮ್ಸ ಪ್ಯಾಟಿನ್‌ಸನ್

Last Updated 3 ಜನವರಿ 2012, 19:30 IST
ಅಕ್ಷರ ಗಾತ್ರ

ಸಿಡ್ನಿ (ಪಿಟಿಐ): ಬ್ಯಾಟಿಂಗ್ ಚಾಂಪಿಯನ್ ಸಚಿನ್ ತೆಂಡೂಲ್ಕರ್ ಅವರ ವಿಕೆಟ್ ಕಬಳಿಸಿದ್ದು ವಿಶೇಷ ಅನುಭವ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಯುವ ವೇಗದ ಬೌಲರ್ ಜೇಮ್ಸ ಪ್ಯಾಟಿನ್‌ಸನ್ ನುಡಿದಿದ್ದಾರೆ.

`ಸಚಿನ್ ವಿಕೆಟ್ ನನಗೆ ಲಭಿಸಿದ್ದು ಅದೃಷ್ಟದ ರೂಪದಲ್ಲಿ. ಏಕೆಂದರೆ ಹೊರಹೋಗುತ್ತಿದ್ದ ಚೆಂಡನ್ನು ಡ್ರೈವ್ ಮಾಡಲು ಮುಂದಾದಾಗ ಅದು ಬ್ಯಾಟ್‌ಗೆ ತಾಗಿ ವಿಕೆಟ್‌ಗೆ ಅಪ್ಪಳಿಸಿತು. ಆದರೆ ಅವರ ವಿಕೆಟ್ ನನಗೆ ಲಭಿಸಿದ್ದು ಒಂದು ವಿಶೇಷ ಅನುಭವ. ಅದೊಂದು ಮರೆಯಲಾಗದ ಕ್ಷಣ~ ಎಂದು ಪ್ಯಾಟಿನ್‌ಸನ್ ಹೇಳಿದ್ದಾರೆ.

`ಆದರೆ ಆರಂಭದ ವಿಕೆಟ್‌ಗಳನ್ನು ಬೇಗನೇ ಕಬಳಿಸಿದರೆ ಉಳಿದವರು ಒತ್ತಡಕ್ಕೆ ಒಳಗಾಗುತ್ತಾರೆ ಎಂಬುದಕ್ಕೆ ಇದೊಂದು ಉದಾಹರಣೆ. ಭಾರತದವರೂ ಅಂಥ ಸಂಕಷ್ಟದಲ್ಲಿ ಸಿಲುಕಿದರು~ ಎಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT