ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿನ್‌ಗೆ ಫ್ಯಾಷನ್ ಲೋಕದ ಸವ್ಯಸಾಚಿಯಾಗುವಾಸೆ

Last Updated 21 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಮೆಕ್ಯಾನಿಕಲ್ ಎಂಜಿನಿಯರಿಂಗ್ ತೃತೀಯ ವರ್ಷ ಅಭ್ಯಾಸ ಮಾಡುತ್ತಿರುವ ಕೊಡಗಿನ ಸಚಿನ್ ಅರ್ಜುನ್ ಕಡೆಮಾಡ ಅವರು ನೃತ್ಯ ಸೇರಿದಂತೆ ಫ್ಯಾಷನ್ ಲೋಕದಲ್ಲೂ ಮಿಂಚುವ ತುಡಿತದಲ್ಲಿದ್ದಾರೆ. ಈಗಾಗಲೇ ಗ್ಲ್ಯಾಮ್ ಹಂಟ್, `ಡೆಕ್ಕನ್ ಹೆರಾಲ್ಡ್' ಆಯೋಜಿಸಿದ್ದ ಫ್ಯಾಷನ್ ಷೋನಲ್ಲಿ ಮಿಂಚಿ ಪ್ರಶಸ್ತಿಗಳನ್ನೂ ಮುಡಿಗೇರಿಸಿಕೊಂಡಿದ್ದಾರೆ. 

ಕೆ.ಆರ್.ಪುರ, ಅಯ್ಯಪ್ಪನಗರದ ಸೌತ್ ಈಸ್ಟ್ ಏಷ್ಯನ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಅಭ್ಯಾಸ ಮಾಡುತ್ತಿರುವ ಸಚಿನ್ ಒಮ್ಮೆ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ರ‌್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದಾರೆ. ತೀರ್ಪುಗಾರರಾಗಿ ಅಲ್ಲಿಗೆ ಬಂದಿದ್ದ ರೂಪದರ್ಶಿಯೊಬ್ಬರ ಗಮನ ಸೆಳೆದದ್ದೇ ರ‌್ಯಾಂಪ್‌ವಾಕ್‌ಗೆ ನಾಂದಿಯಾಯಿತಂತೆ.  
 
ಊರು, ಹವ್ಯಾಸ?
ಕೊಡಗು. ಪಿ.ಯು.ಸಿ ವರೆಗೆ ಅಲ್ಲಿಯೇ ಓದಿದ್ದು, ಎಂಜಿನಿಯರಿಂಗ್‌ಗೆ ಬೆಂಗಳೂರಿಗೆ ಬಂದೆ. ಕ್ರಿಕೆಟ್, ಬಾಸ್ಕೆಟ್‌ಬಾಲ್, ನೃತ್ಯ ಅಭ್ಯಾಸ ಮಾಡುತ್ತೇನೆ.

ನಿಮ್ಮ ಫಿಟ್‌ನೆಸ್ ಮಂತ್ರ?
ಜಾಗಿಂಗ್, ಬೆಳಿಗ್ಗೆ ಎರಡು ಗಂಟೆ, ಸಂಜೆ ಎರಡು ಗಂಟೆ ಜಿಮ್‌ನಲ್ಲಿ ವರ್ಕೌಟ್.
 
ನಿಮ್ಮ ಫ್ಯಾಷನ್ ಮಂತ್ರ?
ಯಾವುದೇ ಬಟ್ಟೆ ಧರಿಸಿದರೂ ಅದು ಫ್ಯಾಷನಬಲ್ ಆಗಿರಬೇಕು. ಹುಟ್ಟಿನಿಂದ ಸಾಯುವವರೆಗೂ ಫ್ಯಾಷನ್ ಅನ್ನೋದು ಇದ್ದೇ ಇರುತ್ತೆ.

ಮಾಡೆಲಿಂಗ್ ಕ್ಷೇತ್ರ ಹೇಗಿದೆ?
ಇದರಲ್ಲಿ ಒಳ್ಳೆಯದೂ ಇದೆ, ಕೆಟ್ಟದ್ದೂ ಇದೆ. ನಾವು ಆಯ್ಕೆ ಮಾಡಿಕೊಳ್ಳುವುದರ ಮೇಲೆ ನಿರ್ಧಾರವಾಗುತ್ತದೆ. ಬೇಗನೆ ಜನಪ್ರಿಯತೆ ಗಳಿಸಬಹುದಾದ ಕ್ಷೇತ್ರವಾಗಿದೆ.
 
ಇಷ್ಟದ ರ‌್ಯಾಂಪ್ ಶೋ ?
ಗ್ಲಾಮ್ ಹಂಟ್ ನನಗೆ ಇಷ್ಟವಾದ ಶೋ. ಇದರಲ್ಲಿ ಮಿ. ಫೋಟೊಜೆನಿಕ್ ಪ್ರಶಸ್ತಿ ಲಭಿಸಿತ್ತು. ಅಲ್ಲಿ ಉಡುಪುಗಳ ವಿನ್ಯಾಸ ಹೆಚ್ಚು ಗಮನ ಸೆಳೆಯಿತು. ಕಿರಿಯರಿಗೆ ಬೆಂಬಲವೂ ಸಿಗುತ್ತದೆ.
 
ಫ್ಯಾಷನ್, ನೃತ್ಯ, ವಿದ್ಯಾಭ್ಯಾಸ ಈ ಮೂರರಲ್ಲಿ ಯಾವುದರಲ್ಲಿ ಭವಿಷ್ಯವಿದೆ ಎನಿಸಿದೆ?
ಇನ್ನೂ ವಿದ್ಯಾಭ್ಯಾಸ ಮಾಡುತ್ತಿದ್ದೇನೆ. ಜತೆಗೆ ಕಳೆದ ವರ್ಷದಿಂದಷ್ಟೇ ಫ್ಯಾಷನ್ ಲೋಕಕ್ಕೆ ಪ್ರವೇಶ ಮಾಡಿರುವುದರಿಂದ ನಿರ್ದಿಷ್ಟವಾಗಿ ಹೇಳಲಾಗದು. ಆದರೆ ಯಾವ ಕ್ಷೇತ್ರದಲ್ಲಿ ಭವಿಷ್ಯವಿದೆ ಎನ್ನಿಸುತ್ತದೆಯೋ ಆ ಕ್ಷೇತ್ರವನ್ನೇ ಪ್ರಮುಖವಾಗಿ ಆಯ್ಕೆ ಮಾಡಿಕೊಳ್ಳುತ್ತೇನೆ.

ನೆಚ್ಚಿನ ವಿನ್ಯಾಸಕರರು?
ಪ್ರಸಾದ್ ಬಿದಪ್ಪ.
 
ತಂದೆ ತಾಯಿ ಪ್ರೋತ್ಸಾಹ ಇದೆಯಾ?
ಹೌದು, ನಾನು ಯಾವುದೇ ಕೆಲಸ ಮಾಡಿದ್ರು ಅವರಿಗೆ ನನ್ನ ಮೇಲೆ ನಂಬಿಕೆ ಇದೆ. ಹಾಗಾಗಿ ಈ ಫ್ಯಾಷನ್ ಕ್ಷೇತ್ರಕ್ಕೆ ಕಾಲಿಟ್ಟಿರುವುದಕ್ಕೆ ಅವರ ವಿರೋಧವಿಲ್ಲ.

ಸಿನಿಮಾದಲ್ಲಿ ಕೆಲಸ ಮಾಡುವ ಆಸಕ್ತಿ ಇದೆಯೇ?
ಸದ್ಯಕ್ಕೆ ಯೋಚಿಸಿಲ್ಲ, ಅವಕಾಶ ಬಂದರೂ ನಿರಾಕರಿಸುತ್ತೇನೆ. ಮೊದಲು ನನ್ನ ವಿದ್ಯಾಭ್ಯಾಸ ಮುಗಿಯಬೇಕು. ಆಮೇಲೆ ಯೋಚನೆ ಮಾಡುತ್ತೇನೆ. ಆದರೆ ಇತ್ತೀಚೆಗೆ ಫ್ಯಾಷನ್ ಲೋಕದಲ್ಲಿ ಮಿಂಚಬೇಕೆಂಬ ಬಯಕೆ ಇಮ್ಮಡಿಯಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT