ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ರಾಮದಾಸ್‌ಗೆ ಪ್ರಾಣಬೆದರಿಕೆ: ಆರೋಪ

Last Updated 8 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಹುಣಸೂರು: ರಾಜ್ಯದಲ್ಲಿ ಮೆಡಿಕಲ್ ಮಾಫಿಯದವರಿಂದ ತಮಗೆ ಬೆದರಿಕೆ ದೂರವಾಣಿ ಕರೆ ಬರುತ್ತಿದೆ ಎಂದು ವೈದ್ಯಕಿಯ ಶಿಕ್ಷಣ ಸಚಿವ ಎಸ್.ಎ. ರಾಮದಾಸ್ ಹೇಳಿದರು.

‘ಮಂಡ್ಯ ಮತ್ತು ಬೀದರ್ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ನಡೆಸುತ್ತಿರುವವರು ಮಾಡುತ್ತಿರುವ ಅಕ್ರಮ ಬಯಲಿ ಗೆಳೆಯುವ ಪ್ರಯತ್ನದಲ್ಲಿದ್ದೇನೆ. ಈ ಹಿನ್ನಲೆಯಲ್ಲಿ ಅನೇಕ ರಾಜಕೀಯ ಒತ್ತಡ ಬಂದಿದ್ದು, ಆ ಒತ್ತಡಗಳಿಗೆ ತಲೆ ಬಾಗದ ಕಾರಣ ಇತ್ತೀಚೆಗೆ ಅನಾಮಧೇಯ ದೂರವಾಣಿ ಕರೆಗಳಿಂದ ಪ್ರಾಣ ಬೆದರಿಕೆ ಬರಲಾರಂಭಿಸಿದೆ. ಇದಕ್ಕೂ ನಾನು ಜಗ್ಗುವುದಿಲ್ಲ’ ಎಂದು  ಮಂಗಳವಾರ ಬೀಜಿಗನಹಳ್ಳಿ ಗ್ರಾಮದಲ್ಲಿ ಸುದ್ದಿಗೋಷ್ಠಿಯಲ್ಲಿ ಗಾರರಿಗೆ ಹೇಳಿದರು.

‘ಬೀದರ್ ಜಿಲ್ಲೆಯ ನರ್ಸಿಂಗ್ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಅಕ್ರಮ ಪರೀಕ್ಷೆ ಬೆಳಕಿಗೆ ತಂದಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಈ ಕಾಲೇಜಿನಲ್ಲಿ ಅಂತರರಾಜ್ಯದಿಂದ ವಿದ್ಯಾರ್ಥಿಗಳು ಪ್ರವೇಶ ಪಡೆದು ಹಿಂದಿರುಗುತ್ತಾರೆ.  ವರ್ಷಾಂತ್ಯದಲ್ಲಿ ಪರೀಕ್ಷೆಗೆ ಹಾಜರಾಗುತ್ತಿದ್ದರು. ಫೆಬ್ರುವರಿ 14ರಂದು ಬೀದರ್ ಜಿಲ್ಲೆಗೆ ಭೇಟಿ ನೀಡಿ ಮರು ಪರೀಕ್ಷೆಯ ವೇಳಾಪಟ್ಟಿ ಪ್ರಕಟಿಸಲಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT