ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವರ ಭರವಸೆ: ಪ್ರತಿಭಟನೆ ಹಿಂದಕ್ಕೆ

Last Updated 3 ಫೆಬ್ರುವರಿ 2011, 7:00 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನ ಬಂಕಾಪುರ ಪಟ್ಟಣದ ಕೀರ್ತಿ ವಿದ್ಯಾ ಸಂಸ್ಥೆಯ ಅಧ್ಯಕ್ಷರು ಬೇಡಿಕೆಗಳನ್ನು ಈಡೇರಿಸಿದ ಹಿನ್ನೆಲೆಯಲ್ಲಿ ಸಂಸ್ಥೆಯ ಸಿಬ್ಬಂದಿ ಕಳೆದ ಒಂದು ವಾರದಿಂದ ನಡೆಸುತ್ತಿರುವ ಪ್ರತಿಭಟನಾ ಹೋರಾಟವನ್ನು ಬುಧವಾರ ಹಿಂದಕ್ಕೆ ಪಡೆದರು.ಇದಕ್ಕೂ ಮುನ್ನ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಸಂಸ್ಥೆಯ ಅಧ್ಯಕ್ಷರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರಲ್ಲದೇ, ತಕ್ಷಣವೇ ಸಿಬ್ಬಂದಿ ಬೇಡಿಕೆಗಳನ್ನು ಈಡೇರಿಸಬೇಕೆಂದು ತಾಕೀತು ಮಾಡಿದರು.

ಇದರಿಂದ ಸಂಸ್ಥೆಯ ಅಧ್ಯಕ್ಷ ಕುರಂದವಾಡ ಅವರು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಸಮ್ಮುಖದಲ್ಲಿಯೇ ಪ್ರತಿಭಟನಾ ನಿರತ ಸಿಬ್ಬಂದಿ ಬೇಡಿಕೆಗಳಾದ ಕನಿಷ್ಠ ವೇತನ, ಸೇವಾ ಭದ್ರತೆ ಹಾಗೂ ನೇಮಕಾತಿ ಪತ್ರ ನೀಡುವ ಭರವಸೆಯನ್ನು ಲಿಖಿತವಾಗಿ ನೀಡಿದರು.ಬಂಕಾಪುರ ಕೀರ್ತಿ ವಿದ್ಯಾ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳಾದ ಎಂ.ಎಸ್.ಕೋರಿಶೆಟ್ಟರ, ಎಂ.ವಿ.ಗಾಡದ, ಹಾಗೂ ಎಸ್.ಬಿ.ಗೌಡರ ಅವರಿಗೆ ಕಳೆದ 20 ವರ್ಷಗಳಿಂದ ಕಾರ್ಯನಿರ್ವಹಿಸುವ ಈವರಿಗೆ ಈವರೆಗೂ ಸೇವಾಭದ್ರತೆ,ಕನಿಷ್ಠ ವೇತನ ದೊರೆತಿರಲಿಲ್ಲ.ಈ ನಡುವೆ ಅವರನ್ನು ಸೇವೆಯಿಂದಲೇ ವಜಾಗೊಳಿಸುವ ಉದ್ದೇಶದಿಂದ ಸಂಸ್ಥೆಯ ಅಧ್ಯಕ್ಷರು ಕಿರುಕುಳ ನೀಡುತ್ತಿದ್ದರು.ಇದನ್ನು ವಿರೋಧಿಸಿ ಈ ಮೂವರು ಕಳೆದ ವಾರದಿಂದ ಕಾಲೇಜು ಎದುರಿನಲ್ಲಿಯೇ ಪ್ರತಿಭಟನೆ ಆರಂಭಿಸಿದ್ದರು.

ಬುಧವಾರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಜಲಸಂಪನ್ಮೂಲ ಸಚಿವ ಹಾಗೂ ಕ್ಷೇತ್ರದ ಶಾಸಕ ಬಸವರಾಜ ಬೊಮ್ಮಾಯಿ ಸ್ಥಳಕ್ಕೆ ಪದವಿ ಪೂರ್ವ ಕಾಲೇಜು ಶಿಕ್ಷಣ ಮಂಡಳಿ ಉಪನಿರ್ದೇಶಕ ಎ.ಎಚ್.ಮಟ್ಟೂರ, ಸಂಸ್ಥೆಯ ಅಧ್ಯಕ್ಷ ಸಿ.ಟಿ.ಕುರಂದವಾಡ ಅವರನ್ನು ಕರೆಸಿದರು.ಈ ಸಂದರ್ಭದಲ್ಲಿ ಸಚಿವರು ಕೂಡಲೇ ಈ ಮೂವರು ಸಿಬ್ಬಂದಿಗಳಿಗೆ ಸೇವಾ ಭದ್ರತೆ ಹಾಗೂ ಕನಿಷ್ಠ ವೇತನ ನೀಡಬೇಕು. ಈ ಕುರಿತಂತೆ ಲಿಖಿತ ಭರವಸೆ ನೀಡುವುದಲ್ಲದೇ ನೇಮಕಾತಿ ಆದೇಶವನ್ನು ನೀಡಬೇಕು ಎಂದು ಸೂಚಿಸಿದರು.

ಇದಕ್ಕೆ ಒಪ್ಪಿಕೊಂಡ ಸಂಸ್ಥೆಯ ಅಧ್ಯಕ್ಷರು ಈ ಕುರಿತಂತೆ ಮೂವರು ಸಿಬ್ಬಂದಿಗಳಿಗೆ ನೇಮಕಾತಿ ಆದೇಶ ನೀಡುವುದಾಗಿ ಭರವಸೆ ನೀಡಿದರು.ಸಂಸ್ಥೆಯ ಅಧ್ಯಕ್ಷ ಒಂದು ದಿನವೂ ಪ್ರತಿಭಟನಾ ಸ್ಥಳಕ್ಕೆ ಭೇಟಿ ಮಾಡದೇ ಇರುವುದಕ್ಕೆ ತೀವ್ರ ಆಕ್ರೋಶ ಪಡಿಸಿದ್ದಕ್ಕೆ ಸಂಸ್ಥೆ ಅಧ್ಯಕ್ಷ ಸಿ.ಟಿ.ಕುರಂದವಾಡ ಸಾರ್ವಜನಿಕರ ಕ್ಷಮೆಯಾಚಿಸಿದರು.

ಪ್ರತಿಭಟನಾ ನಿರತ ಎಂ.ವಿ.ಗಾಡದ ಮಾತನಾಡಿ, ಸಚಿವರು ನೀಡಿದ ಭರವಸೆ ಮೇರೆಗೆ ಇದೀಗ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯುತ್ತಿದ್ದು, ಒಂದು ವೇಳೆ ಬೇಡಿಕೆಗಳು ಈಡೇರದಿದ್ದಲ್ಲಿ ಮತ್ತೆ ಹೋರಾಟವನ್ನು ಮಾಡಲು ಹಿಂಜರಿಯುವುದಿಲ್ಲ ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಸಾಹಿತಿ ಎ.ಕೆ.ಆದ್ವಾನಿಮಠ, ಬಿಜೆಪಿ ಅಧ್ಯಕ್ಷ ಎಸ್.ಕೆ.ಅಕ್ಕಿ, ಪುರಸಭೆ ಅಧ್ಯಕ್ಷ ಎ.ಸಿ.ಜಮಾದಾರ, ಸದಸ್ಯರಾದ ರಾಮಣ್ಣ ರಾಣೋಜಿ, ರಾಮಕೃಷ್ಣ ರಾಯ್ಕರ, ಸೋಮಶೇಖರ ಗೌರಿಮಠ, ಮಲ್ಲೇಶಪ್ಪ ಬಡ್ಡಿ, ಎಂ.ಎನ್. ಹೊನಕೇರಿ, ಶಿವು ಅಂಗಡಿ, ಸತೀಶ ವನಹಳ್ಳಿ, ರಮೇಶ ಸುಲಾಖೆ, ವೆಂಕಣ್ಣ ಮುಳಗುಂದ, ಜಿಲ್ಲಾ ಎಸ್‌ಎಫ್‌ಐ ಸಂಘಟನೆ ಕಾರ್ಯದರ್ಶಿ ಬಸವರಾಜ ಪೂಜಾರ, ಬಂಕಾಪುರ ಘಟಕದ ಅಧ್ಯಕ್ಷ ಆಂಜನೇಯ ಗುಡಗೇರಿ, ಕರವೇ ಅಧ್ಯಕ್ಷ ಬಸವರಾಜ ನಾರಾಯಣಪುರ, ಸಂತೋಷ ಗಾಳೆಮ್ಮನವರ, ಸ್ವಾಮಿ ವಿವೇಕಾನಂದ ಸೇವಾಸಂಸ್ಥೆ ಅಧ್ಯಕ್ಷ ಜೆ.ಎಸ್.ಬಡ್ಡಿ, ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಬಿ.ಡಿ.ಸವೂರ, ರಾಮಕೃಷ್ಣ ಆಲದಕಟ್ಟಿ, ನಾಗಣ್ಣ ಬೆಟಗೇರಿ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT