ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ತವರ ಸಂಖ್ಯೆ 147

Last Updated 27 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಕ್ರೈಸ್ಟ್‌ಚರ್ಚ್  (ಐಎಎನ್‌ಎಸ್): ಕ್ರೈಸ್ಟ್‌ಚರ್ಚ್ ನಲ್ಲಿ ಸಂಭವಿಸಿದ ಭೂಕಂಪದಲ್ಲಿ ಸತ್ತವರ ಸಂಖ್ಯೆ 147ಕ್ಕೆ ಏರಿದ್ದು ನ್ಯೂಜಿಲೆಂಡ್ ಪ್ರಧಾನಿ ಜಾನ್ ಕೀ ಅವರು ನಿಧಿ ಸಂಗ್ರಹ ಆರಂಭಿಸುವುದಾಗಿ ಪ್ರಕಟಿಸಿದ್ದಾರೆ ಎಂದು ಮಾದ್ಯಮಗಳು ತಿಳಿಸಿವೆ. ಪೊಲೀಸ್ ಅಧಿಕಾರಿಯೊಬ್ಬರು ಸೇರಿದಂತೆ 200 ಮಂದಿ ಇನ್ನೂ ಕಾಣೆಯಾಗಿದ್ದಾರೆ ಎಂದು ಪೊಲೀಸ್ ಸೂಪರಿಂಟೆಂಡೆಂಟ್ ದಾವೆ ಕ್ಲಿಫ್ ಹೇಳಿದ್ದಾರೆ ಎಂದು ‘ನ್ಯೂಜಿಲೆಂಡ್ ಹೆರಾಲ್ಡ್’ ವರದಿ ಮಾಡಿದೆ.

147 ಮಂದಿ ಮೃತಪಟ್ಟಿರುವುದನ್ನು ಅಧಿಕಾರಿ ದೃಢಪಡಿಸಿದ್ದಾರೆ. ಭೂಕಂಪದಿಂದಾದ ಸಾವು, ಹಾನಿಯಿಂದ ಜನರು ಚೇತರಿಸಿಕೊಳ್ಳಲು ಅವರಿಗೆ ನೀಡುವ ಸಹಾಯಕ್ಕಾಗಿ  ಕೀ ಅವರು ಜಾಗತಿಕ ನಿಧಿ ಸಂಗ್ರಹದ ಬಗ್ಗೆ ಮನವಿ ಮಾಡಿದ್ದಾರೆ. ‘ಸಹಾಯ ನೀಡಲು ಬಯಸುವ ವಿಶ್ವದಾದ್ಯಂತದ ಎಷ್ಟು ಸಾಧ್ಯವೊ ಅಷ್ಟು ಮಂದಿಯನ್ನು  ಮುಟ್ಟುವುದು ನಮಗೆ ಅನಿವಾರ್ಯ’ ಎಂದು ಕೀ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT