ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ತಿಕಲ್ಲಿನಲ್ಲಿ ಸುಧನ್ವ ಮೋಕ್ಷ ತಾಳಮದ್ದಳೆ

Last Updated 11 ಡಿಸೆಂಬರ್ 2013, 9:30 IST
ಅಕ್ಷರ ಗಾತ್ರ

ಜಯಪುರ (ಬಾಳೆಹೊನ್ನೂರು): ಇಲ್ಲಿಗೆ ಸಮೀಪದ ಜಯಪುರ–ಶೃಂಗೇರಿ ರಸ್ತೆಯ ಗಡಿಕಲ್ಲು ಗ್ರಾಮದ ಸತ್ತಿಕಲ್ಲಿನ ವಾಸುದೇವ ಅವರ ಮನೆಯಂಗಳದಲ್ಲಿ ದಿ.ಸಿಂಗಪ್ಪಯ್ಯ ಸಂಸ್ಮರಣೆ ಕಾರ್ಯ­ಕ್ರಮದಲ್ಲಿ ಸುಧನ್ವ ಮೋಕ್ಷ ತಾಳಮದ್ದಳೆ ಕಾರ್ಯಕ್ರಮ ಯಶಸ್ವಿಯಾಗಿ ನಡೆ­ಯಿತು. ಸಾಂಪ್ರದಾಯಿಕ ಕೃಷಿ ಪದ್ಧತಿಯಲ್ಲಿ ನಿಷ್ಣಾತರಾಗಿದ್ದ ಗ್ರಾಮದ ಹಿರಿಯ ಚೇತನ ಸಿಂಗಪ್ಪಯ್ಯ ಯಕ್ಷಗಾನ ಪೋಷಕರಾಗಿದ್ದು, ಅವರ ನೆನಪಿಗಾಗಿ ಸ್ಥಳೀಯ ಖ್ಯಾತ ಕಲಾವಿದರು ಹಾಗೂ ಆಹ್ವಾನಿತ ಕಲಾವಿದರನ್ನು ಕರೆಸಿ ಪ್ರಸ್ತುತಪಡಿಸಿದ ಸುಧನ್ವ ಮೋಕ್ಷ ತಾಳಮದ್ದಳೆ ಪ್ರದರ್ಶನ ಕಲಾಭಿಮಾನಿಗಳನ್ನು ರಂಜಿಸುವಲ್ಲಿ ಯಶಸ್ವಿಯಾಯಿತು.

ಸನ್ಮಾನ: ಯಕ್ಷಗಾನ ಕ್ಷೇತ್ರದ ಗಾನಕೋಗಿಲೆ ಸುಬ್ರಹ್ಮಣ್ಯ ಧಾರೇಶ್ವರ, ಹಿರಿಯ ಮದ್ದಳೆಗಾರ ಯಲ್ಲಾಪುರ ಶಂಕರ ಭಾಗವತ್, ಉಜಿರೆ ಅಶೋಕ­ಭಟ್, ಎಂ.ಪ್ರಭಾಕರಜೋಷಿ, ಮಲೆ­ನಾಡು ಭಾಗದ ಕಲಾವಿದ ತೋಟ­ದೂರು ಟಿ.ವಿ.ಅಜಿತ್‌ಕಾರಂತ್, ಜನಾ­ರ್ಧನ ಮಂಡಗಾರು, ಮದ್ದಳೆ ವಾದಕ ಭಾಗವತರ ಮನೆ ವೆಂಕಟೇಶ್್್ ಭಟ್, ಉದಯೋನ್ಮುಖ ಭಾಗವತ ಹೇರೂರಿನ ಎ.ಜಿ.ಶಿವಾನಂದಭಟ್ ಹಾಗೂ ಸ್ಥಳೀಯ ಗಣ್ಯರನ್ನು ವಾಸು­ದೇವ್ ಕುಟುಂಬ ಸದಸ್ಯರು ಅರ್ಥ­ಪೂರ್ಣವಾಗಿ ಸನ್ಮಾನಿಸಿದರು.

ಮಲೆನಾಡಿನ ಖ್ಯಾತ ಭಾಗವತ ಮತ್ವಾನಿ ಶಿವಶಂಕರ್, ಮದ್ದಳೆ­ಗಾರರಾದ ಭಾಗವತರ ಮನೆ ವೆಂಕ­ಟೇಶ್‌ಭಟ್, ಹುಲುಗಾರು ಗಣೇಶ­ಮೂರ್ತಿ, ಜಯಪುರ ಹಂಸನಾದ ಯಕ್ಷಬಳಗದ ಕಲಾವಿದ ಮೂತೊಳ್ಳಿ ಎಂ.ಎಸ್.ಸುಬ್ರಹ್ಮಣ್ಯ, ಶೃಂಗೇರಿ ನಾಗೇಶ್ ಕಾಮತ್, ಮಂಡಗಾರು ನರಸಿಂಹಮೂರ್ತಿ, ಯಕ್ಷಗಾನ ಪೋಷಕ­ರಾದ ಜಯಪುರದ ಜಗದೀಶ್ ಹೆಬ್ಬಾರ್, ಚಂದ್ರಕಾಂತ್ ಶೇಟ್, ಕುಂದೂರು ಕೆ.ಆರ್.ಸುಬ್ರಹ್ಮಣ್ಯ, ದೂಬ್ಳ ಅಭ್ಯುದಯ ಸ್ವ ಸಹಾಯ ಸಂಘದ ಭಾಸ್ಕರರಾವ್, ಕಾಫಿ ಬೆಳೆಗಾರ ಬಾಳಮನೆ ನಟರಾಜ್, ಜಯಪುರ ಸತ್ಯಸಾಯಿ ಸಂಸ್ಥೆಯ ಶಿಕ್ಷಕ ಅಭಿ­ನಂದನ್, ಯತೀಶ್‌ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT