ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಯದ ಚುಂಗು ಹಿಡಿದು...

Last Updated 6 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಸಿನಿಮಾದ ಹೆಸರು `ಅರ್ಧ ಸತ್ಯ~. ಶೀರ್ಷಿಕೆಯಲ್ಲಿ ಅಪೂರ್ಣತೆಯಿದ್ದರೂ ನಾಯಕನಟ ಅಕ್ಷಯ್‌ಗೆ ಮಾತ್ರ ಈ ಚಿತ್ರದಿಂದ ಮೂರುಪಟ್ಟು ಲಾಭ! ಕನ್ನಡದಲ್ಲಿ ರೂಪುಗೊಳ್ಳುತ್ತಿರುವ ಈ ಸಿನಿಮಾ ಏಕಕಾಲಕ್ಕೆ ತೆಲುಗಿನಲ್ಲೂ ತಯಾರಾಗಲಿದೆ. `ಅರ್ಧ ಸತ್ಯ~ವನ್ನು ತಮಿಳಿಗೆ ಡಬ್ ಮಾಡಲೂ ಚಿತ್ರತಂಡ ನಿರ್ಧರಿಸಿದೆ. ಅಲ್ಲಿಗೆ ಒಂದೇ ಚಿತ್ರದ ಮೂಲಕ ಮೂರು ಭಾಷೆಗಳ ಪ್ರೇಕ್ಷಕರನ್ನು ತಲುಪುವ ಅದೃಷ್ಟ ಅಕ್ಷಯ್‌ಗೆ ದೊರೆತಿದೆ.

ಸತ್ಯ ಎನ್ನುವುದು ಕಹಿ. ಆದರೆ ಅದು ಪವಿತ್ರವಾದುದು ಕೂಡ. ಹೀಗೆ, ಸತ್ಯದ ವೈರುಧ್ಯಗಳೇ `ಅರ್ಧ ಸತ್ಯ~ದ ಹೂರಣ. ಅಶೋಕ್‌ಕುಮಾರ್, ವಿನೋದ್ ಮತ್ತು ವೀರೇಶ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಶಶಿ ವರ್ಮ ನಿರ್ದೇಶಿಸುತ್ತಿದ್ದಾರೆ. ಶಶಿ ಅವರಿಗಿದು ಕನ್ನಡದಲ್ಲಿ ಮೊದಲನೇ ಸಿನಿಮಾ. ತೆಲುಗಿನಲ್ಲಿ ಕಲಾ ನಿರ್ದೇಶಕರಾಗಿ ಹೆಸರು ಮಾಡಿರುವ ಅವರು, `ಫೋರ್ ಫ್ರೆಂಡ್ಸ್~ ಎನ್ನುವ ತೆಲುಗು ಸಿನಿಮಾ ನಿರ್ದೇಶಿಸಿದ ಅನುಭವಿ ಕೂಡ.

ನಾಯಕ ಅಕ್ಷಯ್, ನಿರ್ದೇಶಕ ಬಿ.ರಾಮಮೂರ್ತಿ ಅವರ ಮಗ. ಈಗಾಗಲೇ ಸಿನಿಮಾದಲ್ಲಿ ನಟಿಸಿರುವ ಅನುಭವವಿರುವ ಅಕ್ಷಯ್, `ಅರ್ಧ ಸತ್ಯ~ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗುತ್ತಿದ್ದಾರೆ. ಅಪ್ಪನ ಅನುಭವವೇ ಮಗನ ಪಾಲಿಗೆ ಪಾಠ. ಈ ಚಿತ್ರದ ನಿರ್ಮಾಣದ ಉಸ್ತುವಾರಿಯನ್ನು ರಾಮಮೂರ್ತಿ ವಹಿಸಿಕೊಂಡಿದ್ದಾರೆ. ಆ ಕಾರಣದಿಂದಲೇ ಚಿತ್ರದ ಮುಹೂರ್ತದ ಸಂದರ್ಭದಲ್ಲಿ ರಾಮಮೂರ್ತಿ ಅವರ ಓಡಾಟವೇ ಎದ್ದುಕಾಣುತ್ತಿತ್ತು.

`ಬೆಂಗಳೂರು ಮತ್ತು ಹೈದರಾಬಾದ್‌ಗಳಲ್ಲಿ ಚಿತ್ರೀಕರಣ ನಡೆಯಲಿದೆ. ಯಾವುದೇ ಒಂದು ಘಟನೆಗೆ ಸಂಬಂಧಿಸಿದ ವಿವರಗಳು ಅಪೂರ್ಣ ಹಾಗೂ ಅರ್ಧ ಸತ್ಯದಿಂದ ಕೂಡಿರುತ್ತವೆ. ಈ ಚಿತ್ರದ ಮೂಲಕ ಸತ್ಯದ ವಿವಿಧ ಆಯಾಮಗಳನ್ನು ವಿಶ್ಲೇಷಿಸುವ ಪ್ರಯತ್ನ ನಮ್ಮದು~ ಎಂದು ರಾಮಮೂರ್ತಿ ಹೇಳಿದರು. ಅವರ ಪ್ರಕಾರ, `ಅರ್ಧ ಸತ್ಯ~ ಕಲಾತ್ಮಕ ಸ್ಪರ್ಶವಿರುವ ಕಮರ್ಷಿಯಲ್ ಸಿನಿಮಾ.

ಪಾವನಿ ಮತ್ತು ಪ್ರಿಯಾಂಕ ಬುಲ್ಗುಣ್ಣನವರ್ ಎನ್ನುವ ಇಬ್ಬರು ನಾಯಕಿಯರು ಚಿತ್ರದಲ್ಲಿದ್ದಾರೆ. ಇವರಲ್ಲಿ ಪ್ರಿಯಾಂಕ `ಆಸ್ಕರ್~ ಹೆಸರಿನ  ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಆಕೆಯದ್ದು ಪತ್ರಕರ್ತೆಯ ಪಾತ್ರವಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT