ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದನದಲ್ಲಿ ಚರ್ಚೆಯಾದ ಜಯಲಲಿತಾ ಮದುವೆ

Last Updated 6 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಸುವರ್ಣ ವಿಧಾನಸೌಧ (ಬೆಳಗಾವಿ): ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಅವಿವಾಹಿತರಾಗಿ ಉಳಿದಿರುವುದೇ ಅವರು ಕಾವೇರಿ ವಿಷಯದಲ್ಲಿ ಪದೇ ಪದೇ ರಾಜ್ಯದ ಜೊತೆ ಸಂಘರ್ಷಕ್ಕೆ ಇಳಿಯಲು ಕಾರಣವೇ?

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಗುರುವಾರ ವಿಧಾನಸಭೆಯ ಮುಂದಿಟ್ಟ ಈ ಪ್ರಶ್ನೆ ಕೆಲಕಾಲ ಸ್ವಾರಸ್ಯಕರ ಚರ್ಚೆಗೆ ದಾರಿಯಾಯಿತು. ತಮಿಳುನಾಡಿಗೆ ನೀರು ಬಿಡುವಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶಕ್ಕೆ ಸಂಬಂಧಿಸಿದ ಚರ್ಚೆಯ ವೇಳೆ ಸಿದ್ದರಾಮಯ್ಯ ಇಂತಹ ಸಂಶಯ ವ್ಯಕ್ತಪಡಿಸಿದರು.

`ಕರುಣಾನಿಧಿ ಅವರು ತಮಿಳುನಾಡಿನ ಮುಖ್ಯಮಂತ್ರಿ ಆಗಿದ್ದ ವೇಳೆ ಇಂತಹ ಸಮಸ್ಯೆ ಆಗಿರುವುದು ಕಡಿಮೆ. ಕುಮಾರಿ ಜಯಲಲಿತಾ ಅಧಿಕಾರದಲ್ಲಿ ಇರುವಾಗ ಮಾತ್ರ ಈ ಸಮಸ್ಯೆ ಎದುರಾಗುತ್ತದೆ. ಅವರು ಯಾಕೆ ಹೀಗೆ ಮಾಡ್ತಾರೋ ಗೊತ್ತಿಲ್ಲ. ಅವರೊಬ್ಬ `ಅನ್‌ರೀಸನಬಲ್ ವಿಮೆನ್'. ಬಹುಶಃ ಮದ್ವೆ ಆಗ್ದೆ ಇರೋದೇ ಕಾರಣವೋ ಏನೋ' ಎಂದರು.

`ಮೇಲುಕೋಟೆ ಕಾರಣ' ಎಂದು ಉಪ ಮುಖ್ಯಮಂತ್ರಿ ಆರ್.ಅಶೋಕ ಹೇಳಿದರು. ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು, `ಅವ್ರ (ಜಯಲಲಿತಾ) ನಮ್ಮ ಕ್ಷೇತ್ರದವರು' ಎಂದರು. ಆಗ ಸಿದ್ದರಾಮಯ್ಯ ಮಧ್ಯಪ್ರವೇಶಿ, `ಹೌದು. ಮೇಲುಕೋಟೆಯಲ್ಲಿ ಹುಟ್ಟಿದವರು ಅವರು. ಇಲ್ಲಿನ ಸಮಸ್ಯೆ ಎಲ್ಲಾ ಗೊತ್ತು. ಆದರೂ ಹೀಗೆ ಮಾಡ್ತಾರಲ್ಲಾ. ಅಲ್ಲಿ ಹುಟ್ಟಿದ್ದು ಕೂಡ ಇದಕ್ಕೆ ಕಾರಣವಾ?' ಎಂದು ಮತ್ತೊಂದು ಪ್ರಶ್ನೆ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT