ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದಾಶಿವ ಆಯೋಗ ವರದಿ ಜಾರಿಗೆ ಆಗ್ರಹ

Last Updated 21 ಡಿಸೆಂಬರ್ 2012, 6:59 IST
ಅಕ್ಷರ ಗಾತ್ರ
ಗದಗ: ನ್ಯಾಯಮೂರ್ತಿ ಎ. ಜೆ. ಸದಾಶಿವ ಆಯೋಗ ವರದಿಯ ಶಿಫಾರಸ್ಸನ್ನು ಯಥಾವತ್ತಾಗಿ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನ್ಯಾ.ಎ.ಜೆ. ಸದಾಶಿವ ಆಯೋಗ ವರದಿ ಅನುಷ್ಠಾನ ಸಮನ್ವಯ ಸಮಿತಿ ನಗರದಲ್ಲಿ ಗುರುವಾರ ಮೆರವಣಿಗೆ ನಡೆಸಿತು.
 
ನಗರಸಭೆ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಸಮಿ ತಿಯ ಸದಸ್ಯರು ಮಾಲಾರ್ಪಣೆ ಮಾಡಿದ ಬಳಿಕ ತಹಶೀಲ್ದಾರ ಕಚೇರಿ ಯವರೆಗೆ ಮೆರವಣಿಗೆಯಲ್ಲಿ ಸಾಗಿ ತಹಶೀಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಅರ್ಪಿಸಿದರು.
 
ಸದಾಶಿವ ಆಯೋಗ ವರದಿ ಜಾರಿ ಗಾಗಿ ಬೆಳಗಾವಿಯಲ್ಲಿ ಈಚೆಗೆ ಶಾಂತಿ ಯುತ ಹೋರಾಟ ಮಾಡುತ್ತಿದ್ದ ಅಮಾ ಯಕರ ಮೇಲೆ ಹಲ್ಲೆ ನಡೆಸಿರುವುದು ಸರಿಯಲ್ಲ. ಕಿಡಿಗೇಡಿಗಳು ಎಸ್‌ಪಿ ಅವರ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳ ಬೇಕು. ಅಮಾಯಕರ ಮೇಲೆ ಹೂಡಿ ರುವ ಮೊಕದ್ದಮೆಗಳನ್ನು ವಾಪಸ್ಸು ಪಡೆಯಬೇಕು ಮತ್ತು ನೊಂದವರ ಕುಟುಂಬಕ್ಕೆ ಪರಿಹಾರ ನೀಡಬೇಕು. ಅಲ್ಲದೇ  ಬ್ಯಾಕಲಾಗ್ ಹುದ್ದೆಗಳನ್ನು ಸರ್ಕಾರ ಕೂಡಲೇ ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.
 
ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಮುಖಂಡರು, ಅಸ್ಪೃಶ್ಯ ಜನಾಂಗಕ್ಕೆ ಆದ ತಾರತಮ್ಯ ಸರಿಪಡಿಸಿ ಸರ್ವರಿಗೂ ಸಮಪಾಲು ಹಾಗೂ ಸಮ ಬಾಳು ದೊರಕುವಂತೆ ಮಾಡಲು ನ್ಯಾ. ಎ.ಜೆ.ಸದಾಶಿವ ಆಯೋಗ ವರದಿಯನ್ನು ಯಥವತ್ತಾಗಿ ಜಾರಿ ಮಾಡಬೇಕು ಎಂದು  ಒತ್ತಾಯಿಸಿದರು.
 
ಮುಖಂಡರಾದ ರಾಮಕಷ್ಣ ದೊಡ್ಡಮನಿ, ಸತೀಶ ಹೂಲಿ, ವಿನಾಯಕ ಬಳ್ಳಾರಿ, ವ್ಹಿ.ಎಸ್.ಬಳ್ಳಾರಿ, ಬಸವರಾಜ ಕಡೇಮನಿ, ಸತೀಶ ಹೂಲಿ, ರಾಮಕಷ್ಣ ದೊಡ್ಡಮನಿ, ಲಕ್ಷ್ಮಣ ಮುಂಡವಾಡ, ವಿ.ಎಸ್.ಬಳ್ಳಾರಿ, ವಸಂತ ಜೋಗಣ್ಣವರ, ಸುರೇಶ ಹೊಸಮನಿ, ರಮೇಶ ಕಡೇಮನಿ,  ಪ್ರಕಾಶ ಹೊಸಳ್ಳಿ, ಮಾರ್ತಂಡಪ್ಪ ಹಾದಿಮನಿ, ವಿಶ್ವನಾಥ ದೊಡ್ಡಮನಿ, ಮೌನೇಶ ಹಾದಿಮನಿ,  ಲವಕುಮಾರ ಬಿಳೆಯಲಿ, ಹನಮಂತ ಜಕ್ಕಲಿ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT