ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದೃಢ ಕುಟುಂಬದಿಂದ ದೇಶದ ಉಳಿವು:ಸ್ವಾಮೀಜಿ

Last Updated 11 ಸೆಪ್ಟೆಂಬರ್ 2013, 19:49 IST
ಅಕ್ಷರ ಗಾತ್ರ

ಕಾರ್ಕಳ: ಕೇವಲ ಎಲೆ ಅಡಿಕೆ ಹಸ್ತಾಂತರದಿಂದ ಆರಂಭವಾಗುವ ವಿವಾಹದ ಬೆಸುಗೆ ನಮ್ಮಲ್ಲಿ ಅನು ಚಾನವಾಗಿ ಉಳಿದು, ಬೆಳೆದು ಸಂಸ್ಕತಿ ರೂಪವಾಗಿ ಬೆಳೆದು ಬಂದಿದೆ. ಇಂತಹ ಸದೃಢ ಕುಟುಂಬಗಳಿಂದ ಮಾತ್ರ ದೇಶದ ಉಳಿವು ಸಾಧ್ಯ ಎಂದು ಕ್ಷೇತ್ರ ಕೇಮಾರು ಸಾಂದೀಪನಿ ಸಾಧನಾಶ್ರಮದ ಈಶ ವಿಠಲದಾಸ ಸ್ವಾಮೀಜಿ ಅಭಿಪ್ರಾಯ ಪಟ್ಟರು.

  ತಾಲ್ಲೂಕಿನ ಬೆಳ್ಮಣ್ ಸಮೀಪದ ಅಬ್ಬನಡ್ಕ ನಂದಳಿಕೆ ಫ್ರೆಂಡ್ಸ್ ಕ್ಲಬ್‌ನ ಸಾರ್ವಜನಿಕ ಗಣೇಶೋತ್ಸವದಲ್ಲಿ ಸೋಮವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.

ಇಂದು ರಿಜಿಸ್ಟ್ರಾರ್ ಕೇಂದ್ರಗಳಲ್ಲಿ ನೋಂದಣಿಯಾಗುವ ವಿವಾಹಗಳು ಅಷ್ಟೇ ವೇಗದಲ್ಲಿ ವಿಚ್ಛೇದಿತವಾಗುತ್ತಿವೆ. ಸುಸಂಸ್ಕೃತ ಕುಟುಂಬಗಳು ಬಲಗೊಂಡಾಗ ದೇಶ ಬಲಿಷ್ಠವಾಗಲಿದೆ. ಕುಟುಂಬಗಳು ಹಾಳಾದಾಗ ದೇಶ ಹಾಳಾಗುತ್ತದೆ. ನಾಲ್ಕು ಆಶ್ರಮಗಳ ಪರಂಪರೆಯಿರುವ ನಮ್ಮ ದೇಶದಲ್ಲಿ ಐದನೆಯ ಆಶ್ರಮವಾಗಿ ಇತ್ತೀಚಿಗೆ ವೃದ್ಧಾಶ್ರಮ ಸೇರಿಕೊಂಡಿದೆ. ಸ್ವಾಮೀಜಿಗಳು ವೃದ್ಧಾಶ್ರಮಗಳ ಉದ್ಘಾಟನೆಗೆ ಮುಂದಾಗುತ್ತಿರುವುದು ದುರಂತ ಎಂದರು.

ಕುಟುಂಬ ಜೀವನ ಮಾತ್ರ ವ್ಯಕ್ತಿಯನ್ನು ಮನುಷ್ಯನಾಗಿ ರೂಪಿಸು ತ್ತದೆ. ಲೌಕಿಕ ವಿದ್ಯೆಯ ಜೊತೆಗೆ ಆಧ್ಯಾತ್ಮಿಕ ಶಿಕ್ಷಣದ ಅಗತ್ಯವಿದ್ದು, ಸಮಾಜದ ಉನ್ನತಿಗೆ ಕೆಲವು ಬದ್ಧತೆಗಳನ್ನು ಪೂರೈಸಬೇಕಾಗುತ್ತದೆ. ಉನ್ನತ ಗುರಿ ಸಾಧಿಸುವ ಹಂಬಲವುಳ್ಳ ವ್ಯಕ್ತಿ, ಎದುರಾಗಬಹುದಾದ ತೊಂದರೆ ಗಳನ್ನು ಎದುರಿಸುವ ಮನೋಭಾವ ಹೊಂದಬೇಕಾಗುತ್ತದೆ ಎಂದರು.

ಶಾಸಕ ವಿ.ಸುನಿಲ್ ಕುಮಾರ್ ಮಾತನಾಡಿ ಶುಭ ಹಾರೈಸಿದರು. ರೋಟರಿ ಜಿಲ್ಲಾ ಮಾಹಿತಿ ಹಕ್ಕು ಸಮಿತಿ ಜಿಲ್ಲಾಧ್ಯಕ್ಷ ಬಿ.ಪುಂಡಲೀಕ ಮರಾಠೆ, ನಂದಳಿಕೆ ಯಕ್ಷ ವಿದ್ಯಾಪೀಠದ ನಿರ್ದೇಶಕ ಜನಾರ್ದನ ಶಾಸ್ತ್ರಿ ನಂದಳಿಕೆ, ಖ್ಯಾತ ಯಕ್ಷಗಾನ ಕಲಾವಿದ ನಂದಳಿಕೆ ಸುಬ್ರಹ್ಮಣ್ಯ ಬೈಪಡಿತ್ತಾಯ, ಸ್ಥಾಪಕ ಅಧ್ಯಕ್ಷ ವಿಠಲ ಮೂಲ್ಯ, ಫ್ರೆಂಡ್ಸ್ ಕ್ಲಬ್‌ನ ಗೌರವಾಧ್ಯಕ್ಷ ರಾಜು ಶೆಟ್ಟಿ ಮತ್ತಿತರರು ಇದ್ದರು.

ಗಣೇಶೋತ್ಸವ ಸಮಿತಿ ಅಧ್ಯಕ್ಷ ಉದಯ ಅಂಚನ್ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಎನ್. ತುಕರಾಮ ಶೆಟ್ಟಿ ಪ್ರಾಸ್ತಾವಿಕ ಮಾತು ಗಳನ್ನಾಡಿದರು. ಸತೀಶ್ ಶೆಟ್ಟಿ ವರದಿ ಓದಿದರು. ಫ್ರಂಡ್ಸ್ ಕ್ಲಬ್ ಅಧ್ಯಕ್ಷ ಸಂದೀಪ್ ವಿ.ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ವೈದಿಕ, ಸಾಂಸ್ಕತಿಕ, ಕ್ರೀಡಾ ಕಾರ್ಯಕ್ರಮಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT