ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದ್ಯದಲ್ಲೇ ಹಿಸ್ಟರಿ

Last Updated 26 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಎ + ಇ ನೆಟ್‌ವರ್ಕ್ಸ್  ಮತ್ತು  ಟಿವಿ 18 ಜತೆಗೂಡಿ ಭಾರತದಲ್ಲಿ `ಹಿಸ್ಟರಿ~ ಟಿವಿ ಚಾನೆಲ್ ಪುನರಾರಂಭಿಸಲಿವೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಇದರ ಪ್ರಚಾರ ರಾಯಭಾರಿ.

ಇದು ಇತಿಹಾಸವನ್ನು ಸ್ವಾರಸ್ಯಕರವಾಗಿ ವೀಕ್ಷಕರ ಮುಂದಿಡುತ್ತದೆ. ಈ ಮೂಲಕ ಇತಿಹಾಸ ಎಂದರೆ ಬೋರಿಂಗ್, ಚರ್ವಿತಚರ್ವಣ ಎಂಬ ಭಾವನೆ ತೊಡೆದು ಹಾಕುತ್ತದೆ. ಚರಿತ್ರೆಯಲ್ಲಿ ಸಮಕಾಲೀನ ಪೀಳಿಗೆಗೆ ಆಸಕ್ತಿ ಮೂಡುವ ರೀತಿಯಲ್ಲಿ ಪ್ರಸ್ತುತಪಡಿಸುವುದು ಈ ಚಾನೆಲ್‌ನ ವಿಶೇಷ.

ಭಾರತವೂ ಸೇರಿ ಪ್ರಪಂಚದಾದ್ಯಂತ ವೀಕ್ಷಕರು ನೈಜ ಮನರಂಜನಾ ಚಾನಲ್‌ಗಳನ್ನು ನೋಡಲು ಪ್ರಾರಂಭಿಸಿದ್ದಾರೆ ಎಂಬುದನ್ನು ಸಂಶೋಧನೆ ಸಾಬೀತುಪಡಿಸಿದೆ.

ಏಕೆಂದರೆ ಇವು ಸಂಪೂರ್ಣ ಭಿನ್ನ ಶೈಲಿಯ ಕಾರ್ಯಕ್ರಮ, ಆಕರ್ಷಕ ಅನುಭವವನ್ನು ವಿಶೇಷವಾಗಿ ಹಿಂದೆಂದೂ ನೋಡಿರದ ಹೊರಾಂಗಣ ಸನ್ನಿವೇಶದಲ್ಲಿ ನೀಡುತ್ತವೆ. ಜನ ಮನರಂಜನೆಗಾಗಿ ಧಾರಾವಾಹಿಗಳು ಮತ್ತು ಪ್ರಸಕ್ತ ರಿಯಾಲಿಟಿ ಟಿವಿಗಳಿಗಿಂತ ಆಚೆ ನೋಡುತ್ತಿದ್ದಾರೆ ಎನ್ನುತ್ತಾರೆ ಎ + ಇ ನೆಟ್‌ವರ್ಕ್ಸ್  ಟಿವಿ 18 ಜಂಟಿ ಉದ್ದಿಮೆಯ ಅಧ್ಯಕ್ಷ ಅಜಯ್ ಚಾಕೊ.

 ಇತಿಹಾಸ ಒಂದು ವಿಷಯವಾಗಿ ಸದಾ ಗತಕಾಲದೊಂದಿಗೆ ಸಂಬಂಧ ಹೊಂದಿರುತ್ತದೆ. ಆದರೆ ನೂತನ ಹಿಸ್ಟರಿ ಚಾನಲ್‌ನೊಂದಿಗೆ, ನಾವು ಜನರ ಇತಿಹಾಸದ ಪರಿಕಲ್ಪನೆಯನ್ನೇ ಬದಲಾಯಿಸುವ ಭರವಸೆಯಲ್ಲಿದ್ದೇವೆ.

ಚಾನಲ್ ಇಂದು ಅತ್ಯಾಧುನಿಕವಾಗಿದೆ; ಇದು ಅಭಿನಯ ಮತ್ತು ಸಾಹಸ ಕುರಿತದ್ದು. ಇದು ಜನರು ಪ್ರತಿದಿನ ಇತಿಹಾಸ ನಿರ್ಮಿಸುವ ಕುರಿತದ್ದು ಎಂದು ಅವರು ಹೇಳುತ್ತಾರೆ.  ಜ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT