ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸನ್ಮಾನ ಬೇಡ ಎಂಬ ಆದರ್ಶ ಇರಲಿ

Last Updated 22 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಮಿತಿಮೀರಿದ ಸನ್ಮಾನ ಸಮಾರಂಭಗಳು, ‘ಜ್ಞಾನಪೀಠ’ ಪ್ರಶಸ್ತಿಯ ಹೆಸರಿನಲ್ಲಿ ಅಡ್ಡಪಲ್ಲಕ್ಕಿ ಉತ್ಸವ ಮಾಡಿಸಿಕೊಳ್ಳುವುದು ನನಗೆ ಇಷ್ಟವಿಲ್ಲ­ಎಂದು ಹೇಳಿದ  ಗಿರೀಶ್‌ ಕಾರ್ನಾಡ್‌­ರ ಮಾತು­ಗಳು (ಪ್ರ.ವಾ. ಡಿ. 17) ನಿಜ­ವಾಗಿಯೂ ನುಡಿಮುತ್ತುಗಳು. ‘ಸನ್ಮಾನ­ವೆಂಬುದು ಸರ್ಕಸ್‌­ನಂತಾಗಿದೆ’ ಎಂಬ ಅವರ ಮಾತಂತೂ ನೂರಕ್ಕೆ ನೂರರಷ್ಟು ಸತ್ಯ.

ಇಂಥ ಆದರ್ಶವನ್ನು ಘನತೆ­ವೆತ್ತ ವ್ಯಕ್ತಿಗಳೂ ಪಾಲಿಸಲಿ. ಇಷ್ಟಕ್ಕೂ ಈ ಸನ್ಮಾನಗಳ ಏರ್ಪಾಟು ಕೆಲ ವ್ಯಕ್ತಿಗಳಿಗೆ, ಸಂಘಗಳಿಗೆ ನೆಪ ಅಷ್ಟೆ. ಹಾಗೆ ಆಯೋಜಿಸುವ ಉದ್ದೇಶ ತಮ್ಮ ಹೆಚ್ಚುಗಾರಿಕೆ ಮೆರೆಯಲು, ಅಥವಾ ತಮ್ಮ ಜಾತಿಯನ್ನು ಮೆರೆಸಲು ಇಲ್ಲವೇ ತಮಗಾಗದ ವ್ಯಕ್ತಿಗಳ ಅಥವಾ ಜಾತಿಗಳ ಹೀಯಾಳಿಕೆಗಳಿಗೆ (ಸನ್ಮಾನ ಸಮಾ­ರಂಭಕ್ಕೆ ಸಂಬಂಧಪಡದಿದ್ದರೂ) ಮತ್ತು ಪತ್ರಿಕೆ ಗಳಲ್ಲಿ ಮಿಂಚುವುದಕ್ಕೇ ಆಗಿರುತ್ತದೆ.
–ಗೌರಿಬಿದನೂರು ರಂಗಪ್ಪ, ಬೆಂಗಳೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT