ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸನ್‌ಫಾರ್ಮಾದಲ್ಲಿ ರ್‍ಯಾನ್‌­ಬಾಕ್ಸಿ ವಿಲೀನ

Last Updated 7 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೇಶದ  ಔಷಧ ತಯಾರಿಕಾ ರಂಗದ ಪ್ರಮುಖ ಕಂಪೆನಿ ಸನ್‌ಫಾರ್ಮಾ­ಸ್ಯುಟಿಕಲ್‌ ಇಂಡಸ್ಟ್ರೀಸ್‌,  ಬಿಕ್ಕಟ್ಟಿಗೆ ಸಿಲುಕಿರುವ ರ್‍ಯಾನ್‌­ಬಾಕ್ಸಿ ಲ್ಯಾಬೊರೇಟರೀಸ್ ಅನ್ನು ಸುಮಾರು 320 ಕೋಟಿ ಡಾಲರ್‌ಗಳಿಗೆ  (ರೂ19,200 ಕೋಟಿ)  ಸ್ವಾಧೀನಪಡಿಸಿ­ಕೊಳ್ಳುವುದಾಗಿ ಹೇಳಿದೆ.

ದೇಶದ ಔಷಧ ಉದ್ಯಮದಲ್ಲಿ ಕೆಳದ ಎರಡು ವರ್ಷಗಳ ನಂತರ ನಡೆಯುತ್ತಿರುವ ದೊಡ್ಡ ಮೊತ್ತದ ಸ್ವಾಧೀನ ಪ್ರಕ್ರಿಯೆ ಇದಾಗಿದೆ. ಈ ಖರೀದಿಯ ಸಂಪೂರ್ಣ ವಹಿವಾಟು ಷೇರುಗಳಲ್ಲೇ ನಡೆಯಲಿದೆ.   ಸದ್ಯ ರ್‍ಯಾನ್‌­ಬಾಕ್ಸಿಯ ಒಂದು ಷೇರಿಗೆ ರೂ457 ಮೌಲ್ಯ ಇದೆ. ಒಪ್ಪಂದದಂತೆ ರ್‍ಯಾನ್‌­ಬಾಕ್ಸಿ ಷೇರು­ದಾರರು, ಪ್ರತಿ ಷೇರಿಗೆ ಸನ್‌ಫಾರ್ಮಾದ ಶೇ 0.8ರಷ್ಟು ಷೇರು ಪಡೆಯಲಿದ್ದಾರೆ ಎಂದು ಉಭಯ ಕಂಪೆನಿಗಳು ಪ್ರಕಟಣೆ­ಯಲ್ಲಿ ತಿಳಿಸಿವೆ.

ಎರಡೂ ಕಂಪೆನಿಗಳು ಸೇರಿ 2013ನೇ ಸಾಲಿನಲ್ಲಿ 420 ಕೋಟಿ ಡಾಲರ್‌­ಗಳಷ್ಟು (ರೂ25,200 ಕೋಟಿ) ವರಮಾನ ಅಂದಾಜು ಮಾಡಿವೆ.  ರ್‍ಯಾನ್‌­ಬಾಕ್ಸಿ  ವಿಲೀನದ ನಂತರ ಸನ್‌ಫಾರ್ಮಾ ದೇಶದ ನಂ 1 ಮತ್ತು ಪ್ರಪಂಚದ ಐದನೆಯ ಅತಿ ದೊಡ್ಡ ಔಷಧ ತಯಾರಿಕಾ ಕಂಪೆನಿ ಎಂಬ ಹೆಗ್ಗಳಿಕೆ ಪಾತ್ರವಾಗಲಿದೆ.

ಎರಡೂ ಕಂಪೆನಿಗಳು ಸೇರಿ 65 ದೇಶಗಳಲ್ಲಿ ಕಾರ್ಯಾ­ಚರಣೆ ಹೊಂದಿದ್ದು, 47 ಔಷಧ ತಯಾರಿಕಾ ಘಟಕಗಳನ್ನು ಹೊಂದಿವೆ. ಈ ಸ್ವಾಧೀನ ಪ್ರಕಟಣೆ ಹೊರಬಿದ್ದ ನಂತರ ರ್‍ಯಾನ್‌­ಬಾಕ್ಸಿ ಷೇರು ಮೌಲ್ಯ ಸೋಮವಾರ ಮುಂಬೈ ಷೇರುಪೇಟೆ­ಯಲ್ಲಿ ಶೇ 3.12ರಷ್ಟು ಕುಸಿತ ಕಂಡಿದ್ದು ರೂ445ರಲ್ಲಿ ವಹಿವಾಟು ಕೊನೆಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT