ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಬ್ಸಿಡಿರಹಿತ ಎಲ್‌ಪಿಜಿ ದರ ರೂ.220 ಏರಿಕೆ

Last Updated 1 ಜನವರಿ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸಹಾಯಧನ ರಹಿತ (ಮುಕ್ತ ಮಾರಾಟ) ಗೃಹಬಳಕೆ ಅಡಿಗೆ ಅನಿಲ (ಎಲ್‌ಪಿಜಿ) ದರವನ್ನು ಸಿಲಿಂಡರ್‌ಗೆ ರೂ. 220 ರಷ್ಟು ಹೆಚ್ಚಿಸಲಾಗಿದೆ. ಇದರಿಂದಾಗಿ ಕರ್ನಾಟಕದಲ್ಲಿ ಆಯಾ ಪಟ್ಟಣಗಳಿಗೆ ಆಧ­ರಿಸಿ 14.2 ಕೆ.ಜಿ. ತೂಕದ ಮುಕ್ತ ಮಾರುಕಟ್ಟೆ ಸಿಲಿಂಡರ್‌ಗಳ ಬೆಲೆ ರೂ. 1234 ರಿಂದ  ರೂ. 1310 ನಡುವೆ ಇರಲಿದೆ.
ಸಹಾಯಧನದಲ್ಲಿ (ರೂ. 421ರಿಂದ 440) ವರ್ಷಕ್ಕೆ ದೊರೆ­ಯುವ 9 ಸಿಲಿಂಡರ್‌ಗಳ ನಂತರ ಗೃಹಬಳಕೆ ಗ್ರಾಹಕರು ಸಿಲಿಂ­­ಡ­ರ್‌­ಗಳನ್ನು ಮುಕ್ತ ಮಾರಾಟ ದರದಲ್ಲಿ ಖರೀದಿಸ­ಬೇಕಾಗುತ್ತದೆ. ಇವುಗಳ ಬಳಕೆಗೆ ಯಾವುದೇ ಮಿತಿ ಇಲ್ಲ.

ಕಳೆದ ಒಂದು ತಿಂಗಳಲ್ಲಿ ಸಹಾಯಧನ ರಹಿತ ಸಿಲಿಂಡರ್‌ ಬೆಲೆ ಮೂರನೇ ಬಾರಿ ಏರಿಕೆ ಮಾಡಲಾಗಿದೆ. ಡಿಸೆಂಬರ್‌ 1ರಂದು ರೂ. 63 ಏರಿಕೆ ಮಾಡಲಾಗಿತ್ತು. ಸರ್ಕಾರ ವಿತರಕರು ಮತ್ತು ಡೀಲರ್‌ಗಳ ಕಮಿಷನ್‌ ಹೆಚ್ಚಿಸಿದಾಗ ಡಿಸೆಂಬರ್‌ 11ರಂದು ರೂ. 3.50 ಏರಿಕೆಯಾಗಿತ್ತು.

ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಪ್ರತಿ ತಿಂಗಳ 1 ರಂದು ಸಹಾಯಧನ ರಹಿತ ಎಲ್‌ಪಿಜಿ ಸಿಲಿಂಡರ್‌ ಬೆಲೆ ಪರಿಷ್ಕರಣೆ ನಡೆಸುತ್ತವೆ. ಸರಾಸರಿ ಆಮದು ವೆಚ್ಚ ಮತ್ತು ಹಿಂದಿನ ತಿಂಗಳ ರೂಪಾಯಿ–ಡಾಲರ್‌ ದರದ ಆಧಾರದಲ್ಲಿ ಈ ಬೆಲೆ ನಿರ್ಧಾರವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT