ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಭೆ: ಕ್ರಿಯಾಯೋಜನೆಗೆ ಸೂಚನೆ

Last Updated 9 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಕನಕಪುರ: ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ತಾಲ್ಲೂಕು ಪಂಚಾಯಿತಿ. ಅಧ್ಯಕ್ಷೆ  ಸುಕನ್ಯಾ ರಂಗಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಸರ್ವ ಸದಸ್ಯರ ವಿಶೇಷ ಸಾಮಾನ್ಯ ಸಭೆಯು ನಡೆಯಿತು. 

 ಶಾಸಕ ಡಿ.ಕೆ.ಶಿವಕುಮಾರ್ ಸಭೆಯಲ್ಲಿ ಭಾಗವಹಿಸಿ ಸದಸ್ಯರಿಂದ ಸಮಸ್ಯೆಗಳ ಸಮಗ್ರ ಮಾಹಿತಿ ಪಡೆದರು. ನಂತರ  ಚರ್ಚಿಸಿ ಅವುಗಳಿಗೆ ಪರಿಹಾರ ಸೂಚಿಸಿದರು. ಸರ್ಕಾರದಿಂದ ಬಂದಿರುವ ಒಂದು ಕೋಟಿ ರೂ ಅನುದಾನಕ್ಕೆ ಕ್ರಿಯಾಯೋಜನೆಯನ್ನು ತಯಾರು ಮಾಡಿ ಕಳುಹಿಸುವಂತೆ ಸೂಚಿಸಿದರು. ಅದಕ್ಕೆ ಸರ್ವ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ನೀಡಿದರು.

 ಈ ಸಂದರ್ಭದಲ್ಲಿ ಕೆಲವು ಸದಸ್ಯರು ಮಾತನಾಡಿ, ತಾಲ್ಲೂಕಿನ ಮಕ್ಳಂದ ಹಾಗೂ ಅಂಬೇಡ್ಕರ್ ಕಾಲೊನಿಗೆ ಸಾರಿಗೆ ಸೌಕರ್ಯವಿಲ್ಲದೆ ವಿದ್ಯಾರ್ಥಿಗಳು ಸೇರಿದಂತೆ ನಾಗರಿಕರು ತೊಂದರೆ ಅನುಭವಿಸುವಂತಾಗಿದೆ. ಗ್ರಾಮಕ್ಕೆ ಬರುತ್ತಿದ್ದ ಸಾರಿಗೆ ಬಸ್ಸುಗಳ ಸಂಚಾರವನ್ನು ಇಲಾಖೆಯವರು ನಿಲ್ಲಿಸಿದ್ದಾರೆ. ಕೂಡಲೆ  ಸಾರಿಗೆ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದರು.

 ಹುಣಸನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ರೈತರು ಸಾಲ ಮಾಡಿ ಬೇಸಾಯ ಮಾಡ್ದ್ದಿದಾರೆ. ಕಾಡು ಪ್ರಾಣಿಗಳು ದಾಳಿ ಮಾಡಿ, ಬೆಳೆ ಹಾನಿ ಮಾಡುತ್ತಿವೆ. ಕಾಡು ಪ್ರಾಣಿಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಶಾಸಕರಲ್ಲಿ ಮನವಿ ಮಾಡಿದರು.
`ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನೀಡುವಲ್ಲಿ ವಿಳಂಬವಾಗುತ್ತಿರುವುದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗಿದೆ~ ಎಂದು ತಹಶೀಲ್ದಾರ್ ವಿರುದ್ಧ ಸದಸ್ಯರು ಆರೋಪಿಸಿದರು. ಇದಕ್ಕೆ ತಹಸೀಲ್ದಾರ್ ಪ್ರಜ್ಞಾ ಪ್ರತಿಕ್ರಿಯಿಸಿ, ಜಾತಿ ಮತ್ತು ಪ್ರಮಾಣ ಪತ್ರ ನೀಡಲು ವಿಳಂಬವಾಗಿಲ್ಲ. ಕಳೆದ ಒಂದು ವಾರದಿಂದ ನೆಮ್ಮದಿ ಕೇಂದ್ರದ ಗಣಕ ಯಂತ್ರ ದುರಸ್ತಿಯಾಗುತ್ತಿದ್ದರಿಂದ ಸ್ಪಲ್ಪ ತಡವಾಗಿದೆ. ಈಗ ಸರಿಪಡಿಸಿ ಬಾಕಿ ಉಳಿದಿರುವ ಅರ್ಜಿಗಳನ್ನು ಪೂರ್ಣಗೊಳಿಸಲಾಗುತ್ತಿದೆ ಎಂದು ವಿವರಿಸಿದರು.

 ತಹಶೀಲ್ದಾರ್ ಉತ್ತರದಿಂದ ತೃಪ್ತರಾಗದ ಶಾಸಕರು, `ಗಣಕ ಯಂತ್ರದ ದೋಷವಿತ್ತು ಎಂಬ ಸಬೂಬು ಬೇಡ.  ಕಳೆದ 23 ವರ್ಷಗಳ ರಾಜಕೀಯ ಅನುಭದಲ್ಲಿ ಕಾಣದಂತಹ ಸಮಸ್ಯೆಗಳನ್ನು ಈ ಬಾರಿ ವಿದ್ಯಾರ್ಥಿಗಳು ಅನುಭವಿಸಿದ್ದಾರೆ. ಈ ಎಲ್ಲಾ ಸಮಸ್ಯೆಗಳು ನಿಮ್ಮಿಂದಲೇ ಸೃಷ್ಟಿಯಾಗಿವೆ~ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

 `ಪಂಚತಂತ್ರ~ ವ್ಯವಸ್ಥೆಯ ಬಗ್ಗೆ ಪ್ರತಿಗ್ರಾಮಗಳಲ್ಲೂ ಟಾಂ ಟಾಂ ಹೊಡಿಸಿ, ಕರಪತ್ರ ಮುದ್ರಸಿ ಹಂಚಿ, ಧ್ವನಿವರ್ಧಕಗಳ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಬೇಕೆಂದು ತಹಸೀಲ್ದಾರ್‌ಗೆ ಸೂಚನೆ ನೀಡಿದರು.  ಉಪಾದ್ಯಕ್ಷ  ವಿಶ್ವಪ್ರಿಯಾ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಜೆ.ಜಿ.ನಾಯಕ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಸಿದ್ದರಾಜು, ಪುರುಷೋತ್ತಮ್ ಸೇರಿದಂತೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT