ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಭೆ ಮುಂದೂಡಿಕೆ: ಆಕ್ರೋಶ

Last Updated 14 ಡಿಸೆಂಬರ್ 2013, 7:43 IST
ಅಕ್ಷರ ಗಾತ್ರ

ಮಾಲೂರು: ತಾಲ್ಲೂಕು ಆಡಳಿತವು ಶುಕ್ರವಾರ ನಿಗದಿಪಡಿಸಿದ್ದ ಪರಿಶಿಷ್ಟ ಜಾತಿ, ಪಂಗಡ ದೌರ್ಜನ್ಯ ಪ್ರಕರಣಗಳ ಸಭೆಯನ್ನು ತಹಶೀಲ್ದಾರ್ ಡಾ.ಸುಧಾ ಕಾರಣ­ವಿಲ್ಲದೇ ಸಭೆ ಮುಂದೂಡಿದ್ದಾರೆ ಎಂದು  ಆರೋಪಿಸಿ ದಲಿತ ಪರ ಸಂಘಟನೆಗಳು ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ತಾಲ್ಲೂಕು ಆಡಳಿತವು ಜನಪ್ರತಿನಿಧಿ­ಗಳ ಕೈಗೊಂಬೆಯಾಗಿ ವರ್ತಿಸುತ್ತಿದೆ ಎಂದು ದಲಿತ ಐಕ್ಯತ ವೇದಿಕೆಯ ಮುಖಂಡ  ಮಣಿಶೆಟ್ಟಹಳ್ಳಿ ಆಂಜಿ ಆರೋಪಿಸಿ­ದರು. ತಹಶೀಲ್ದಾರ್‌ ಪ್ರತಿಭಟನಾಕಾರ­ರನ್ನು ಮನವೊಲಿಸಿ, ತುರ್ತು ಕೆಲಸದ ನಿಮಿತ್ತ ಸ್ಥಳೀಯ ಶಾಸಕರು ಸಭೆಗೆ ಬಾರದೇ ಇರುವುದರಿಂದ ಸಭೆಯನ್ನು ಡಿ.20ಕ್ಕೆ ಮುಂದೂಡಲಾಗಿದೆ.

ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ­ಗಳೊಂದಿಗೆ ಚರ್ಚಿಸಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಲಾಗುವುದು ಎಂದು ಹೇಳಿದ ನಂತರ ಪ್ರತಿಭಟನಾ­ಕಾರರು ಪ್ರತಿಭಟನೆಯನ್ನು ಹಿಂಪಡೆದರು. ದಲಿತ ಐಕ್ಯತ ವೇದಿಕೆ ಪುರಸನಹಳ್ಳಿ ಶ್ರೀನಿವಾಸ್, ಕೋಡೂರು ಗೋಪಾಲ್, ರವಿ, ಸಮತಾ ಸೈನಿಕ ದಳದ ತಾಲ್ಲೂಕು ಅಧ್ಯಕ್ಷ ಗೋವಿಂದಸ್ವಾಮಿ ತಿಪ್ಪಸಂದ್ರ ಶ್ರೀನಿವಾಸ್, ಪಿ.ವೆಂಕಟೇಶ್, ಅರಳೇರಿ ಗೋವಿಂದಪ್ಪ, ತಿಮ್ಮರಾಯಪ್ಪ, ಮುನಿ­ಕೃಷ್ಣಪ್ಪ, ಚಂದ್ರು, ಕಡತೂರು ಕೃಷ್ಣಪ್ಪ, ಸಿದ್ದನಹಳ್ಳಿ ನಾಗರಾಜ್, ಮಾಸ್ತಿ ಮಂಜು, ನಾರಾಯಣಸ್ವಾಮಿ ಪ್ರಕಾಶ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT