ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಭೆಗೆ ಕರೆಯದಿದ್ದರೆ ಡಿಸಿ ಕಚೇರಿಗೆ ಮುತ್ತಿಗೆ

Last Updated 26 ಸೆಪ್ಟೆಂಬರ್ 2011, 6:55 IST
ಅಕ್ಷರ ಗಾತ್ರ

ಹಾವೇರಿ: ದಲಿತರ ಸಮಸ್ಯೆ ನಿವಾರಣೆ ಗಾಗಿ ಆಕ್ಟೋಬರ್ ಮೂರನೇ ವಾರ ದೊಳಗೆ ಜಿಲ್ಲಾಧಿಕಾರಿಗಳು ಸಭೆ ಕರೆಯದಿದ್ದರೆ, ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗು ವುದು ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ವಾಸು ದೇವ ಬಸವ್ವನವರ ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ದಲಿತರ ಮೂಲ ಹಕ್ಕುಗಳ ಜಾರಿಗೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕ ಭಾನುವಾರ ನಗರದಲ್ಲಿ ಹಮ್ಮಿಕೊಂಡ ಅರೆಬೆತ್ತಲೆ ಮೆರವಣಿಗೆ ಹಾಗೂ ರಸ್ತೆತಡೆ ನಡೆಸಿದ ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ನಂತರ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಗಳಿಗೆ ಸಭೆ ನಡೆಸುವ ದಿನಾಂಕ ಪ್ರಕಟಿ ಸುವಂತೆ ಮನವಿ ಮಾಡಿದರು. ಈ ಸಂದ ರ್ಭದಲ್ಲಿ ಜಿಲ್ಲಾಧಿಕಾರಿ ಎಚ್.ಜಿ. ಶ್ರೀವರ ಅವರು ಅಕ್ಟೋಬರ್ ಮೂರನೇ ವಾರದಲ್ಲಿ ಸಭೆ ಕರೆಯು ವುದಾಗಿ ತಿಳಿಸಿದರು.

ಆಗ ಜಿಲ್ಲಾಧಿಕಾರಿಗಳು ತಿಳಿಸಿದಂತೆ ಸಭೆ ನಡೆಸದಿದ್ದರೆ, ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಾಗಿ ಬಸವ್ವನವರ ತಿಳಿಸಿದರು.

ಕಳೆದ ಮೂರುವರೆ ದಶಕಗಳಿಂದ ಶೋಷಿತರ ಮೇಲೆ ನಡೆಯುತ್ತಿರುವ ಸಾಮಾಜಿಕ ಹಾಗೂ ಸಾಂಸ್ಕೃತಿಕ ಅನ್ಯಾ ಯಗಳ ವಿರುದ್ಧ ಹಾಗೂ ಸಮಾಜದಲ್ಲಿ ಸಮಾನತೆ ನಿರ್ಮಾಣ ಕ್ಕಾಗಿ ಹೋರಾಟ ಮಾಡುತ್ತಾ ಬಂದಿ ರುವ ಡಿಎಸ್‌ಎಸ್ ಈಗಾಗಲೇ ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾ ಬಂದಿದೆ. ಆದರೆ, ಯಾವ ಸರ್ಕಾರಗಳ ದಲಿತರ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿ ಸದೇ ದಲಿತರ ಜೀವನದ ಜೊತೆ ಚೆಲ್ಲಾಟವಾಡುತ್ತಿವೆ ಎಂದು ಆರೋಪಿಸಿದರು.

ಈಗ ಮತ್ತೊಮ್ಮೆ ದಲಿತರ ಸಮಗ್ರ ಮೂಲಭೂತ ಹಕ್ಕುಗಳಾದ ಪರಿಶಿಷ್ಟ ಜಾತಿ, ವರ್ಗಗಳ ಶೇ 23 ರಷ್ಟು ಹಣ ವನ್ನು ಏಕಗವಾಕ್ಷಿ ಮೂಲಕ ಜಾರಿ ಗೊಳಿಸಬೇಕು. ಪರಿಶಿಷ್ಟ ಒಳ ಮೀಸ ಲಾತಿ ಕೂಡಲೇ ಜಾರಿ ಮಾಡಬೇಕು. ಸರ್ಕಾರ ಜಮೀನಿನಲ್ಲಿ ಶೇ 50 ರಷ್ಟು ಎಸ್‌ಸಿ, ಎಸ್‌ಟಿ ಭೂರಹಿತರಿಗೆ ಮೀಸಲಿಡಬೇಕು. ಬೆಲೆ ಏರಿಕೆಗೆ ತಕ್ಕಂತೆ ವಿದ್ಯಾರ್ಥಿ ವೇತನ ಹೆಚ್ಚಿಸಬೇಕು. ದೌರ್ಜನ್ಯ ತಡೆ ಕಾಯ್ದೆ ಪರಿಣಾಮ ಕಾರಿಗೊಳಿಸಬೇಕು ಎಂದು ಒತ್ತಾಯಿ ಸಲಾಗುವುದು ಎಂದು ಹೇಳಿದರು.

ಅವುಗಳ ಜತೆಗೆ ಗುತ್ತಿಗೆ ಪೌರ ಕಾರ್ಮಿಕರ, ಸರ್ಕಾರಿ ಆಸ್ಪತ್ರೆ ಹಾಗೂ ವಸತಿ ನಿಲಯಗಳಲ್ಲಿ ಕಾರ್ಯ ನಿರ್ವಹಿ ಸುವ ದಿನಗೂಲಿ ನೌಕರರನ್ನು ಕಾಯಂ ಗೊಳಿಸಬೇಕು. ದಲಿತರ ಸಾಲ ಮನ್ನಾ ಮಾಡಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ 200 ದಿನ ಕೆಲಸ ಒದಗಿಸಬೇಕು. ಜಿಲ್ಲೆಯಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆಸಿದವರಿಗೆ ಶಿಕ್ಷೆ ಯಾಗಬೇಕು. ಕಳ್ಳಭಟ್ಟಿ ಸಾರಾಯಿ ಸೇರಿದಂತೆ ಅಕ್ರಮ ಸಾರಾಯಿ ಮಾರಾಟಕ್ಕೆ ಸಂಪೂರ್ಣ ಕಡಿವಾಣ ಹಾಕಬೇಕು ಎಂಬಿತ್ಯಾದಿ ಸೇರಿ 25 ಹಕ್ಕೊತ್ತಾಯ ಗಳ ಜಾರಿ ಗಾಗಿ ಈ ಹೋರಾಟ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಸಂಚಾಲಕ ಸತ್ಯ ಭದ್ರಾವತಿ, ರಾಜ್ಯ ಸಂಚಾಲಕ ಹೆಣ್ಣುರ ಶ್ರೀನಿವಾಸ, ಆಲೂರ ನಿಂಗ ರಾಜ, ಮಾಲತೇಶ ಯಲ್ಲಾಪುರ, ನಿಂಗ ರಾಜ ದಂಡೆಮ್ಮನವರ, ನಿಂಗಪ್ಪ ನಿಂಬಕ್ಕನವರ, ಉಡಚಪ್ಪ ಮಾಳಗಿ, ಚಂದ್ರಕಾಂತ ಮರಿಯಣ್ಣನವರ, ಜಗ ದೀಶ ಹರಿಜನ, ಭೀಮಣ್ಣ ಹೊತ್ತೂರ, ಕಲಾವತಿ ಓಲೇಕಾರ, ಗಂಗಮ್ಮ ದೊಡ್ಡ ಮನಿ, ಬಸಣ್ಣ ಮುಗಳಿ, ಬಸವರಾಜ ಕಡೆಮನಿ, ಶೇಯಣ್ಣ ಹರಿಜನ, ಫಕ್ಕೀ ರೇಶ ಮೆಳ್ಳಳ್ಳಿ, ಭೀಮೇಶ ಯಲ್ಲಾಪುರ, ಮಜೀದ್ ಮಾಳಗಿಮನಿ ಅಲ್ಲದೇ ಅನೇಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT