ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮರ್ಪಕ ನೀರು ಪೂರೈಕೆಗೆ ಸೂಚನೆ

Last Updated 6 ಜನವರಿ 2012, 7:30 IST
ಅಕ್ಷರ ಗಾತ್ರ

ಬಳ್ಳಾರಿ: ಬೇಸಿಗೆ ಸಮೀಪಿಸುತ್ತಿದ್ದು, ತಾಲ್ಲೂಕಿನ ವಿವಿಧೆಡೆ ಕುಡಿಯುವ ನೀರು ಪೂರೈಕೆಗೆ ಯಾವುದೇ ತೊಂದರೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಬಳ್ಳಾರಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಹನುಮಂತಪ್ಪ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳನ್ನು ಗುರುತಿಸಿ ಕ್ರಿಯಾ ಯೋಜನೆ ಸಿದ್ಧಪಡಿಸಬೇಕು ಎಂದರು.

ಬಳ್ಳಾರಿ ತಾಲ್ಲೂಕು ಮಟ್ಟದ ಟಾಸ್ಕ್‌ಫೋರ್ಸ್ ಸಮಿತಿಯಲ್ಲಿ ಅನುಮೋದನೆ ಪಡೆದು ಕಾರ್ಯೋನ್ಮುಖವಾಗಬೇಕು. ಎಲ್ಲ ಯೋಜನೆಗಳನ್ನು ನಿಗದಿತ ಅವಧಿ ಯಲ್ಲಿ ಪೂರ್ಣಗೊಳಿಸಬೇಕು. ಯಾವುದೇ ಅನುದಾನ ಕಡಿತ ಆಗದಂತೆ ಕ್ರಮ ಕೈಗೊಳ್ಳಬೇಕು. ಯೋಜನೆಗಳು ಅರ್ಹ ಫಲಾನುಭವಿ ಗಳಿಗೆ  ತಲುಪುವಂತೆ ಕ್ರಮ ಕೈಗೊಳ್ಳ ಬೇಕು ಎಂದು ಸೂಚಿಸಿದರು.

ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಬಳ್ಳಾರಿಯ ಪೂರ್ವ ಮತ್ತು ಪಶ್ಚಿಮ ವಲಯದ 1386 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸವನ್ನು ಆಯೋಜಿಸ ಲಾಗಿದೆ. ಕರಕುಶಲಕಲೆ ಪ್ರೋತ್ಸಾಹಿ ಸುವ ನಿಟ್ಟಿನಲ್ಲಿ ಕುಶಲ ಕರ್ಮಿಗಳಿಗೆ ಸೌಲಭ್ಯ ಸೇರಿದಂತೆ  ಯಾವುದೇ ಯೋಜನೆಯಡಿ ಫಲಾನುಭವಿಗಳನ್ನು ಆಯ್ಕೆ ಮಾಡುವ ಮುನ್ನ ತಾಲೂಕು ಪಂಚಾಯಿತಿ ಸದಸ್ಯರ ಗಮನಕ್ಕೆ ತರಬೇಕು ಎಂದು ಅವರು ತಿಳಿಸಿದರು.

ಆರೋಗ್ಯ ಕಾರ್ಯಕರ್ತೆಯರು ಗ್ರಾಮೀಣ ಜನರಲ್ಲಿ ಸ್ವಚ್ಛತೆ, ಮಾರಕ ರೋಗಗಳ ನಿರ್ಮೂಲನೆ, ಕುಟುಂಬ ಕಲ್ಯಾಣ ಯೋಜನೆ, ಪಲ್ಸ್ ಪೊಲಿಯೋ, ಶಿಶು ಮರಣ ಮತ್ತಿತರ ವಿಷಯಗಳ ಕುರಿತು ಜಾಗೃತಿ ಮೂಡಿಸಬೇಕು ಎಂದರು.

ತಾಲ್ಲೂಕಿನಾದ್ಯಂತ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯನ್ನು ವ್ಯವಸ್ಥಿತ ವಾಗಿ ಅನುಷ್ಠಾನಗೊಳಿಸಬೇಕು. ಸುವರ್ಣ ಗ್ರಾಮ, ಸಂಪೂರ್ಣ ಸ್ವಚ್ಛತಾ ಆಂದೋಲನ ಕಾರ್ಯಕ್ರಮ ಗಳನ್ನು ಯಶಸ್ವಿಯಾಗಿ ಅನುಷ್ಠಾನ ಗೊಳಿಸಬೇಕು ಎಂದು ತಾ.ಪಂ. ಅಧ್ಯಕ್ಷೆ ಲಕ್ಷ್ಮಿದೇವಿ  ಸೂಚಿಸಿದರು.
ತಾ.ಪಂ. ವ್ಯವಸ್ಥಾಪಕ ಬಸವರಾಜ ಹಿರೇಮಠ ಸಭೆಗೆ ಮಾಹಿತಿ ನೀಡಿದರು.

ವಾಲ್ಮೀಕಿ ನಾಯಕ ಜಾಗೃತ ವೇದಿಕೆ ಅಸ್ತಿತ್ವಕ್ಕೆ
ನಂ.2 ಮುದ್ದಾಪುರ (ಕಂಪ್ಲಿ):
ಕಂಪ್ಲಿ ಪಟ್ಟಣದಲ್ಲಿ ವಾಲ್ಮೀಕಿ ಸಮುದಾಯ ಭವನವನ್ನು ನಿರ್ಮಿಸುವಂತೆ ಕರ್ನಾಟಕ ವಾಲ್ಮೀಕಿ ನಾಯಕ ಜಾಗೃತ ವೇದಿಕೆ ಕಂಪ್ಲಿ ವಿಧಾನಸಭಾಕ್ಷೇತ್ರ ಅಧ್ಯಕ್ಷ ಎನ್. ಶಿವಪ್ಪನಾಯಕ ಸರ್ಕಾರವನ್ನು ಆಗ್ರಹಿಸಿದರು.

ಇಲ್ಲಿಗೆ ಸಮೀಪದ ನಂ.2 ಮುದ್ದಾಪುರ ಗ್ರಾಮದಲ್ಲಿ ಕರ್ನಾಟಕ ವಾಲ್ಮೀಕಿ ನಾಯಕ ಜಾಗೃತ ವೇದಿಕೆ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದರು.

ಜಾಗೃತ ವೇದಿಕೆ ಕಂಪ್ಲಿ ಘಟಕದ ಅಧ್ಯಕ್ಷ ವಿ. ರಘುನಾಯಕ ಮಾತ ನಾಡಿದರು. ಇದೇ ಸಂದರ್ಭದಲ್ಲಿ ನಾಯಕ ಜಾಗೃತಿ ನೂತನ ಸಮಿತಿ ರಚಿಸ ಲಾಯಿತು. ದಾಸಾಪುರ ಹನುಮಯ್ಯ ಅಧ್ಯಕ್ಷರಾಗಿ ಹಾಗೂ ಜಿ. ಗೋವಿಂದಪ್ಪ (ಪ್ರಧಾನ ಕಾರ್ಯ ದರ್ಶಿಗಳಾಗಿ ಆಯ್ಕೆ ಆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT