ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆ ಪರಿಹರಿಸದಿದ್ದರೆ ಹೋರಾಟ

Last Updated 17 ಜೂನ್ 2011, 7:25 IST
ಅಕ್ಷರ ಗಾತ್ರ

ಮೈಸೂರು: ಕಬ್ಬು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಜಿಲ್ಲಾಡಳಿತ ಪರಿಹರಿಸದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಕಬ್ಬು ಬೆಳೆಗಾರರ ಹೋರಾಟ ಹಿತ ರಕ್ಷಣಾ ಸಮಿತಿ ಇಲ್ಲಿ ಎಚ್ಚರಿಕೆ ನೀಡಿತು.

`2010-11ನೇ ಸಾಲಿನ ಕಬ್ಬಿನ ದರವನ್ನು ರೂ.2500ಕ್ಕೆ ನಿಗದಿ ಮಾಡಬೇಕು. ಬಾಕಿ ಉಳಿಸಿಕೊಂಡಿರುವ ಹಣಕ್ಕೆ ಕಾರ್ಖಾನೆಯವರು ಬಡ್ಡಿ ಸೇರಿಸಿ ಕೊಡಬೇಕು. ಉತ್ತರ ಕರ್ನಾಟಕ ಮಾದರಿಯಲ್ಲಿ ಕಬ್ಬು ಕಟಾವು ಮತ್ತು ಸಾಗಣಿಕೆ ವೆಚ್ಚವನ್ನು ಕಾರ್ಖಾನೆಯ ಆಡಳಿತ ಮಂಡಳಿ ಭರಿಸಬೇಕು~ ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ಹಳೆಮಿರ್ಲೆ ಸುನಯ್‌ಗೌಡ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

`2011-12 ನೇ ಸಾಲಿನ ಕಬ್ಬಿನ ದರವನ್ನು ಕಾರ್ಖಾನೆ ಆರಂಭಕ್ಕೆ ಮುನ್ನವೆ ನಿಗದಿ ಮಾಡಬೇಕು. ಅಕ್ರಮ- ಸಕ್ರಮ ಪಂಪ್‌ಸೆಟ್ ಬೆಳೆಗಾರರಿಂದ ರೂ.10 ಸಾವಿರ ದಂಡವಾಗಿ ರೈತರಿಂದ ವಸೂಲಿ ಮಾಡಲಾಗುತ್ತಿದೆ. ಕೂಡಲೇ ಇದನ್ನು ನಿಗದಿಪಡಿಸಬೇಕು. ವ್ಯವಸಾಯ ಸಹಕಾರ ಸಂಘಗಳು ರಸಗೊಬ್ಬರವನ್ನು ಮುಖಬೆಲೆಗಿಂದ ಹೆಚ್ಚು ದರಕ್ಕೆ ಮಾರಾಟ ಮಾಡುವುದನ್ನು ತಪ್ಪಿಸಬೇಕು~ ಎಂದು ಒತ್ತಾಯಿಸಿದರು.

`ನೆಮ್ಮದಿ ಕೇಂದ್ರಗಳಲ್ಲಿ ರೈತರಿಗೆ ನೆಮ್ಮದಿಯೇ ದೊರಕುತ್ತಿಲ್ಲ. ಆರ್‌ಟಿಸಿ ಪಡೆಯಲು ನೆಮ್ಮದಿ ಕೇಂದ್ರಗಳ ಮುಂದೆ ರೈತರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಆದರೂ ಸರಿಯಾಗಿ ಆರ್‌ಟಿಸಿಗಳನ್ನು ರೈತರಿಗೆ ನೀಡಲಾಗುತ್ತಿಲ್ಲ. ಆರ್‌ಟಿಸಿಯನ್ನು ರೈತರಿಗೆ ಸರಿಯಾಗಿ ವಿತರಣೆ ಮಾಡಬೇಕು~ ಎಂದು ಒತ್ತಾಯಿಸಿದರು.

`ಹಿಂದಿನ ಜಿಲ್ಲಾಧಿಕಾರಿ ಹರ್ಷಗುಪ್ತ ಅವರು ಕಬ್ಬು ಬೆಳೆಗಾರರ ಸಭೆ ಕರೆದು ಸಮಸ್ಯೆ ಪರಿಹರಿಸಲು ಮುಂದಾದರು. ಆದರೆ ಸಭೆ ವಿಫಲವಾಯಿತು. ಹಾಲಿ ಇರುವ ಜಿಲ್ಲಾಧಿಕಾರಿಗಳು ಮತ್ತೆ ಸಭೆ ಕರೆದು ಸಮಸ್ಯೆ ಪರಿಹರಿಸಲು ಮುಂದಾ ಗಬೇಕು. ಇಲ್ಲವಾದಲ್ಲಿ ಹೋರಾಟದ ಹೆಜ್ಜೆ ಅನಿವಾರ್ಯ~ ಎಂದು ತಿಳಿಸಿದರು.

ಪ್ರತ್ಯೇಕ ಬಣ: `ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಅವರ ನೇತೃತ್ವದಲ್ಲಿ ಎರಡು ವರ್ಷಗಳಿಂದ ಕಬ್ಬು ಬೆಳೆಗಾರರ ಪರವಾಗಿ ಯಾವುದೇ ಹೋರಾಟಗಳು ನಡೆದಿಲ್ಲ. ಅದೇ ಬಣ ದಲ್ಲಿದ್ದ ನಾವು ಹೊರ ಬಂದು ಪ್ರತ್ಯೇಕ ಬಣ ರಚಿಸಿದ್ದೇವೆ~ ಎಂದರು.

ು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಮುಖಂಡರಾದ ಬೂದಿತಿಟ್ಟು ಗುರುಸ್ವಾಮಿ, ಎಂ.ಎಸ್.ರಾಜೇಂದ್ರ, ಜಿ. ಮಾರಹಳ್ಳಿ ಮಂಜುನಾಥ್, ಮೈಸೂರು ವಾಸು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT