ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆಗಳ ಸರಮಾಲೆ ಶಾಲೆ

Last Updated 25 ಫೆಬ್ರುವರಿ 2011, 19:05 IST
ಅಕ್ಷರ ಗಾತ್ರ

ಗುಂಡ್ಲುಪೇಟೆ:  ತಾಲ್ಲೂಕಿನ ಹೊಂಗಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ ಸಮಸ್ಯೆಗಳ ಆಗರವಾಗಿದ್ದು ವಿದ್ಯಾರ್ಥಿಗಳು ತೊಂದರೆ ಅನುಭ–ವಿಸುವ ಸ್ಥಿತಿ ನಿರ್ಮಾಣವಾಗಿದೆ.

ಈ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ 83 ವಿದ್ಯಾರ್ಥಿಗಳಿದ್ದು ಕೇವಲ ಇಬ್ಬರೇ ಶಿಕ್ಷಕರಿದ್ದಾರೆ. ಕೊಠಡಿಗಳು ಸಮರ್ಪಕವಾ–ಗಿಲ್ಲದ ಕಾರಣ ವಿದ್ಯಾ–ರ್ಥಿಗಳು ಜಗಲಿಯ ಮೇಲೆಯೇ ಕುಳಿತು ಪಾಠ ಕೇಳುವ ಪರಿಸ್ಥಿತಿ ಇದೆ. ಇಲ್ಲಿಗೆ ಬರುವ ವಿದ್ಯಾರ್ಥಿಗಳ ಪೋಷಕರು ಕೂಲಿಕಾರರೇ ಹೆಚ್ಚಾಗಿರುವುದರಿಂದ ಸೌಲ––ಭ್ಯಗಳ ಕೊರತೆ ಇದ್ದರೂ ಈ ಶಾಲೆಗೇ ಮಕ್ಕಳನ್ನು ಕಳಿಸಬೇಕಾದ ಅನಿವಾರ್ಯತೆ ಇದೆ. ಇಬ್ಬರೇ ಶಿಕ್ಷಕರಿರುವುದರಿಂದ ಸಮಗ್ರ ಪಠ್ಯ ಬೋಧನೆ, ವಿದ್ಯಾರ್ಥಿಗಳ ನಿಯಂತ್ರಣ ಕಷ್ಟಕರವಾಗಿದೆ. ಒಂದೇ ಕೊಠಡಿಯಲ್ಲಿ ವಿವಿಧ ತರಗತಿಗಳನ್ನು ನಡೆಸಬೇಕಾಗಿದೆ. ಶಿಕ್ಷಕರೂ ತರಗತಿಗಳಲ್ಲಿ ‘ಚತುರ್ಮುಖ ಬ್ರಹ್ಮ’ರಾಗಿ ಬೋಧಿ–ಸಲೇಬೇಕಾದ ಪರಿಸ್ಥಿತಿ ಇದೆ.

ಕುಡಿಯುವ ನೀರಿನ ವ್ಯವಸ್ಥೆ ಇಲ್ಲದ ಕಾರಣ ಬಿಸಿಯೂಟ ತಯಾರಿಸಲು ನೀರನ್ನು ಬೇರೆಡೆಯಿಂದ ತರಬೇಕಾದ ಸ್ಥಿತಿ ಇದೆ. ಉತ್ತಮವಾದ ಮೈದಾನವು ಇಲ್ಲದಿರುರುವುದು ವಿದ್ಯಾರ್ಥಿಗಳ ಆಟೋಟಗಳಿಗೆ ತೊಡಕಾಗಿದೆ.

ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಮತ್ತು ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ  ಶಾಲೆಗೆ ಅಗತ್ಯ ಮೂಲಸೌಲಭ್ಯ ಒದಗಿಸಲು ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT