ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆಯನ್ನು ಕಗ್ಗಂಟಾಗಿಸಬೇಡಿ

Last Updated 17 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಮಡೆ ಮಡೆ ಸ್ನಾನ ಸಂಪ್ರದಾಯ, ಸ್ವಾತಂತ್ರ್ಯ­ಪೂರ್ವದ ‘ಸತಿ ಸಹಗಮನ’ ಪದ್ಧತಿಯಂಥ ಕ್ರೂರ ಆಚರಣೆ ಅಲ್ಲ. ಇದು ಒಂದು ವರ್ಗದ ಭಕ್ತ ಜನರ ಶ್ರದ್ಧಾಚರಣೆಯಂತೂ ಹೌದು. ಅಂತಹ ಭಕ್ತರನ್ನು ಒಂದೆಡೆ ಸೇರಿಸಿ ಅವರಲ್ಲಿ ಜಾಗೃತಿಯನ್ನುಂಟು ಮಾಡಿ ಅವರ ಮನ ಒಲಿಸುವ (ಕೌನ್ಸೆಲಿಂಗ್‌), ಪ್ರಯತ್ನ ಸಾಗಬೇ­ಕಾಗಿದೆ. ಅದು ಬಿಟ್ಟು ಬಲ ಪ್ರಯೋಗ, ಜೈಲು ಶಿಕ್ಷೆ, ಮರಣದಂಡನೆ ಎಂಬಂತಹ ಬಿರುನುಡಿ­ಗಳ­ನ್ನಾಡುವುದು ಸಮಸ್ಯೆಯನ್ನು ಇನ್ನಷ್ಟು ಕಗ್ಗಂಟಾ­ಗಿ­ಸುತ್ತದೆ.

ಮಡೆ ಮಡೆ ಸ್ನಾನ ವಿರುದ್ಧ ಟೊಂಕ ಕಟ್ಟಿರುವ ಪ್ರಗತಿಪರರು, ಸಮಾಜೋದ್ಧಾರಕರು ತಮ್ಮ ಶ್ರಮವನ್ನು ಸಮಾಜದ ಇನ್ನುಳಿದ ಅನಿಷ್ಟಗಳೆನಿಸಿದ ಧೂಮಪಾನ ಹಾಗೂ ಬಡ ಕುಟುಂಬಗಳಿಗೆ ಮಾರಕವಾದ ಮದ್ಯಪಾನ ಪಿಡುಗನ್ನು ತೊಲಗಿಸುವತ್ತ ಯಾಕೆ ಕೇಂದ್ರೀಕರಿಸಬಾರದು?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT