ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜ ಕಲ್ಯಾಣ ಕಚೇರಿಗೆ ಬೀಗ

Last Updated 10 ಜೂನ್ 2011, 6:15 IST
ಅಕ್ಷರ ಗಾತ್ರ

ಮುದ್ದೇಬಿಹಾಳ: ವಸತಿ ನಿಲಯಗಳಲ್ಲಿ ಇರುವ ವಿದ್ಯಾರ್ಥಿಗಳಿಗೆ ಸರಿಯಾಗಿ ಊಟ, ಬಟ್ಟೆ, ಪುಸ್ತಕಗಳನ್ನು ನೀಡದೇ ಇರುವದನ್ನು ಪ್ರತಿಭಟಿಸಿ ಗುರುವಾರ ದಲಿತ ಸಂಘರ್ಷ ಸಮಿತಿ (ಸಾಗರ ಬಣ) ಸದಸ್ಯರು ಸಮಾಜ ಕಲ್ಯಾಣ ಇಲಾಖೆಗೆ ಬೀಗ ಜಡಿದು  ಪ್ರತಿಭಟಿಸಿದರು.

ಪಟ್ಟಣದ ಡಾ.ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ವೃತ್ತ, ತಹಸೀಲ್ದಾರ ಕಚೇರಿ, ನಂತರ ಸಮಾಜ ಕಲ್ಯಾಣ ಇಲಾಖೆಯ ಕಚೇರಿಗೆ ಬಂದ ಪ್ರತಿಭಟನಾಕಾರರು ಅಧಿಕಾರಿಗಳ ಕಾರ್ಯ ವೈಖರಿ ವಿರುದ್ಧ ಘೋಷಣೆ ಕೂಗಿದರು.
ಈ ಸಂಬಂಧ ತಾಲ್ಲೂಕು ಶಿರಸ್ತೇದಾರ ಎಂ.ಎ.ಎಸ್. ಬಾಗವಾನ ಅವರಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲಾ ಸಂಚಾಲಕ ಅಶೋಕ ಚಲವಾದಿ ಮಾತನಾಡಿ, ಸಮಾಜದ ಹಿಂದುಳಿದವರಿಗೆ, ಮಾರ್ಗದರ್ಶನ ಮಾಡಬೇಕಿದ್ದ ಇಲಾಖೆಯ ಅಧಿಕಾರಿ ಗಳು ಗೈರು ಹಾಜರಾಗುವ ಮೂಲಕ ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡಿದ್ದಾರೆ.
 
ಬಹಳ ವರ್ಷಗಳಿಂದ ಇಲಾಖೆಯಲ್ಲಿ ಬೇರು ಬಿಟ್ಟಿರುವ ಕೆಲವು ನೌಕರರನ್ನು ಕೂಡಲೇ ಬೇರೆಡೆ ವರ್ಗ ಮಾಡುವ ಮೂಲಕ ಇಲಾಖೆಗೆ ಕಾಯಕಲ್ಪ ನೀಡಬೇಕೆಂದು ಹೇಳಿದರು.

ಬಸವರಾಜ ಹೊರ್ತಿ, ನಾಗೇಶ ಹಡಲಗೇರಿ, ಪರಶುರಾಮ ಸಾಗರ, ಹನುಮಂತ ಕೊಡಗಾನೂರ, ಪಿ.ಪಿ.ಸಾಗರ, ಶಿವು ಶಿವಪೂರ, ಈರಣ್ಣ ತಾರನಾಳ, ಪ್ರಶಾಂತ ಕಾಳೆ, ನೀಲಪ್ಪ ಕೋಳೂರ, ಯಲ್ಲಪ್ಪ ಚಲವಾದಿ, ರಾಜು ಪರಿರಂಗಿ, ಪರಶುರಾಮ ದಿಂಡವಾರ, ಯಲ್ಲಪ್ಪ ತಂಗಡಗಿ, ಯಲ್ಲಪ್ಪ ಅಜಮನಿ, ಚಂದ್ರಶೇಖರ ದೊಡ್ಡಮನಿ, ಬಸವರಾಜ ಚಲವಾದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT