ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಸಮಾಜ ಪರಿವರ್ತನೆಗೆ ಶಿಕ್ಷಣ ಅಗತ್ಯ'

Last Updated 3 ಡಿಸೆಂಬರ್ 2012, 7:14 IST
ಅಕ್ಷರ ಗಾತ್ರ

ಮಾನ್ವಿ: ಭಕ್ತ ಶ್ರೇಷ್ಠ ಕನಕಾದಾಸರು ಸಮಾಜ ಪರಿವರ್ತನೆಯ ಹರಿಕಾರರು. ಹಾಲುಮತ ಸಮಾಜದವರು ಸಾಮಾಜಿಕವಾಗಿ ಪ್ರಗತಿ ಸಾಧಿಸಲು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಜಾ ವೆಂಕಟಪ್ಪ ನಾಯಕ ಹೇಳಿದರು.

ಶನಿವಾರ ತಾಲ್ಲೂಕು ಕುರುಬರ ಸಂಘ ಹಮ್ಮಿಕೊಂಡಿದ್ದ ಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಉಪನ್ಯಾಸಕ ಡಾ.ಕೆ.ಶಿವರಾಜ ಅವರು ಕನಕದಾಸರ ಜೀವನ ಚರಿತ್ರೆ ಕುರಿತು ಉಪನ್ಯಾಸ ನೀಡಿದರು. ಪಿ.ತಿಪ್ಪಣ್ಣ ಬಾಗಲವಾಡ ವಕೀಲ ಹಾಗೂ ಹಾಲುಮತ ಸಮಾಜದ ಹಿರಿಯ ಮುಖಂಡ ರಾಮಚಂದ್ರಪ್ಪ ಮುಷ್ಟೂರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಬಿ.ಕೆ.ಅಮರೇಶಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬೀರಪ್ಪ ಪೂಜಾರಿ, ಗುಡದಿನ್ನಿ ಪೂಜಾರಿ ಹಾಗೂ ಶಾಂತವೀರ ಪೂಜಾರಿ ಸಾನಿಧ್ಯವಹಿಸಿದ್ದರು.

ಹಾಲುಮತ ಸಮಾಜದ ಮುಖಂಡರಾದ ಪುರಸಭೆ ಮಾಜಿ ಅಧ್ಯಕ್ಷ ಕೆ.ಬಸವಂತಪ್ಪ, ಕೆ.ಅಮರಗುಂಡಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ಹನುಮೇಶ ಮದ್ಲಾಪುರ, ಪುರಸಭೆಯ ಪ್ರತಿಪಕ್ಷದ ನಾಯಕ ರಾಜಾ ಮಹೇಂದ್ರ ನಾಯಕ, ಡಿ.ವೆಂಕಟೇಶ, ಕೆ.ವೆಂಕಣ್ಣ, ಬಸವರಾಜ ಪಾಟೀಲ್ ಡೊಣಮರಡಿ, ದೇವೇಂದ್ರಪ್ಪ ಬೊಮ್ಮನಾಳ, ಶಿವನಗೌಡ ಬೊಮ್ಮನಾಳ, ಗುರಪ್ಪ ಬಾಗಲವಾಡ, ವನಕೇರಪ್ಪ ಮಾನ್ವಿ, ಶಿವಣ್ಣ ಕವಿತಾಳ, ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಶೈಲಗೌಡ ಮತ್ತಿತರರು ವೇದಿಕೆಯಲ್ಲಿದ್ದರು.

ಹಂಪಣ್ಣ ಚೆಂಡೂರ ಕಾರ್ಯಕ್ರಮ ನಿರೂಪಿಸಿದರು. ಶ್ರೀಶೈಲಗೌಡ ಸ್ವಾಗತಿಸಿದರು. ಅಯ್ಯಪ್ಪ ಗಿಣಿವಾರ ವಕೀಲ ವಂದಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಮಾಜಿ ಪ್ರಧಾನಿ ಐ.ಕೆ.ಗುಜ್ರಾಲ್ ನಿಧನರಾದ ಹಿನ್ನೆಲೆಯಲ್ಲಿ ಎರಡು ನಿಮಿಷ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕಾರ್ಯಕ್ರಮಕ್ಕೆ ಮುಂಚೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಕಾರ್ಯಕ್ರಮ ಆಯೋಜಿಸಿದ್ದ ಟಿ ಎಪಿಸಿ ಎಂ ಎಸ್ ಆವರಣದವರೆಗೆ ಕನಕದಾಸರ ಭಾವಚಿತ್ರದ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು.

ಕಲ್ಮಠ ಕಾಲೇಜು: ಪಟ್ಟಣದ ಶ್ರೀಪಂಪಾ ವಿರೂಪಾಕ್ಷೇಶ್ವರ ಕಲ್ಮಠ ಪದವಿ ಪೂರ್ವ ಕಾಲೇಜಿನಲ್ಲಿ ಕನಕ ಜಯಂತಿ ಅಂಗವಾಗಿ ಪ್ರಾಚಾರ್ಯ ಎಸ್.ಎಸ್.ಪಾಟೀಲ ಕನಕದಾಸರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಉಪನ್ಯಾಸಕರಾದ ಎಂ.ವೀರೇಶ, ಎಂ.ನಾಗಭೂಷಣಸ್ವಾಮಿ, ರತ್ನಾಬಾಯಿ ಶಿರೋಳ್ಕರ್, ಮಲ್ಲೇಶಪ್ಪ ಬ್ಯಾಗವಾಟ, ಅಜಯ್‌ಕುಮಾರ, ಸಿದ್ದನಗೌಡ, ರಮೇಶ ಹಿರೇಮಠ, ರಾಜಶೇಖರ್ ಸಿಗಂಡದಿನ್ನಿ ಮತ್ತಿತರರು ಇದ್ದರು. ಮಾಜಿ ಪ್ರಧಾನಿ ಐ.ಕೆ.ಗುಜ್ರಾಲ್ ನಿಧನರಾದ ಹಿನ್ನೆಲೆಯಲ್ಲಿ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ನೇತಾಜಿ ಶಿಕ್ಷಣ ಸಂಸ್ಥೆ: ಪಟ್ಟಣದ ನೇತಾಜಿ ಶಿಕ್ಷಣ ಸಂಸ್ಥೆಯಲ್ಲಿ ಕನಕ ಜಯಂತಿ ಅಂಗವಾಗಿ ಕಾರ್ಯದರ್ಶಿ ಕೆ.ವಿಜಯಲಕ್ಷ್ಮೀ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಅಧ್ಯಕ್ಷ ಕೆ.ಈ.ನರಸಿಂಹ ಮಾತನಾಡಿ, ಕನಕದಾಸರ ಆದರ್ಶಗಳು ಅನುಕರಣೀಯ ಎಂದರು. ಶಿಕ್ಷಕಿ ಬನ್ನಮ್ಮ ಕನಕದಾಸರು ರಚಿಸಿದ ಗೀತೆಗಳನ್ನು ಹಾಡಿದರು. ನೇತಾಜಿ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಗಳ ಮುಖ್ಯೋಪಾಧ್ಯಾಯರಾದ ಹನೀಸ್ ಫಾತೀಮಾ ಹಾಗೂ ಈರಮ್ಮ ಮತ್ತಿತರ ಶಿಕ್ಷಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT