ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜದ ಏಳ್ಗೆಗೆ ಸ್ವಾರ್ಥದ ಬದುಕು ತ್ಯಾಗ ಮಾಡಿ

Last Updated 3 ಅಕ್ಟೋಬರ್ 2012, 4:45 IST
ಅಕ್ಷರ ಗಾತ್ರ

ಶಹಾಪುರ: ಜಿಲ್ಲೆಯಲ್ಲಿ ಕುರುಬ ಸಮಾಜ ಹೆಚ್ಚಿನ ಜನಸಂಖೆ ಹೊಂದಿದ್ದು ಕುರುಬ ಸಮುದಾಯದ ಒಬ್ಬ ಶಾಸಕರು ಆಯ್ಕೆಯಾಗಿಲ್ಲ. ಮುಖ್ಯವಾಗಿ ಸಮಾಜದಲ್ಲಿ ಶಿಕ್ಷಣ ಕೊರತೆ ಹಾಗೂ ಸಂಘಟನೆಯ ಜೊತೆಯಲ್ಲಿ ಹೋರಾಟದ ಸ್ವಾಭಿಮಾನದ ಕಿಚ್ಚು ಇಲ್ಲದೆ ನಾವು ರಾಜಕೀಯ ಶಕ್ತಿಯಿಂದ ದೂರ ಉಳಿಯಬೇಕಾಗಿದೆ. ಸಮಾಜದ ಒಳಿತಿಗಾಗಿ ಸ್ವಾರ್ಥದ ಬದುಕು ತ್ಯಾಗ ಮಾಡಬೇಕು ಎಂದು  ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷರಾದ ಶರಣಪ್ಪ ಸಲಾದಪೂರ ಹೇಳಿದರು.

ಭೀಮರಾಯನಗುಡಿ ಕನಕ ನೌಕರಭವನದಲ್ಲಿ ಈಚೆಗೆ ಕನಕ ಯುವಸೇನೆಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಿಂದುಳಿದ ಸಮುದಾಯ ಆರ್ಥಿಕವಾಗಿ ಇನ್ನಿತರ ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿಯ ಸಾಧಿಸಲು ರಾಜಕೀಯ ಅಧಿಕಾರ ಉಳಿದೆಲ್ಲ ಅಧಿಕಾರಕ್ಕಿಂತ ಮುಖ್ಯ ಬೀಗದ ಕೈ ಇದ್ದಂತೆ. ನ್ಯಾಯ ಬ್ದ್ದದರಾಜಕೀಯ ಹಕ್ಕುಗಳನ್ನು ನಾವು ಇಂದು ಸಾಂಘಿ ಕ ಹೋರಾಟದ ಮೂಲಕ ಪಡೆಯುವ ಕಾಲ ಸನ್ನಿಹಿತವಾಗಿದೆ ಎಂದರು.

ಹಲವಾರು ಹಿಂದುಳಿದ ಆಯೋಗಗಳು ಸಲ್ಲಿಸಿದ ವರದಿಯ ಬಗ್ಗೆ ಪ್ರಜ್ಞಾವಂತ ಯುವಕರು ಅಧ್ಯಯನ ಮಾಡಬೇಕು. ಜ್ಞಾನದ ಸಂಪತ್ತು ನಮ್ಮ ವ್ಯಕ್ತಿತ್ವವನ್ನು ವಿಸ್ತರಿಸುವುದರ ಜೊತೆಯಲ್ಲಿ ಸಿನಿಕತನ ಮಾಯವಾಗಿ ಉದಾತ್ತ ಗುಣಗಳು ಮನೆ ಮಾಡುತ್ತವೆ. ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಸಮುದಾಯಕ್ಕೆ ಹೆಚ್ಚಿನ ಲಾಭವಾಗುತ್ತದೆ ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಗೌಡ ಪಾಟೀಲ್ ಹುಲಕಲ್ ಹೇಳಿದರು.

ಕುರುಬ ಸಮಾಜ ದೇಶದ ಸಾಹಿತ್ಯಕ್ಕೆ ಬಹುದೊಡ್ಡ ಕೊಡುಗೆ ನೀಡಿದೆ. ರಾಜಕೀಯ ಅಧಿಕಾರದಿಂದ ದೊರೆಯುವ ಸವಲತ್ತು ಹಾಗೂ ಅವಕಾಶಗಳು ಬಗ್ಗೆ ಯುಕರು ಮೊದಲು ಅರ್ಥೈಯಿಸಿಕೊಂಡು ಅರಿವಿನ ಚಿಲುಮೆಯನ್ನು ಹಳ್ಳಿಗಳಲ್ಲಿ ವಿಸ್ತರಿಸುತ್ತಾ ಸಾಗಿದರೆ ನಮಗೆ ಅಧಿಕಾರದ ಮೆಟ್ಟಿಲು ದೊರೆಯುವದರಲ್ಲಿ ಸಂಶಯವಿಲ್ಲವೆಂದು ಉಪನ್ಯಾಸಕ ಹೈಯ್ಯಾಳಪ್ಪ ಸುರಪುರಕರ್ ತಿಳಿಸಿದರು.

ಸಭೆಯ ಅಧ್ಯಕ್ಷತೆಯನ್ನು ತಿಂಥಣಿ ಬ್ರೀಜ್ ಕನಕಗುರುಪೀಠದ ಸಿದ್ದರಾಮನಂದ ಪುರಿ ಸ್ವಾಮೀಜಿ ಸಭೆ ಸಾನಿಧ್ಯವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷ ಗಿರೆಪ್ಪಗೌಡ ಬಾಣತಿಹಾಳ ವಹಿಸಿದ್ದರು.

ವೇದಿಕೆ ಮೇಲೆ ಸಮಾಜದ ಗಣ್ಯರಾದ ಬಸವರಾಜ ವಿಭೂತಿಹಳ್ಳಿ, ಶಿವಮಹಾಂತ ಚಂದಾಪೂರ, ಧರ್ಮಣ್ಣ ಹೋತಪೇಟ, ಜಿಲ್ಲಾ ಪಂಚಾಯಿತಿ ಸದಸ್ಯೆ ಶರಣಮ್ಮ ಆನಂದ ಸಾಹುಕಾರ, ಮಾಳಪ್ಪ ಪೂಜಾರಿ, ವೆಂಕಣ್ಣ ಮೇಟಿ, ರಂಗಣ್ಣಗೌಡ ದೇವಿಕೇರಿ, ಮಲ್ಲು ದಂಡಿನ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಯುವ ಪ್ರತಿಭೆಗಳಾದ ಡಾ.ಭೀಮಣ್ಣಮೇಟಿ, ಬಸವರಾಜ ಪಾಟೀಲ್ ಕೊಂಕಲ್, ಸಿದ್ದಪ್ಪ ಮೇಟಿ, ಡಾ.ಲಿಂಗರಾಜ ಮೂಲಿಮನಿ, ಹಣಮಂತರಾಯಗೌಡ ಹುಲಕಲ್, ಶ್ರೀಶೈಲ ಪೂಜಾರಿ, ಭೀಮರಾಯ ಮೂಲಿಮನಿ ಸನ್ಮಾನಿಸಿಲಾಯಿತು.

ಸ್ವಾಗತ ಮರೆಪ್ಪ ಇನಾಮದಾರ, ನಿರ್ವಹಣೆ ಶ್ರೀಶೈಲ್ ಬಿರೆದಾರ, ಗಿರೀಶ ಹಂಜಗಿ ವಂದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT