ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜಮುಖಿ ಚಿಂತನೆ ನಡೆಯಲಿ

Last Updated 24 ಜನವರಿ 2011, 9:55 IST
ಅಕ್ಷರ ಗಾತ್ರ

ಹಿರಿಯೂರು: ಅಂಧತ್ವ ನಿವಾರಣೆ ಮಾಡುವ ಕಾರ್ಯದಲ್ಲಿ ಸರ್ಕಾರೇತರ ಸಂಸ್ಥೆಗಳು ಸಲ್ಲಿಸುತ್ತಿರುವ ಸೇವೆ ಅವಿಸ್ಮರಣೀಯವಾದುದು ಎಂದು ತಹಶೀಲ್ದಾರ್ ಎನ್. ತಿಪ್ಪೇಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದಲ್ಲಿ ಭಾನುವಾರ ಮಾಜಿ ಪ್ರಧಾನಿ ಅಟಲ್‌ಬಿಹಾರಿ ವಾಜಪೇಯಿ ಅವರ ಜನ್ಮದಿನಾಚರಣೆ ಅಂಗವಾಗಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಜಿಲ್ಲಾ ಅಂಧತ್ವ ನಿವಾರಣಾ ಸಮಿತಿ, ನ್ಯೂಡೈಮಂಡ್ ಸ್ಪೋರ್ಟ್ಸ್ ಕ್ಲಬ್ ಹಾಗೂ ಸಾರ್ವಜನಿಕ ಆಸ್ಪತ್ರೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಐಒಎಲ್ ನೇತ್ರ ಶಸ್ತ್ರಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಇಲ್ಲದವರ ಪರವಾಗಿ ಉಳ್ಳವರು ಚಿಂತನೆ ಮಾಡುವುದು ಮಾನವೀಯತೆ ಇನ್ನೂ ಉಳಿದಿರುವುದರ ದ್ಯೋತಕ. ಪ್ರತಿಯೊಬ್ಬ ಈ ರೀತಿ ಸಮಾಜಮುಖಿ ಚಿಂತನೆ ಮಾಡಬೇಕು ಎಂದರು.ಇದೊಂದು ಅತ್ಯಂತ ಸರಳ ಶಸ್ತ್ರಚಿಕಿತ್ಸೆ ಆಗಿದ್ದು, ಶಸ್ತ್ರ ಚಿಕಿತ್ಸೆಗೆ ಒಳಗಾದವರು ವೈದ್ಯರ ಸಲಹೆಯಂತೆ ನಡೆದುಕೊಳ್ಳಬೇಕು ಎಂದು ನೇತ್ರತಜ್ಞ ಡಾ. ವಿಜಯಕುಮಾರ್ ತಿಳಿಸಿದರು.

ತಾ.ಪಂ. ಸದಸ್ಯ ಮಹಮದ್ ಫಕೃದ್ದೀನ್,  ಡಾ. ವೆಂಕಟಶಿವಾರೆಡ್ಡಿ  ಮಾತನಾಡಿದರು. ವೈ.ಎಸ್. ಅಶ್ವತ್ಥಕುಮಾರ್ ಅಧ್ಯಕ್ಷತೆ ವಹಿಸಿದ್ದರು.  ಡಾ.ಮೋಹನ್ ಕುಮಾರ್, ಡಾ.ಮಹಾಲಿಂಗಪ್ಪ, ಡಾ. ಶಾಂತಿಪ್ರಿಯ, ಡಾ.ರಂಗನಾಥ್, ಮಂಜುಳಾ ವೆಂಕಟೇಶ್, ಗಜೇಂದ್ರಶರ್ಮ, ಕೇಶವಮೂರ್ತಿ, ದೇವರಾಜಮೂರ್ತಿ, ಶಿವರಾಂ, ಎಂ.ಎನ್. ರಮೇಶ್, ರಾಜಶೇಖರ್, ಮಹಾಬಲೇಶ್ವರ ಶೆಟ್ಟಿ, ತ್ರಿಯಂಭಕೇಶ್ವರ್, ಪರಮೇಶ್ವರಾಚಾರ್, ಸತೀಶ್‌ಬಾಬು ಮತ್ತಿತರರು ಹಾಜರಿದ್ದರು. ಅಶೋಕ್‌ಕುಮಾರ್ ಸ್ವಾಗತಿಸಿದರು. ಗಜೇಂದ್ರ ಶರ್ಮ ವಂದಿಸಿದರು. ಎಂ.ಎಸ್. ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT