ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜಮುಖಿಯಾಗಲು ಶಿಕ್ಷಕರಿಗೆ ಸಲಹೆ

Last Updated 3 ಅಕ್ಟೋಬರ್ 2011, 7:50 IST
ಅಕ್ಷರ ಗಾತ್ರ

ಹೂವಿನಹಡಗಲಿ: ದೇಶದ ಪ್ರಗತಿಗೆ ಪೂರಕರಾಗಲು ಶಿಕ್ಷಕ ವೃತ್ತಿಯ ಜೊತೆಗೆ ಸಮಾಜ ಮುಖಿ ಚಿಂತನೆ ಗಳನ್ನು ಶಿಕ್ಷಕರು ಬೆಳೆಸಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪಾರಿ ಬಸವರಾಜ ಹೇಳಿದರು.

ಪಟ್ಟಣದ ಬೀಚಿ ಗ್ರಂಥಾಲಯ ಬೆಂಬಲಿಗರ ಬಳಗ ಮತ್ತು ಶಾಖಾ ಗ್ರಂಥಾಲಯದ ಸಹಯೋಗದಲ್ಲಿ ಆಯೋಜಿಸಲಾಗಿದ್ದ 13ನೇ ವಾರ್ಷಿಕ ಉತ್ತಮ ಶಿಕ್ಷಕ ಪ್ರಶಸ್ತಿ ಸಮಾರಂಭಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.

ಆಧುನಿಕ ಯುಗದ ದಿನಗಳಲ್ಲಿ ಶಿಕ್ಷಕರು ಹೆಚ್ಚು ಓದುವುದನ್ನು ರೂಢಿ ಸಿಕೊಳ್ಳುವ ಮೂಲಕ ಉತ್ತಮ ಗುಣಮಟ್ಟದ ಬೋಧನೆ ನೀಡಬೇಕು ಎಂದರು.ಸಾಹಿತಿ ಎನ್.ಎಂ.ಕೊಟ್ರೇಶ ಮಾತನಾಡಿ ಬದುಕಿಗೆ ಶಿಕ್ಷಣ ಬೇಕು ನೆಲ-ಜಲ ಉಳಿಸುವಂತಹ ಪರಿಸರ ಶಾಲಾ ಹಂತದಲ್ಲಿಯೇ ಬೆಳೆಯ ಬೇಕಾಗಿದೆ ಎಂದರು.

ಸಾಹಿತಿ ಎಚ್.ಶೇಷಗಿರಿರಾವ್, ಎಚ್.ಎಂ.ಬೆಟ್ಟಯ್ಯ, ಬೆಲ್ಲದ ಕೊಟ್ರಪ್ಪ, ತೋ.ಮ.ಶಂಕ್ರಯ್ಯ, ಬಸವರಾಜ ಕೊಳ್ಳಿ ಉಪಸ್ಥಿತರಿದ್ದರು.ಬೀಚಿ ಗ್ರಂಥಾಲಯ ಬೆಂಬಲಿಗರ ಬಳಗದ ಅಧ್ಯಕ್ಷ ತವನಪ್ಪ ಅಧ್ಯಕ್ಷತೆ ವಹಿಸಿದ್ದರು.

2011ನೇ ಸಾಲಿನ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಉಪನಾಯಕನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಎಚ್.ಶಂಕ್ರಪ್ಪ ಹಾಗೂ ಸೋವೆನಹಳ್ಳಿಯ ಎಂ.ಎಂ.ಜೆ. ಪ್ರೌಢ ಶಾಲೆಯ ವೈ.ಎಂ. ಪರಮೇಶ್ವರಯ್ಯ ಶಿಕ್ಷಕರಿಗೆ ನೀಡಿ ಗೌರವಿಸಲಾಯಿತು.

ದ್ವಾರಕೇಶ ಸಂಗಡಿಗರು ಕ್ರಾಂತಿ ಗೀತೆ ಹಾಡಿದರು. ಎಲ್.ಖಾದರ್ ಬಾಷಾ ಸ್ವಾಗತಿಸಿದರು. ಸುರೇಶ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಬೆಟಗೇರಿ ನಿರೂಪಿಸಿದರು. ನಾಗರಾಜ ಮಲ್ಕಿ ಒಡೆಯರ್ ವಂದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT