ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜವಾದಿ ಗರ್ಭಗುಡಿ ಪ್ರವೇಶಿಸಲು ದೊರಕದ ಅವಕಾಶ: ಕೃಷ್ಣ

Last Updated 23 ಅಕ್ಟೋಬರ್ 2011, 19:45 IST
ಅಕ್ಷರ ಗಾತ್ರ

ಬೆಂಗಳೂರು: `ನಾನು ಸಮಾಜವಾದಿ ಚಿಂತಕರ ಚಾವಡಿಯ ಹೊರವಲಯದಲ್ಲಿದ್ದವನು. ಸಮಾಜವಾದಿ ದೇವಾಲಯದ ಗರ್ಭಗುಡಿಯ ಒಳಗೆ ಪ್ರವೇಶ ಪಡೆಯಲು ಅವಕಾಶ ದೊರೆಯಲಿಲ್ಲ~ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಎಂ. ಕೃಷ್ಣ ಹೇಳಿದರು.

ಸಮಾಜವಾದಿ ಅಧ್ಯಯನ ಕೇಂದ್ರವು ನಗರದ ಸೆಂಟ್ರಲ್ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾಜವಾದಿ ನಾಯಕ ಅಶೋಕ ಮೆಹತಾ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಹಲವು ಜನಪರ ಯೋಜನೆಗಳನ್ನು ರೂಪಿಸುವಲ್ಲಿ ಮುಂಚೂಣಿಯಲ್ಲಿದ್ದ ಅಶೋಕ ಮೆಹತಾ ಅವರ ದೂರದರ್ಶಿತ್ವ ಮತ್ತು ಚಾಣಾಕ್ಷತನದಿಂದ ಪ್ರಸಿದ್ಧಿಯಾಗಿದ್ದರು. ಅವರು ಹಾಕಿಕೊಟ್ಟ ಮೇಲ್ಪಂಕ್ತಿಯನ್ನು ಪ್ರಸ್ತುತ ರಾಜಕಾರಣಿಗಳು ಅನುಸರಿಸುತ್ತಿಲ್ಲ~ ಎಂದು ಖೇದ ವ್ಯಕ್ತಪಡಿಸಿದರು.

`ಸಮಾಜವಾದಿ ಪಕ್ಷವು ಸಮಾನತೆ ಮತ್ತು ಸ್ವಾಂತಂತ್ರ್ಯವನ್ನು ಮೂಲ ಧ್ಯೇಯವಾಗಿಸಿಕೊಂಡಿರುವುದು ಮಾತ್ರವಲ್ಲ, ಬದ್ದತೆಯನ್ನೂ ಉಳಿಸಿಕೊಂಡಿತ್ತು. ಆದರೆ ಸಮಾಜವಾದಿ ಪಕ್ಷದ ಅಂದಿನ ಕಾರ್ಯಕರ್ತರಲ್ಲಿ ಸೈದ್ದಾಂತಿಕ ಭಿನ್ನಾಭಿಪ್ರಾಯಗಳಿದ್ದವು~ ಎಂದರು.

ಇದೇ ಸಂದರ್ಭದಲ್ಲಿ ಅಶೋಕ ಮೆಹತಾ ಕುರಿತು ಕಿರು ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ಶಾಸಕರಾದ ವಿ.ಆರ್.ಸುದರ್ಶನ್, ನೆ.ಲ.ನರೇಂದ್ರಬಾಬು ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT