ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾನ ಮನಸ್ಸಿದ್ದರೆ ನಾಟಕ ಯಶಸ್ವಿ

Last Updated 12 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು:  `ನಟ, ನಿರ್ದೇಶಕ, ಪ್ರೇಕ್ಷಕರು ಸಮಾನ ಮನಸ್ಕರಾಗಿದ್ದರೆ ಮಾತ್ರ ಯಾವುದೇ ಒಂದು ನಾಟಕ ಯಶಸ್ವಿಯಾಗಲು ಸಾಧ್ಯವಾಗುತ್ತದೆ~ ಎಂದು ಸಾಹಿತಿ ಮಾಸ್ಕೇರಿ ಎಂ.ಕೆ.ನಾಯಕ್ ಹೇಳಿದರು.

ತಾಂಡವ ಕಲಾನಿಕೇತನವು ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ತಾಂಡವೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. `ಕಲೆಯನ್ನು ಆರಾಧಿಸುವ ಕಲಾವಿದ ಮತ್ತು ಅದನ್ನು ಸಂಘಟಿಸುವ ಸಂಘಟಕರಿಗೆ ಕಲೆಯನ್ನು ಗುರುತಿಸುವ ಸಹೃದಯವಾದ ಮನಸ್ಸುಗಳು ಬೇಕು. ಆಗಲೇ ಒಂದು ಕಲೆಯು ಯಶಸ್ವಿಯಾಗಲು ಸಾಧ್ಯವಾಗುತ್ತದೆ~ ಎಂದರು.

ಅಕಾಡೆಮಿಕ್ಸ್ ಮತ್ತು ಪೆಡ್‌ಗೋಜಿ ಅಜೀಂ ಪ್ರೇಮ್‌ಜೀ ವಿಶ್ವವಿದ್ಯಾಲಯದ ಮುಖ್ಯಸ್ಥ ಅರುಣ್ ಎಲ್.ನಾಯ್ಕ ಮಾತನಾಡಿ, `ಕಲೆ ಮತ್ತು ಶಿಕ್ಷಣದ ಗುರಿ ಒಬ್ಬ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುವುದೇ ಆಗಿದೆ. ಒಬ್ಬ ಕಲಾವಿದ ಬರೀ ಕೇವಲ ಕಲೆಯಲ್ಲಿ ಮಾತ್ರ ಪ್ರಭುತ್ವವನ್ನು ಸಾಧಿಸದೆ, ಜೀವನ, ವಿಚಾರವಂತಿಕೆಯಲ್ಲಿಯೂ ಪ್ರಭುತ್ವವನ್ನು ಸಾಧಿಸುತ್ತಾನೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT