ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮುದ್ರದಲ್ಲಿ ಇಳಿದ ಪ್ರಯಾಣಿಕ ವಿಮಾನ

Last Updated 13 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ದೆನ್‌ಪಾಸರ್ (ಇಂಡೊನೇಷ್ಯಾ)   (ಎಎಫ್‌ಪಿ):  ವಿಮಾನವೊಂದು ರನ್‌ವೇ ಬದಲು ಸೀದಾ ಸಮುದ್ರದಲ್ಲಿ ಇಳಿದರೂ, ಅದರಲ್ಲಿದ್ದ ನೂರಕ್ಕೂ ಹೆಚ್ಚು ಪ್ರಯಾಣಿಕರು ಮಾತ್ರ ಪವಾಡಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾದರು. ಈ ಘಟನೆ ನಡೆದದ್ದು ಶನಿವಾರ ಇಂಡೊನೇಷ್ಯಾದ ಬಾಲಿಯ ದೆನ್‌ಪಾಸರ್‌ನಲ್ಲಿ.

ದೆನ್‌ಪಾಸರ್ ನಿಲ್ದಾಣದಲ್ಲಿ ಇಳಿಯಬೇಕಿದ್ದ `ಲಯನ್ ಏರ್' ಸಂಸ್ಥೆಯ ವಿಮಾನ, ರನ್ ವೇ ಬದಲು ಸೀದಾ ಸಮುದ್ರದತ್ತ ನುಗ್ಗಿ ಭಾಗಶಃ ಮುಳುಗಿತು. ಈ ಆಘಾತಕ್ಕೆ ವಿಮಾನದ ಮಧ್ಯ ಭಾಗ ಸೀಳು ಬಿಟ್ಟಿತು. ಅದರಲ್ಲಿ ಏಳು ಚಾಲಕ ಸಿಬ್ಬಂದಿ ಮತ್ತು 101 ಪ್ರಯಾಣಿಕರಿದ್ದರು. 45 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ' ಎಂದು ಸಾರಿಗೆ ಸಚಿವಾಲಯದ ಅಧಿಕಾರಿ ಹ್ಯಾರಿ ಭಕ್ತಿ ತಿಳಿಸಿದ್ದಾರೆ.

ಈ ವಿಮಾನವು ಪಶ್ಚಿಮ ಜಾವಾದ ಬಂದುಂಗ್‌ನಿಂದ ಬಾಲಿಗೆ ಬರುತ್ತಿತ್ತು. ವಿಮಾನ ಇಳಿಯುವಾಗ ಮೋಡ ಕವಿದ ವಾತಾವರಣ ಇದ್ದು, ತುಂತುರು ಮಳೆಯಾಗುತ್ತಿತ್ತು ಎಂದೂ ತಿಳಿಸಿದ್ದಾರೆ.

ದುರ್ಘಟನೆಯಿಂದ ಕಂಗಾಲಾದ ಪ್ರಯಾಣಿಕರು ಜೀವರಕ್ಷಕ ಕವಚಗಳನ್ನು ತೊಟ್ಟು ಸುರಕ್ಷಿತವಾಗಿ ದಡಕ್ಕೆ ಬಂದರು. `ರನ್ ವೇಗೆ ಬರುತ್ತಿದ್ದ ವಿಮಾನ ಇದ್ದಕ್ಕಿದ್ದಂತೆ ಸಮುದ್ರದಲ್ಲಿ ಬಿತ್ತು. ಭಯಭೀತರಾದ ನಾವೆಲ್ಲರೂ ಜೋರಾಗಿ ಚೀರಿಕೊಂಡೆವು' ಎಂದು ಪ್ರಯಾಣಿಕರೊಬ್ಬರು ಹೇಳಿದ್ದಾರೆ.

  ಈ ವಿಮಾನ 2012ರಿಂದ ಸೇವೆಯಲ್ಲಿತ್ತು ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT