ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಕು ಸಾಗಣೆ ಹಡಗು ಛಿದ್ರ

Last Updated 8 ಜನವರಿ 2012, 19:30 IST
ಅಕ್ಷರ ಗಾತ್ರ

ವೆಲ್ಲಿಂಗ್ಟನ್ (ಎಎಫ್‌ಪಿ): ಜರ್ಜರಿತವಾಗಿ ಸಮುದ್ರ ದಂಡೆಯಲ್ಲಿ ನೆಲಕಚ್ಚಿದ್ದ `ರೆನಾ~  ಹೆಸರಿನ ಸರಕು ಸಾಗಣೆ ಹಡಗು ಬಿರುಗಾಳಿಯ ಹೊಡೆತಕ್ಕೆ ಸಿಲುಕಿ ಎರಡು ಪಾಲಾಗಿ ಒಡೆದಿರುವ ಘಟನೆ ಭಾನುವಾರ ಸಂಭವಿಸಿದೆ.

ಈ ಹಡಗು ಮೂರು ತಿಂಗಳ ಹಿಂದೆಯೇ ನ್ಯೂಜಿಲೆಂಡ್‌ನ ಉತ್ತರಕ್ಕಿರುವ ದ್ವೀಪವೊಂದರಲ್ಲಿ ನೆಲಕಚ್ಚಿತ್ತು. ಇದರಿಂದ ಅನಿಲ ಸೋರಿಕೆ ಆಗಿ ಸಾಕಷ್ಟು ಪರಿಸರ ಮಾಲಿನ್ಯ ಉಂಟಾಗಿತ್ತು ಮತ್ತು 1,300ಕ್ಕೂ ಹೆಚ್ಚು ಹಕ್ಕಿಗಳು ಸಾವನ್ನಪ್ಪಿದ್ದವು. ಈಗ ಇದು ಎರಡು ಪಾಲಾಗಿರುವುದರಿಂದ ಮತ್ತಷ್ಟು ಮಾಲಿನ್ಯಕ್ಕೆ ಕಾರಣವಾಗಿ, ವನ್ಯಜೀವಿಗಳಿಗೆ ಕಂಟಕವಾಗಬಹುದು ಎಂಬ ಆತಂಕ ಎದುರಾಗಿದೆ.

ಅನಿಲ ಸೋರಿಕೆ ನಿಯಂತ್ರಣ ಮತ್ತು ವನ್ಯಜೀವಿಗಳ ವಿಷಯ ತಜ್ಞರ ತಂಡವು ಜಹಜು ತುಂಡಾದ ಸ್ಥಳಕ್ಕೆ ಧಾವಿಸಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT