ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಣಿ ಗೆದ್ದ ಆಸೀಸ್ ಬಳಗ

Last Updated 30 ಜನವರಿ 2011, 17:40 IST
ಅಕ್ಷರ ಗಾತ್ರ

ಬ್ರಿಸ್ಬೇನ್ (ಎಎಫ್‌ಪಿ):  ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ವಿರುದ್ಧದ ಐದನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ 51 ರನ್‌ಗಳ ಜಯ ಸಾಧಿಸಿತು. ಈ ಮೂಲಕ ಏಳು ಪಂದ್ಯಗಳ ಸರಣಿ ಯನ್ನು 4-1 ರಲ್ಲಿ ತನ್ನದಾಗಿಸಿಕೊಂಡಿತು.

ಗಾಬಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 49.3 ಓವರ್‌ಗಳಲ್ಲಿ 249 ರನ್ ಗಳಿಸಿದರೆ, ಇಂಗ್ಲೆಂಡ್ 45.3 ಓವರ್‌ಗಳಲ್ಲಿ 198 ರನ್‌ಗಳಿಗೆ ಆಲೌಟಾಯಿತು.

ಇನ್ನೂ ಎರಡು ಪಂದ್ಯಗಳು ಉಳಿದಿರುವಂತೆಯೇ ಸರಣಿ ಗೆದ್ದ ಆಸ್ಟ್ರೇಲಿಯಾ ತಂಡ ಆ್ಯಷಸ್ ಟೆಸ್ಟ್ ಸರಣಿಯಲ್ಲಿ ತನಗೆ ಎದುರಾದ ಸೋಲಿಗೆ ಮುಯ್ಯಿ ತೀರಿಸಿಕೊಂಡಿದೆ.

ಗೆಲುವಿಗೆ ಸಾಧಾರಣ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಆರಂಭದಲ್ಲೇ ಆಘಾತ ಅನುಭವಿಸಿತು. 22 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡ ತಂಡ ಬಳಿಕ ಚೇತರಿಸಿಕೊಳ್ಳಲಿಲ್ಲ. ಕೆವಿನ್ ಪೀಟರ್‌ಸನ್ (40), ಇಯಾನ್ ಬೆಲ್ (36) ಮತ್ತು ಕೊನೆಯಲ್ಲಿ ಸ್ಟೀವನ್ ಫಿನ್ (35) ಮಾತ್ರ ಅಲ್ಪ ಹೋರಾಟ ನಡೆಸಿದರು.
25 ರನ್‌ಗಳಿಗೆ ಮೂರು ವಿಕೆಟ್ ಪಡೆದ ಶೇನ್ ವ್ಯಾಟ್ಸನ್ ಮತ್ತು ತಲಾ ಎರಡು ವಿಕೆಟ್ ಪಡೆದ ಬ್ರೆಟ್ ಲೀ, ಡಗ್ ಬೋಲಿಂಜರ್ ಹಾಗೂ ಜಾನ್ ಹೇಸ್ಟಿಂಗ್ಸ್ ಅವರು ಆಸೀಸ್ ಗೆಲುವಿನ ಹಾದಿ ಸುಗಮಗೊಳಿಸಿ ದರು.

ಮೊದಲು ಬ್ಯಾಟ್ ಮಾಡಿದ ಆಸೀಸ್ ತಂಡ ‘ಪಂದ್ಯಶ್ರೇಷ್ಠ’ ಕ್ರಿಸ್ ವೋಕ್ಸ್ (45ಕ್ಕೆ 6) ಅವರ ದಾಳಿಯನ್ನು ಮೆಟ್ಟಿನಿಂತು ಸವಾಲಿನ ಮೊತ್ತ ಪೇರಿಸಲು ಯಶಸ್ವಿಯಾಯಿತು. ನಾಯಕ ಮೈಕಲ್ ಕ್ಲಾರ್ಕ್ (74 ಎಸೆತಗಳಲ್ಲಿ 54) ಅವರು ಟಾಪ್ ಸ್ಕೋರರ್ ಎನಿಸಿಕೊಂಡರು.

ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ: 49.3 ಓವರ್‌ಗಳಲ್ಲಿ 249 (ಮೈಕಲ್ ಕ್ಲಾರ್ಕ್ 54, ಬ್ರಾಡ್ ಹಡಿನ್ 37, ಡೇವಿಡ್ ಹಸ್ಸಿ 34, ಕ್ರಿಸ್ ವೋಕ್ಸ್ 45ಕ್ಕೆ 6). ಇಂಗ್ಲೆಂಡ್: 45.3 ಓವರ್‌ಗಳಲ್ಲಿ 198 (ಕೆವಿನ್ ಪೀಟರ್‌ಸನ್ 40, ಇಯಾನ್ ಬೆಲ್ 36, ಸ್ಟೀವನ್ ಫಿನ್ 35, ಶೇನ್ ವ್ಯಾಟ್ಸನ್ 25ಕ್ಕೆ 3, ಬ್ರೆಟ್ ಲೀ 21ಕ್ಕೆ 2).
ಫಲಿತಾಂಶ: ಆಸ್ಟ್ರೇಲಿಯಾಕ್ಕೆ 51 ರನ್ ಗೆಲುವು; ಏಳು ಪಂದ್ಯಗಳ ಸರಣಿಯಲ್ಲಿ 4-1ರ ಮುನ್ನಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT