ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಿನ್‌ ವಿಷಾನಿಲ ಬಳಕೆ: ವಿಶ್ವಸಂಸ್ಥೆ ತಂಡದ ವರದಿ

Last Updated 17 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ (ಎಎಫ್‌ಪಿ):  ಸಿರಿಯಾ­ವನ್ನು ರಾಸಾಯನಿಕ ಅಸ್ತ್ರ ಮುಕ್ತ ರಾಷ್ಟ್ರವನ್ನಾಗಿಸಲು ಪಾಶ್ಚಿಮಾತ್ಯ ದೇಶಗಳು ವಿಶ್ವಸಂಸ್ಥೆಯಲ್ಲಿ ಗೊತ್ತುವಳಿ ಅಂಗೀಕರಿಸಲು ಕಸರತ್ತು ನಡೆಸಿವೆ.

ಆಗಸ್ಟ್‌ 21ರಂದು ಸಿರಿಯಾದಲ್ಲಿ ನಡೆದ ದಾಳಿಯಲ್ಲಿ ವಿಷಕಾರಕ ಸರಿನ್‌ ಅನಿಲವನ್ನು ಬಳಸಲಾಗಿದೆ ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ  ಮಂಡಿಸಲಾದ ಸತ್ಯ ಶೋಧನಾ ತಂಡದ ವರದಿಯಲ್ಲಿ ಹೇಳಲಾಗಿದೆ.

ರಾಸಾಯನಿಕ ಅಸ್ತ್ರವನ್ನು ಯಾರು ಪ್ರಯೋಗಿಸಿದ್ದರು ಎನ್ನುವುದನ್ನು ವಿಶ್ವ­ಸಂಸ್ಥೆ ತಜ್ಞರು ಖಚಿತಪಡಿಸಿಲ್ಲ. ಆದರೆ ದಾಳಿ ನಡೆದಿರುವುದಕ್ಕೆ ಸಾಕಷ್ಟು ಪುರಾವೆ­­ಗಳು ಇವೆ ಎಂದಷ್ಟೇ ಹೇಳಿ­ದ್ದಾರೆ.

‘ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ರಾಸಾಯನಿಕ ಅಸ್ತ್ರಗಳನ್ನು ಪ್ರಯೋಗಿ­ಸಿದ್ದನ್ನು ನೋಡಿದರೆ ಇದು ಸಿರಿಯಾ ಸರ್ಕಾರದ ಕೈವಾಡ ಇದ್ದಿರಬಹುದು ಎನಿಸುತ್ತದೆ’ ಎಂದು ವಿಶ್ವಸಂಸ್ಥೆ ರಾಯಭಾರಿ ಸಮಂತಾ ಪವರ್‌ ಹೇಳಿದ್ದಾರೆ.

  ‘ ಸಿರಿಯಾ ಸರ್ಕಾರವೇ ಈ ದಾಳಿ ನಡೆಸಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ’ ಎಂದು ಫ್ರಾನ್ಸ್‌ ವಿದೇಶಾಂಗ ಸಚಿವ ಲೌರೆಂಟ್‌ ಫ್ಯಾಬಿಯಸ್‌ ಅಭಿಪ್ರಾಯ­ಪಟ್ಟಿದ್ದಾರೆ.

  ‘ಇದು ಸಿರಿಯಾ ಸರ್ಕಾರದ ಕೆಲಸ ಎನ್ನುವುದನ್ನು ತಜ್ಞರ ವರದಿಯು ಸಾಬೀತು ಪಡಿಸಿದೆ’ ಎಂದು ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ವಿಲಿಯಂ  ಹೇಗ್‌ ಹೇಳಿದ್ದಾರೆ.

ಅಸಾದ್‌ ಅವರು ಸಿರಿಯಾದಲ್ಲಿ ನಿಶ್ಯಸ್ತ್ರೀಕರಣ ಯೋಜನೆ ಕೈಗೊಳ್ಳ­ದಿದ್ದರೆ ಆ ದೇಶದ ವಿರುದ್ಧ ಆರ್ಥಿಕ ನಿರ್ಬಂಧ ಹೇರುವಂತೆ ಒತ್ತಾಯಿಸಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳಿಗೆ ಫ್ರಾನ್ಸ್‌ ಹಾಗೂ ಬ್ರಿಟನ್‌ ಶೀಘ್ರವೇ  ಕರಡು ನಿರ್ಣಯ ಕಳಿಸಲಿವೆ.
ಈ ವಿಷಯಕ್ಕೆ ಸಂಬಂಧಿಸಿ ಭದ್ರತಾ ಮಂಡಳಿಯು ಈವಾರದಲ್ಲಿ ಮಾತುಕತೆ ನಡೆಸುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT