ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಿಯಾದ ಬಸ್ ವ್ಯವಸ್ಥೆ ಇಲ್ಲ

ಅಕ್ಷರ ಗಾತ್ರ

ಹಾರೋಹಳ್ಳಿ ಘಟಕದಿಂದ ಮಾರ್ಗ ಸಂಖ್ಯೆ 75ರ ಬಸ್ ಕಾರ್ಯಾಚರಣೆಯಾಗುತ್ತಿದ್ದು ಈ ಮಾರ್ಗದಲ್ಲಿ ದಿನಕ್ಕೆ ಸುಮಾರು 16,000ದಿಂದ 17,000 ಸಾವಿರ ಸಾರಿಗೆ ಆದಾಯ ಬರುತ್ತಿರುವುದಾಗಿ ತಿಳಿದುಬಂದಿದೆ. ಆದರೂ ಘಟಕದ ಮುಖ್ಯ ಅಧಿಕಾರಿಗಳು ಮತ್ತು ಸಂಚಾರಿ ಶಾಖೆಯ ಸಿಬ್ಬಂದಿಗಳು ಈ ಮಾರ್ಗದಲ್ಲಿ ಸರಿಯಾದ ಸಮಯಕ್ಕೆ ವಾಹನವನ್ನು ನೀಡದೆ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗುತ್ತಿದೆ. 

  ಈ ಮಾರ್ಗದಲ್ಲಿ ಬರುವ ವಾಹನ ವಾರದಲ್ಲಿ 3 ದಿನ ಬಂದರೆ ಇನ್ನುಳಿದ 4 ದಿನ ಬರುವುದಿಲ್ಲ ಈ ವಿಚಾರವಾಗಿ ಪ್ರಯಾಣಿಕರು ಚಾಲಕ ಮತ್ತು ನಿರ್ವಾಹಕರನ್ನು ವಿಚಾರಿಸಿದಾಗ ಅವರು ತಮಗೆ ಬೇಕಾದ ಮಾರ್ಗ ಮತ್ತು ಬಸ್ ಪಡೆಯಲು ಘಟಕದ ಅಧಿಕಾರಿಗಳಿಗೆ ಹಣ ನೀಡಬೇಕು. ಇಲ್ಲವಾದಲ್ಲಿ ಅಧಿಕಾರಿಗಳು ತಮ್ಮ ಮನ ಬಂದಂತೆ ವಾಹನ ನೀಡುತ್ತಾರೆಂದು ಹೇಳುತ್ತಾರೆ. ಮಾರ್ಗ ಸಂಖ್ಯೆ 75ಕ್ಕೆ ನೀಡಿರುವ ವಾಹನಕ್ಕೆ ಸರಿಯಾದ ಆಸನ ಕಿಟಕಿ ವ್ಯವಸ್ಥೆ ಕೂಡ ಇಲ್ಲ. ಕೆಲವೊಮ್ಮೆ ರಸ್ತೆ ಮಧ್ಯೆ ಕೆಟ್ಟುನಿಂತು ಹೋಗುತ್ತದೆ.  

  ಈ ಬಗ್ಗೆ ಘಟಕದ ವ್ಯವಸ್ಥಾಪಕರನ್ನು ಮತ್ತು ಹಾರೋಹಳ್ಳಿ ನಿಲ್ದಾಣದ ಸಂಚಾರಿ ನಿಯಂತ್ರಕರನ್ನು ಸಂಪರ್ಕಿಸಿದಾಗ ಬೇಜವಾಬ್ದಾರಿತನದಿಂದ ಉತ್ತರಿಸುತ್ತಾರೆ. ಆದ್ದರಿಂದ ಮಾರ್ಗ ಸಂಖ್ಯೆ 75ಕ್ಕೆ ಸರಿಯಾದ ಮತ್ತು ಉತ್ತಮ ಗುಣಮಟ್ಟದ ವಾಹನವನ್ನು ನಿಯೋಜನೆ ಮಾಡಬೇಕು ಮತ್ತು ವಾರದ ಎಲ್ಲಾ ದಿನಗಳಲ್ಲಿ ಸಂಚರಿಸುವಂತೆ ಘಟಕ ವ್ಯವಸ್ಥಾಪಕರಿಗೆ ಮತ್ತು ನಿಲ್ದಾಣದ ಸಂಚಾರ ನಿಯಂತ್ರಕರ ವಿರುದ್ಧ ಕ್ರಮ ಕೈಗೊಂಡು ಸೂಕ್ತ ಮಾರ್ಗದರ್ಶನ ನೀಡಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ.
-

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT